ಅಭಿಮಾನಿಗಳಿಗೆ ಖುಷಿ ನೀಡಿದ ಚೆನ್ನೈ ಸೂಪರ್ ಕಿಂಗ್ಸ್ ನ ಈ ನಿರ್ಧಾರ

ಚೆನ್ನೈ, ಶನಿವಾರ, 18 ನವೆಂಬರ್ 2017 (08:33 IST)

ಚೆನ್ನೈ: ಮ್ಯಾಚ್ ಫಿಕ್ಸಿಂಗ್ ಕಳಂಕದ ನಿಷೇಧ ಶಿಕ್ಷೆ ಮುಗಿಸಿ ಈ ಬಾರಿಯ ಐಪಿಎಲ್ ಆವೃತ್ತಿಗೆ ಮರಳುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಭಿಮಾನಿಗಳ ಒತ್ತಡಕ್ಕೆ ತಲೆ ಬಾಗಿದೆ.


 
ಕಳೆದ ಕೆಲವು ದಿನಗಳಿಂದ ಸುರೇಶ್ ರೈನಾರನ್ನು ತಂಡದಲ್ಲಿ ಉಳಿಸಿಕೊಳ್ಳುವ ಯೋಜನೆ ಸಿಎಸ್ ಕೆಗೆ ಇಲ್ಲ ಎಂಬ ಸುದ್ದಿ ಹರಿದಾಡುತ್ತಿತ್ತು. ಇದಕ್ಕೆ ಅಭಿಮಾನಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ರೈನಾ ಇಲ್ಲದೆ ಸಿಎಸ್ ಕೆ ಇಲ್ಲ ಎಂದು ಅಭಿಮಾನಿಗಳು ಟ್ವಿಟರ್ ನಲ್ಲಿ ಒತ್ತಾಯ ಮಾಡಿದ್ದರು.
 
ಇದಕ್ಕೆ ಕೊನೆಗೂ ಪ್ರತಿಕ್ರಿಯಿಸಿರುವ ಸಿಎಸ್ ಕೆ ‘ಕಳೆದು ಕೆಲವು ದಿನಗಳಿಂದ ಹರಿದಾಡುತ್ತಿರುವ ರೂಮರ್ಸ್ ಎಲ್ಲಾ ಸುಳ್ಳು. ಚೆನ್ನೈ ಹೀರೋಗಳನ್ನು ಉಳಿಸಿಕೊಳ್ಳುವುದಿಲ್ಲ ಎಂಬ ಸುದ್ದಿಗಳೆಲ್ಲಾ ಸುಳ್ಳು. ನಮ್ಮ ಹೆಮ್ಮೆಯನ್ನು ಮರಳಿ ಪಡೆಯಲು ಇಷ್ಟಪಡುತ್ತೇವೆ’ ಎಂದು ಟ್ವೀಟ್ ಮಾಡಿದೆ. ಈ ಮೂಲಕ ರೈನಾರನ್ನು ಹೊರಗಿಡುವ ಸುದ್ದಿಗಳನ್ನು ಅಲ್ಲಗಳೆದಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

ಧೋನಿ ನಾಯಕರಾಗಿದ್ದು ಹೇಗೆ? ರಹಸ್ಯ ಬಹಿರಂಗ!

ರಾಂಚಿ: 2007 ರಲ್ಲಿ ಆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಪಕ್ವತೆ ಸಾಧಿಸುತ್ತಿದ್ದ ಧೋನಿ ಟೀಂ ...

news

ಚೀನಾ ಓಪನ್: ಪಿ.ವಿ.ಸಿಂಧುಗೆ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು

ಫುಝೌ: ಚೀನಾ ಓಪನ್​ ಬ್ಯಾಡ್ಮಿಂಟನ್​ ಟೂರ್ನಿಯ ಕ್ವಾರ್ಟರ್​ಫೈನಲ್​ನಲ್ಲಿ ಭಾರತದ ಹೆಮ್ಮೆಯ ಕುವರಿ ...

news

ರಣಜಿ ಟ್ರೋಫಿ ಕ್ರಿಕೆಟ್: ಮತ್ತೆ ಕರ್ನಾಟಕದ ಬೊಂಬಾಟ್ ಆಟ

ಕಾನ್ಪುರ: ಉತ್ತರ ಪ್ರದೇಶ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ...

news

ಮಳೆಯ ಕಾಟಕ್ಕೆ ಬೇಸತ್ತ ಭಾರತ-ಲಂಕಾ ಆಟಗಾರರು

ಕೋಲ್ಕೊತ್ತಾ: ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಕ್ರಿಕೆಟ್ ಗಿಂತ ...

Widgets Magazine
Widgets Magazine