ವಿರಾಟ್ ಕೊಹ್ಲಿ ಕಿಟ್ ಬ್ಯಾಗ್ ನಲ್ಲಿ ಏನೇನಿರುತ್ತೆ? ಅವರೇ ಹೇಳ್ತಾರೆ ನೋಡಿ

ದುಬೈ, ಬುಧವಾರ, 14 ಅಕ್ಟೋಬರ್ 2020 (11:32 IST)

ದುಬೈ: ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ತಮ್ಮ ಕಿಟ್ ಬ್ಯಾಗ್ ಒಳಗೆ ಏನೇನು ಇಟ್ಟುಕೊಂಡಿರುತ್ತಾರೆ? ಇದನ್ನು ಸ್ವತಃ ಅವರೇ ತೋರಿಸಿಕೊಟ್ಟಿದ್ದಾರೆ.


 
ಕಿಂಗ್ ಕೊಹ್ಲಿಗೆ ತಮ್ಮ ಕಿಟ್ ಬ್ಯಾಗ್ ಎಂದರೆ ಯಾವತ್ತೂ ವಿಶೇಷವಂತೆ. ಚಿಕ್ಕಂದಿನಿಂದಲೂ ಹೊಸ ಪ್ಯಾಡ್, ಬ್ಯಾಟ್‍ ತುಂಬುವ ಕಿಟ್ ಬ್ಯಾಗ್ ಗಳೆಂದರೆ ಕೊಹ್ಲಿಗೆ ಒಂಥರಾ ಖುಷಿಯಂತೆ. ತನ್ನ ಬ್ಯಾಗ್ ನಲ್ಲಿ ಆರ್ ಸಿಬಿಯ ಒಂದು ಜತೆ ಎಕ್ಸ್ ಟ್ರಾ ಕ್ಯಾಪ್, ತೊಡೆಯ ರಕ್ಷಾ ಕವಚ, ಐಪಿಎಲ್ ಗಾಗಿಯೇ ಹೊಸ ಜತೆ ಪ್ಯಾಡ್ ಇಟ್ಟುಕೊಂಡಿರುತ್ತಾರಂತೆ. ದುಬೈಯಲ್ಲಿ ಅತೀ ಉಷ್ಣದ ವಾತಾವರಣವಿರುವುದರಿಂದ 10 ರಿಂದ 11 ಜತೆ ಗ್ಲೌಸ್ ಇಟ್ಟುಕೊಂಡಿರುತ್ತಾರೆ. ಸೈಡ್ ಪಾಕೆಟ್ ಗಳಲ್ಲಿ ಗ್ರಿಪ್ ಕವರ್, ಬ್ಯಾಟ್ ಸ್ಟಿಕ್ಕರ್ ಗಳಿಟ್ಟುಕೊಂಡಿರುತ್ತಾರಂತೆ. ಹಿಂದಿನ ಜಿಪ್ ನಲ್ಲಿ ಮೂರು ಬ್ಯಾಟ್ ಇಟ್ಟುಕೊಳ್ಳುತ್ತಾರಂತೆ. ಇದಲ್ಲದೆ ಬ್ಯಾಟ್ ಗಾಗಿಯೇ ಇನ್ನೊಂದು ಕಿಟ್ ಬ್ಯಾಗ್ ಇರುತ್ತದೆ. ನನ್ನ ಎರಡು ತಿಂಗಳ ವಾಸಕ್ಕೆ ಇಷ್ಟು ಸಾಕು ಎಂದು ಕೊಹ್ಲಿ ವಿವರಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  


ಇದರಲ್ಲಿ ಇನ್ನಷ್ಟು ಓದಿ :