ಡೊನಾಲ್ಡ್ ಟ್ರಂಪ್ ಜೊತೆಗಿನ ಸೆಲ್ಫಿ ಈ ದಂಪತಿಗಳ ವಿಚ್ಛೇದನಕ್ಕೆ ಕಾರಣವಾಯ್ತು..!

ಫ್ಲೋರಿಡಾ, ಸೋಮವಾರ, 31 ಜುಲೈ 2017 (13:38 IST)

ಫ್ಲೋರಿಡಾ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಸೆಲ್ಫಿಯೊಂದು ದಂಪತಿಗಳಿಬ್ಬರ ವಿಚ್ಚೇದನಕ್ಕೆ ಕಾರಣವಾಗಿದೆಯಂತೆ. ಹೀಗೂ ಆಗುತ್ತಾ ಅಂತೀರಾ. ನಿಜ ಕಣ್ರಿ. ಫ್ಲೋರಿಡಾದ ಲಿನ್ ಹಾಗೂ ಡೇವ್ ಅರೋನ್ಬರ್ಗ್ ದಂಪತಿ ಇದೇ ಕಾರಣಕ್ಕಾಗಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಇವರ ಡೈವೋರ್ಸ್ ವಿಚಾರ ಭಾರೀ ಸುದ್ದಿಯಾಗಿದೆ.
 
ಲಿನ್ ಅರೋನ್ಬರ್ಗ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪಕ್ಕಾ ಅಭಿಮಾನಿಯಂತೆ. ಇದೇ ಹುಚ್ಚು ಅಭಿಮಾನದಿಂದ ಆಕೆ ತನ್ನ ಪತಿಯಿಂದ ದೂರವಾಗಿದ್ದಾಳಂತೆ. ಲಿನ್ ಹಾಗೂ ಡೇವ್  2015ರಲ್ಲಿ ಪ್ರೀತಿಸಿ ಮದುವೆಯಾಗಿದ್ರು. ಇಬ್ಬರೂ ಹೈ ಪ್ರೊಫೈಲ್ಡ್  ಲಿನ್, ಮಿಯಾಮಿ ಡಾಲ್ಫಿನ್ಸ್ ನ ಮಾಜಿ ಚಿಯರ್ ಲೀಡರ್. ಆಕೆಯ ಪತಿ ಡೇವ್ ಪಾಮ್ ಬೀಚ್ ಕಂಟ್ರಿಯ ಜನಪ್ರಿಯ ಪ್ರಾಸಿಕ್ಯೂಟರ್. 
 
ಅಮೆರಿಕ ಚುನಾವಣೆಗೂ ಮುನ್ನ ಕಾರ್ಯಕ್ರಮವೊಂದರಲ್ಲಿ ಲಿನ್,  ಡೊನಾಲ್ಡ್ ಟ್ರಂಪ್ ದಂಪತಿಯನ್ನು ಭೇಟಿಯಾಗಿದ್ಲು. ಈ ವೇಳೆ ಲಿನ್ ಟ್ರಂಪ್ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದಳು. ಆದ್ರೆ ಆಕೆಯ ಪತಿ ಡೇವ್ ಮಾತ್ರ ಪೋಟೋ ತೆಗೆಸಿಕೊಳ್ಳಲಿಲ್ಲ, ಅದನ್ನು ಸಾಮಾಜಿಕ ತಾಣಗಳಲ್ಲಿ ಅಪ್ ಲೋಡ್ ಮಾಡದಂತೆಯೂ ಪತ್ನಿಗೆ ಸೂಚಿಸಿದ್ದನಂತೆ. ಅದರೆ ಆಕೆ ಅದನ್ನು ಕೇಳದೇ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಾಳಂತೆ ಹೀಗೆ ಟ್ರಂಪ್ ಜೊತೆಗಿನ ಸೆಲ್ಫಿಯಿಂದ ಶುರುವಾದ ಜಗಳ ದಂಪತಿಯನ್ನೇ ದೂರ ಮಾಡಿದ್ದಲ್ಲದೇ ವಿಚ್ಚೇದನದವರೆಗೂ ಬಂದು ನಿಂತಿದೆ.
 ಇದರಲ್ಲಿ ಇನ್ನಷ್ಟು ಓದಿ :  
ಡೊನಾಲ್ಡ್ ಟ್ರಂಪ್ ಸೆಲ್ಫಿ ವಿಚ್ಛೇಧನ Divorce Trump Selfies Woman Blames

ಸುದ್ದಿಗಳು

news

ಗುಜರಾತ್ ಕಾಂಗ್ರೆಸ್ ಶಾಸಕರ ವೆಚ್ಚ ನಾವು ಭರಿಸುತ್ತಿಲ್ಲ: ಡಿ.ಕೆ.ಶಿವಕುಮಾರ್

ಬೆಂಗಳೂರು: ರೆಸಾರ್ಟ್‌ನಲ್ಲಿ ಗುಜರಾತ್ ಶಾಸಕರ ವಾಸ್ತವ್ಯ ವಿಚಾರ ಕುರಿತಂತೆ ಪ್ರತಿಕ್ರಿಯೆ ನೀಡಿದ ಇಂಧನ ...

news

ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಮುಸ್ಲೀಂ ಆಗಿರಲಿಲ್ಲ: ತೋಹಿದ್‌ ಜಮಾತ್‌

ಮಾಜಿ ರಾಷ್ಟ್ರಪತಿ ದಿ. ಎಪಿಜೆ ಅಬ್ದುಲ್ ಕಲಾಂ ಅವರನ್ನು ಮುಸ್ಲಿಂ ಎಂದೂ ಪರಿಗಣಿಸಿಲ್ಲ. ಕಲಾಂ ಅವರ ಪ್ರತಿಮೆ ...

news

ಕೊಲೆಗಡುಕರನ್ನು ಸಮರ್ಥಿಸುತ್ತಿರುವ ಬಿಜೆಪಿ ನಾಯಕರು: ಖರ್ಗೆ

ನವದೆಹಲಿ: ಗೋವು ರಕ್ಷಣೆಯ ನೆಪದಲ್ಲಿ ಬಿಜೆಪಿ ನಾಯಕರು ಕೊಲೆಗಡುಕರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ...

news

ಬಿಜೆಪಿ ಹಿರಿಯ ಮುಖಂಡ ಬಿ.ಬಿ. ಶಿವಪ್ಪ ಇನ್ನಿಲ್ಲ

ಬಿಜೆಪಿಯ ಹಿರಿಯ ಮುಖಂಡ ಬಿ.ಬಿ. ಶಿವಪ್ಪ ವಿಧಿವಶರಾಗಿದ್ದಾರೆ. ವಯೋ ಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಬಿ.ಬಿ. ...

Widgets Magazine