ಕೊಹ್ಲಿ, ಡಿವಿಲಿಯರ್ಸ್ ಅನುಪಸ್ಥಿತಿಯಲ್ಲಿ ಮೊದಲ ಪಂದ್ಯ.. ಶೇನ್ ವಾಟ್ಸನ್ ಹೆಗಲಿಗೆ ಹೊಣೆ

ಬೆಂಗಳೂರು, ಮಂಗಳವಾರ, 4 ಏಪ್ರಿಲ್ 2017 (11:06 IST)

Widgets Magazine

ಆಸ್ಟ್ರೇಲಿಯಾದ ಆಲ್ರೌಂಡರ್ ಶೇನ್ ವ್ಯಾಟ್ಸನ್ ಅವರನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟ್ಯಾಂಡ್ ಬೈ ಕ್ಯಾಪ್ಟನ್ ಆಗಿ ಘೋಷಿಸಲಾಗಿದೆ. ಬಲ ಭುಜದ ಗಾಯದಿಂದ ಕೊಹ್ಲಿ ಚೇತರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೊಹ್ಲಿ ಫಿಟ್ ಆಗುವವರೆಗೂ ವ್ಯಾಟ್ಸನ್ ತಂಡವನ್ನ ಮುನ್ನಡೆಸಲಿದ್ದಾರೆ.


ಏಪ್ರಿಲ್ 5ರಂದು ಸನ್ ರೈಸರ್ಸ್ ವಿರುದ್ಧ ಬೆಂಗಳೂರು ತಂಡ ಮೊದಲ ಪಂದ್ಯವನ್ನಾಡುತ್ತಿದೆ. ಆದರೆ, ಈ ಪಂದ್ಯದಲ್ಲಿ ತಂಡವನ್ನ ಮುನ್ನಡೆಸುತ್ತಿರುವ ವ್ಯಾಟ್ಸನ್ ಭಾರೀ ಒತ್ತಡದಲ್ಲಿದ್ದಾರೆ. ಕೊಹ್ಲಿ, ರಾಹುಲ್ ಬಳಿಕ 360 ಡಿಗ್ರಿ ಬ್ಯಾಟ್ಸ್`ಮನ್ ಎಬಿಡಿವಿಲಿರ್ಸ್ ಸಹ ಅಲಭ್ಯರಾಗಿದ್ಧಾರೆ.

ಕಳೆದ ವಾರ ದಕ್ಷಿಣ ಆಫ್ರಿಕಾ ಟಿ-20 ಪಂದ್ಯದ ವೇಳೆ ಬೆನ್ನಿಗೆ ಗಾಯ ಮಾಡಿಕೊಂಡಿರುವ ಡಿವಿಲಿಯರ್ಸ್ ಮೊದಲ ಪಂದ್ಯದಿಂದ ಹೊರಗುಳಿದಿದ್ದಾರೆ. ಡೆಲ್ಲಿ ವಿರುದ್ಧ ಬೆಂಗಳೂರಲ್ಲಿ ನಡೆಯಲಿರುವ 2ನೇ ಪಂದ್ಯದಲ್ಲಿ ಡಿವಿಲಿಯರ್ಸ್ ಆಡಲಿದ್ದಾರೆ.

ಹಿರಿಯ ಆಟಗಾರರ ಅನುಪಸ್ಥಿತಿ ಹಿನ್ನೆಲೆಯಲ್ಲಿ ಆರ್`ಸಿಬಿಯಲ್ಲಿ ಬೆಂಚ್ ಕಾಯುತ್ತಿದ್ದ ಆಟಗಾರರಿಗೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಚಾನ್ಸ್ ಸಿಗಲಿದೆ. ಆದರೆ, ಅನುಭವಿ ಬೌಲಿಂಗ್ ಪಡೆ ಹೊಂದಿರುವ ಸನ್ ರೈಸರ್ಸ್ ದಾಳಿಯನ್ನ ಬೆಂಗಳೂರು ತಂಡ ಹೇಗೆ ಎದುರಿಸಲಿದೆ ಎಂಬುದನ್ನ ಕಾದುನೋಡಬೇಕಿದೆ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ನಾಯಕನಾಗಿ ಕಣಕ್ಕಿಳಿಯುವ ಮೊದಲು ಅಜಿಂಕ್ಯಾ ರೆಹಾನೆಗೆ ಕರೆ ಮಾಡಿದ್ದ ಸಚಿನ್ ತೆಂಡುಲ್ಕರ್!

ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಅಂತಿಮ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ನಾಯಕರಾಗಿದ್ದ ಅಜಿಂಕ್ಯಾ ರೆಹಾನೆ ...

news

ಬಿಸಿಸಿಐಗೆ 5 ಕೋಟಿ ರೂ. ವೇತನ ನೀಡುವಂತೆ ವಿರಾಟ್ ಕೊಹ್ಲಿ ಬೇಡಿಕೆ!

ಮುಂಬೈ: ಟೀಂ ಇಂಡಿಯಾ ಆಟಗಾರರ ವೇತನ ಪರಿಷ್ಕರಣೆ ಮಾಡಿ ಇತ್ತೀಚಿಗೆ ಬಿಸಿಸಿಐ ಹೊಸ ಗುತ್ತಿಗೆ ಬಿಡುಗಡೆ ...

news

ಧೋನಿ ಆಯಿಲ್ ಕಂಪನಿಯ ಸಿಇಒ ಆದಾಗ…!

ಪುಣೆ: ಸದ್ಯ ಐಪಿಎಲ್ ಗೆ ತಯಾರಾಗುತ್ತಿರುವ ಧೋನಿಗೆ ಕ್ರಿಕೆಟ್ ನಾಯಕತ್ವದ ಒತ್ತಡವಿಲ್ಲ. ಹೀಗಾಗಿ ಅವರು ಒಂದು ...

news

ಐಪಿಎಲ್: ಆರ್ ಸಿಬಿ ಪಾಳಯದಲ್ಲಿ ವಿರಾಟ್ ಕೊಹ್ಲಿ ಪ್ರತ್ಯಕ್ಷ!

ಬೆಂಗಳೂರು: ಭುಜದ ಗಾಯದಿಂದಾಗಿ ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್ ನ ಆರಂಭಿಕ ಪಂದ್ಯಗಳಲ್ಲಿ ಆಡುವುದಿಲ್ಲ ...

Widgets Magazine Widgets Magazine