102 ಐಫೋನ್`ಗಳೊಂದಿಗೆ ಸಿಕ್ಕಿಬಿದ್ದ ಮಹಿಳೆ..!

ಬೀಜಿಂಗ್, ಗುರುವಾರ, 20 ಜುಲೈ 2017 (17:16 IST)

Widgets Magazine

ಐಫೋನ್ ಇಟ್ಟುಕೊಳ್ಳುವುದು ಬಹುತೇಕ ಜನರಿಗೆ ಈಗ ಪ್ರತಿಷ್ಠೆಯ ವಿಷಯ. ಅಂತಹ ಐಫೋನ್`ಗಾಗಿ ಏನೆಲ್ಲ ಮಾಡಿರುವವರ ಸುದ್ದಿಗಳನ್ನ ನೋಡಿದ್ದೇವೆ. ಇದೀಗ, ಮಹಿಳೆಯೊಬ್ಬಳು ಬರೋಬ್ಬರಿ 102 ಐಫೋನ್`ಗಳನ್ನ ಮೈಗೆ ಅಂಟಿಸಿಕೊಮಡು ಕಳ್ಳ ಸಾಗಣೆ ಮಾಡುವಾಗ ಚೀನಾ ನಶೆಂಝೆನ್ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾಳೆ.


ಮಹಿಳೆಯ ದೇಹದ ಭಾಗ ವಿಚಿತ್ರವಾಗಿದ್ದನ್ನ ಗಮನಿಸಿದ ಕಸ್ಟಮ್ಸ್ ಅಧಿಕಾರಿಗಳು ಹಿಡಿದು ತನಿಖೆ ನಡೆಸಿದಾಗ ಹಿಂಬದಿ ಸೊಂಟದ ಮೇಲೆ ಅಂಟಿಸಿಕೊಂಡಿದ್ದ ಮೂರು ಪದರಗಳು ಪತ್ತೆಯಾಗಿದ್ದು, ಪ್ರತಿಯೊಂದು ಪದರದಲ್ಲಿ 30ಕ್ಕೂ ಹೆಚ್ಚು ಐಫೋನ್`ಗಳು ಸಿಕ್ಕಿವೆ. ಇದರ ಜೊತೆಗೆ 14 ಬೆಲೆಬಾಳುವ ಕೈಗಡಿಯಾರಗಳೂ ಸಿಕ್ಕಿವೆ. ಐಫೋನ್`ಗಳನ್ನ ಈ ಮಹಿಳೆ ಹಾಂಗ್ ಕಾಂಗ್`ನಿಂದ ಚೀನಾದ ಮೇನ್ ಲ್ಯಾಂಡ್`ಗೆ ಕಳ್ಳಸಾಗಣೆ ಮಾಡುತ್ತಿದ್ದಳೆಂದು ತನಿಖೆ ವೇಳೆ ತಿಳಿದುಬಂದಿದೆ.

ಐಫೋನ್`ಗಳ ಮೆಲೆ ಮೇನ್ ಲ್ಯಾಂಡ್`ನಲ್ಲಿ ಶೇ.30ರಷ್ಟು ಹೆಚ್ಚಿದ್ದು, ವಾಮಮಾರ್ಗದಲ್ಲಿ ಲಾಭ ಮಾಡುವ ದೃಷ್ಟಿಯಿಂದ ಈ ಮಹಿಳೆ ಕಳ್ಖಸಾಗಣೆಗೆ ಮುಂದಾಗಿದ್ದಳೆಂದು ತಿಳಿದು ಬಂದಿದೆ. ಇದುವರೆಗೆ ರೇಡ್ ಮಾಡಲಾದ ಐಫೋನ್ ಕಳ್ಳಸಾಗಣೆ ಪ್ರಕರಣಗಳಲ್ಲೇ ಇದು ಅತ್ಯಂತ ದೊಡ್ಡದು ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ವಿಧವೆ ಅತ್ತಿಗೆಯನ್ನೇ ಮಂಚಕ್ಕೆ ಕರೆದ ಭೂಪ ಮೈದುನ

ಮಥುರಾ: ವಿಧವೆಯಾದ ಅತ್ತಿಗೆಯ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ...

news

ಸಚಿವರ ಚೇರ್‌ನಲ್ಲಿ ಕುಳಿತು ಸೆಲ್ಫಿ ತೆಗೆದ ಯುವಕ ಅರೆಸ್ಟ್

ಲಕ್ನೋ: ಉತ್ತರಪ್ರದೇಶದ ಶಿಕ್ಷಣ ಸಚಿವ ಸಂದೀಪ್ ಸಿಂಗ್ ಚೇರ್‌ನಲ್ಲಿ ಕುಳಿತು ಸೆಲ್ಫಿ ತೆಗೆದುಕೊಂಡಿದ್ದ ...

news

14ನೇ ರಾಷ್ಟ್ರಪತಿಯಾಗಿ ರಾಮನಾಥ್ ಕೋವಿಂದ್ ಆಯ್ಕೆ’

ನಿರೀಕ್ಷೆಯಂತೆ ಎನ್`ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್ ದೇಶದ 14ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ...

news

ತನ್ನ ರಕ್ಷಣೆಗೆ ಭಾರತ ಶಸ್ತ್ರ ಸಜ್ಜಿತವಾಗಿದೆ: ಚೀನಾಗೆ ಸುಷ್ಮಾ ಎಚ್ಚರಿಕೆ

ಡೊಕ್ಲಾಮ್ ಗಡಿಯಲ್ಲಿನ ಬೆದರಿಕೆಗಳಿಗೆ ಭಾರತ ಹಿಂಜರಿಯುವುದಿಲ್ಲ. ಇದು ಭಾರತದ ಭದ್ರತೆಗೆ ಸವಾಲಾಗಿದ್ದು, ...

Widgets Magazine