ಐಪಿಎಲ್ 13: ‘ಸೂರ್ಯ’ನ ಶಾಖ ‘ಬುಮ್ರಾ’ ಬೆಂಕಿಗೆ ಕರಗಿದ ಆರ್ ಸಿಬಿ

ದುಬೈ, ಗುರುವಾರ, 29 ಅಕ್ಟೋಬರ್ 2020 (09:13 IST)

ದುಬೈ: ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 5 ವಿಕೆಟ್ ಗಳ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಸ್ಥಾನ ಭದ್ರಪಡಿಸಿದೆ.
 


ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು. ರಾಯಲ್ ಆರಂಭ ಉತ್ತವಾಗಿದ್ದರೂ 15 ಓವರ್ ಗಳ ಬಳಿಕ ರನ್ ಗಳಿಸುವಲ್ಲಿ ವಿಫಲವಾಗಿದ್ದರಿಂದ ದೊಡ್ಡ ಮೊತ್ತ ಪೇರಿಸಲಾಗಲಿಲ್ಲ. ದೇವದತ್ತ್ ಪಡಿಕ್ಕಲ್ ಮತ್ತೊಂದು ಸೊಗಸಾದ ಇನಿಂಗ್ಸ್ ಆಡಿ 74 ರನ್ ಗಳಿಸಿ ಔಟಾದರು. ಮುಂಬೈ ಪರ ಜಸ್ಪ್ರೀತ್ ಬುಮ್ರಾ 14 ರನ್ ನೀಡಿ 3 ವಿಕೆಟ್ ಕಬಳಿಸಿದರು.
 
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಮುಂಬೈ ಆರಂಭ ಉತ್ತಮವಾಗಿರಲಿಲ್ಲ. ಆದರೆ ಸೂರ್ಯಕುಮಾರ್ ಯಾದವ್ ಬಂಡೆಯಂತೆ ನಿಂತು ಆಡಿದರು. ಸೂರ್ಯಕುಮಾರ್ 79 ರನ್ ಗಳಿಸಿದರು. ಮುಂಬೈ ಅಂತಿಮವಾಗಿ 19.1 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿ ಗೆಲುವು ಸಾಧಿಸಿತು. ಇದರೊಂದಿಗೆ ಪ್ಲೇ ಆಫ್ ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿತು. ಕಳೆದ ಎರಡು ಪಂದ್ಯಗಳಲ್ಲಿ ಸತತ ಎರಡು ಸೋಲು ಕಂಡಿರುವ ಆರ್ ಸಿಬಿ ಈಗ ಸಂಕಟಕ್ಕೆ ಸಿಲುಕಿದೆ.ಇದರಲ್ಲಿ ಇನ್ನಷ್ಟು ಓದಿ :  


ಇದರಲ್ಲಿ ಇನ್ನಷ್ಟು ಓದಿ :