ನೀವೇ ನಮ್ಮ ಪ್ರಧಾನಿಯಾಗಬೇಕಿತ್ತು ಎಂದು ಸಚಿವೆ ಸುಷ್ಮಾಗೆ ಆ ಮಹಿಳೆ ಹೇಳಿದ್ದೇಕೆ?

NewDelhi, ಶುಕ್ರವಾರ, 28 ಜುಲೈ 2017 (11:11 IST)

Widgets Magazine

ನವದೆಹಲಿ: ಕಷ್ಟದಲ್ಲಿರುವವರ ನೆರವಿಗೆ ಬರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಜಪ್ರಿಯತೆ ವಿದೇಶದಲ್ಲೂ ಹೆಚ್ಚುತ್ತಿದೆ. ಇದೀಗ ಪಾಕಿಸ್ತಾನದ ಮಹಿಳೆಯೊಬ್ಬರು ನೀವೇ ನಮ್ಮ ಪ್ರಧಾನಿಯಾಗಿರಬೇಕಿತ್ತು ಎಂದು ಹೇಳಿ ಭಾರೀ ಸುದ್ದಿಯಾಗಿದ್ದಾರೆ.


 
ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಉದ್ದೇಶಿಸಿರುವ ಪಾಕಿಸ್ತಾನಿ ನಾಗರಿಕರೊಬ್ಬರ ನೆರವಿಗೆ ಬರುವಂತೆ ಸುಷ್ಮಾ ಸ್ವರಾಜ್  ಅಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಟ್ವಿಟರ್ ಮೂಲಕವೇ ಆದೇಶಿಸಿದ್ದು ನೋಡಿ ಪಾಕ್ ಮೂಲದ ಮಹಿಳೆ ಹಿಜಾಬ್ ಆಸಿಫ್ ಸುಷ್ಮಾಗೆ ಪ್ರಶಂಸೆಯ ಸುರಿಮಳೆಗೈದಿದ್ದಾರೆ.
 
‘ನಿಮ್ಮನ್ನು ನಾನು ಏನಂಥ ಕರೆಯಲಿ? ಸೂಪರ್ ವುಮನ್ ಎನ್ನಲೇ? ನಿಮ್ಮ ಸಂದೇಶ ನೋಡಿ ನನಗೆ ಕಣ್ಣೀರು ನಿಯಂತ್ರಿಸಲಾಗಲಿಲ್ಲ. ನೀವು ನಮ್ಮ ದೇಶದ ಪ್ರಧಾನಿಯಾಗಬೇಕಿತ್ತು. ಆದರೆ ಪಾಕಿಸ್ತಾನ ನಿಮ್ಮಂಥ ಮಹಿಳೆಯನ್ನು ಪ್ರಧಾನಿಯಾಗಿ ಪಡೆಯುವಷ್ಟು ಯೋಗ್ಯತೆ ಹೊಂದಿಲ್ಲ. ನಿಮ್ಮಂಥವರು ಪ್ರಧಾನಿಯಾಗಿದ್ದರೆ ಪಾಕ್ ಯಾವತ್ತೋ ಸುಧಾರಿಸುತ್ತಿತ್ತು’ ಎಂದು ಬಹಿರಂಗವಾಗಿಯೇ ಟ್ವಿಟರ್ ನಲ್ಲಿ ಆಸಿಫ್ ಸುಷ್ಮಾರನ್ನು ಹೊಗಳಿದ್ದಾಳೆ.
 
ಇದನ್ನೂ ಓದಿ..  ಬಿಹಾರ ರಾಜಕೀಯದಲ್ಲಿ ಮತ್ತೆ ಹೈಡ್ರಾಮಾ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಸುಷ್ಮಾ ಸ್ವರಾಜ್ ಪಾಕಿಸ್ತಾನ ಮಹಿಳೆ ಟ್ವಿಟರ್ ಅಂತಾರಾಷ್ಟ್ರೀಯ ಸುದ್ದಿಗಳು Twitter Pakisthan Women Sushma Swaraj International News

Widgets Magazine

ಸುದ್ದಿಗಳು

news

ಬಿಹಾರ ರಾಜಕೀಯದಲ್ಲಿ ಮತ್ತೆ ಹೈಡ್ರಾಮಾ

ಪಾಟ್ನಾ: ಆರ್ ಜೆಡಿಗೆ ಸಡ್ಡು ಹೊಡೆದು ಬಿಜೆಪಿ ಜತೆ ಸಖ್ಯ ಬೆಳೆಸಿ ಸರ್ಕಾರ ರಚಿಸಿರುವ ಜೆಡಿಯು ನಾಯಕ ಸಿಎಂ ...

news

ಪರಪ್ಪನ ಅಗ್ರಹಾರ ಕರ್ಮಕಾಂಡಕ್ಕೆ ಬಿಗ್ ಟ್ವಿಸ್ಟ್!

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ನಡೆಯುತ್ತಿದೆ ಮತ್ತು ಶಶಿಕಲಾ ನಟರಾಜನ್ ರಿಂದ ಲಂಚ ...

news

2002 ರಲ್ಲಿ ಭಾರತ ವಿರುದ್ಧ ಅಣ್ವಸ್ತ್ರ ಪ್ರಯೋಗಿಸಲು ಪ್ಲ್ಯಾನ್ ಮಾಡಿದ್ದ ಮುಷರಫ್!

ಲಾಹೋರ್: ಕಾರ್ಗಿಲ್ ಯುದ್ಧ ಹೇರಲು ಪ್ರಮುಖ ಕಾರಣರಾಗಿದ್ದ ಪಾಕಿಸ್ತಾನದ ಅಂದಿನ ಮಿಲಿಟರಿ ಮುಖ್ಯಸ್ಥ ಹಾಗೂ ...

news

ರಸ್ತೆಯಲ್ಲೇ ಪೊಲೀಸಪ್ಪನಿಗೆ ಮಹಿಳೆಯ ಕಿಸ್ಸಿಂಗ್..!

ಕೋಲ್ಕೊತ್ತಾ: ಒಳಗೆ ಸೇರಿದರೆ ಗುಂಡು ಎಂದು ಮಾಲಾಶ್ರೀ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದನ್ನು ನಾವು ...

Widgets Magazine