Widgets Magazine
Widgets Magazine

ಐಪಿಎಲ್: ಫೈನಲಿಸ್ಟ್ ಗಳ ನಿರ್ಧಾರ ಮಾಡಿದ ಚಿನ್ನಸ್ವಾಮಿ ಪಂದ್ಯ

Bangalore, ಶನಿವಾರ, 20 ಮೇ 2017 (07:04 IST)

Widgets Magazine

ಬೆಂಗಳೂರು: ಮತ್ತೊಂದು ಐಪಿಎಲ್ ಗೆಲ್ಲುವ ಕನಸಿನಲ್ಲಿದ್ದ ಕೋಲ್ಕೊತ್ತಾ ನೈಟ್ ರೈಡರ್ಸ್ ಗೆ ಮುಂಬೈ ಇಂಡಿಯನ್ಸ್ ತಣ್ಣೀರೆರಚಿದೆ. ನಿನ್ನೆ ನಡೆದ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಕೆಕೆಆರ್ ವಿರುದ್ಧ 6 ವಿಕೆಟ್ ಗೆಲುವು ಕಂಡಿದೆ.


 
ಇದರೊಂದಿಗೆ ಚೊಚ್ಚಲ ಐಪಿಎಲ್ ಗೆಲ್ಲುವ ಕನಸಿನಲ್ಲಿರುವ ಪುಣೆ ಸೂಪರ್ ಜೈಂಟ್ ಮತ್ತು ಎರಡು ಬಾರಿಯ ಚಾಂಪಿಯನ್ ಮುಂಬೈ ಫೈನಲ್ ನಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ.
 
ಇದುವರೆಗೆ ಉತ್ತಮ ಲಹರಿಯಲ್ಲಿದ್ದ ಕೆಕೆಆರ್ ಬ್ಯಾಟಿಂಗ್ ನಿರ್ಣಾಯಕ ಪಂದ್ಯದಲ್ಲಿ ಕೈಕೊಟ್ಟಿದ್ದ ಸೋಲಿಗೆ ಕಾರಣವಾಯಿತು. ಮೊದಲು ಬ್ಯಾಟಿಂಗ್ ಮಾಡಿ ಕೇವಲ 107 ರನ್ ಗಳಿಗೆ ಆಲೌಟ್ ಆಯಿತು. ಮುಂಬೈ ಪರ ಘಾತಕ ಬೌಲಿಂಗ್ ನಡೆಸಿದ ಕರಣ್ ಶರ್ಮಾ 16 ರನ್ ಗಳಿಗೆ 4 ವಿಕೆಟ್ ಕಿತ್ತರು. ಜಸ್ಪ್ರೀತ್ ಬುಮ್ರಾ 3 ವಿಕೆಟ್ ಕಿತ್ತ ಸಾಥ್ ನೀಡಿದರು.
 
ನಂತರ ಬ್ಯಾಟಿಂಗ್ ಮಾಡಿದ ಮುಂಬೈ 33 ಬಾಲ್ ಬಾಕಿಯಿರುವಂತೆ ನಾಲ್ಕು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಕೃನಾಲ್ ಪಾಂಡ್ಯ ಮತ್ತು ರೋಹಿತ್ ಶರ್ಮಾ 50 ರನ್ ಗಳ ಜತೆಯಾಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಮನೀಶ್ ಪಾಂಡೆ ಜಾಗಕ್ಕೆ ದಿನೇಶ್ ಕಾರ್ತಿಕ್ ರನ್ನು ಆಯ್ಕೆ ಮಾಡಿದ್ದ್ಕಕೆ ಆಕ್ರೋಶ

ಮುಂಬೈ: ಚಾಂಪಿಯನ್ಸ್ ಟ್ರೋಫಿಗಾಗಿ ಟೀಂ ಇಂಡಿಯಾ ಆಯ್ಕೆ ನಡೆದಾಗಲೇ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು. ...

news

ಎಂಎಸ್ ಧೋನಿಯ ವಿಶಿಷ್ಟ ದಾಖಲೆ! ಇದನ್ನು ಬೇರೆ ಯಾರೂ ಮಾಡಿಲ್ಲ!

ಪುಣೆ: ಮೊನ್ನೆ ನಡೆದ ಐಪಿಎಲ್ ಕ್ವಾಲಿಫೈಯರ್ ಪಂದ್ಯ ಗೆದ್ದ ಪುಣೆ ಸೂಪರ್ ಜೈಂಟ್, ಫೈನಲ್ ಗೇರಿದೆ. ಪುಣೆ ...

news

‘ಭಾರತವನ್ನು ಸೋಲಿಸಿ ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ ಗೆಲ್ಲಲಿದೆ’

ಕರಾಚಿ: ಮುಂಬರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಚಾಂಪಿಯನ್ ಆಗುವವರು ಯಾರು? ಪಾಕಿಸ್ತಾನದ ಆಯ್ಕೆ ಸಮಿತಿ ...

news

ಟ್ವಿಟರ್ ನಲ್ಲೇ ಅಭಿಮಾನಿಯನ್ನು ಮುದ್ದಾಡಿದ ವಿರಾಟ್ ಕೊಹ್ಲಿ!

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಅನೇಕ ಮಂದಿ ಹುಚ್ಚು ಅಭಿಮಾನಿಗಳಿದ್ದಾರೆ. ಆದರೆ ಈಕೆ ...

Widgets Magazine Widgets Magazine Widgets Magazine