ಮತ್ತೊಮ್ಮೆ ಮಿಂಚಿದ ಮ್ಯಾಕ್ಸ್‌ವೆಲ್: ರಾಜಸ್ಥಾನ ವಿರುದ್ಧ ಕಿಂಗ್ಸ್ ಇಲೆವೆನ್ ಜಯ

ಸೋಮವಾರ, 21 ಏಪ್ರಿಲ್ 2014 (12:26 IST)

Widgets Magazine

ಶಾರ್ಜಾ:ಎರಡು ದಿನಗಳ ಅಂತರದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಬೃಹತ್ ಮೊತ್ತಗಳನ್ನು ಸುಲಭವಾಗಿ ಮುಟ್ಟಿದೆ.  ಕಿಂಗ್ಸ್‌ಇಲೆವನ್ ಪಂಜಾಬ್ ಆಪದ್ಬಾಂಧವ ಮ್ಯಾಕ್ಸ್‌ವೆಲ್ ಮತ್ತೊಮ್ಮೆ ತಮ್ಮ ಮಿಂಚಿನ ದಾಳಿ ಮೂಲಕ ಎದುರಾಳಿ ತಂಡವನ್ನು ಕಂಗೆಡಿಸಿದರು. ಎರಡೂ ಸಂದರ್ಭಗಳಲ್ಲಿ ಕಿಂಗ್ಸ್ ಇಲೆವನ್ ಬೌಲರ್‌ಗಳು ಎದುರಾಳಿ ತಂಡಕ್ಕೆ ನಿರಾಯಾಸವಾಗಿ ರನ್ ಗಳಿಸಲು ಅವಕಾಶ ಕೊಟ್ಟರು.
 
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಡೇವಿಡ್ ಮಿಲ್ಲರ್ 206 ಬೆನ್ನಟ್ಟಿದರು. ಭಾನುವಾರ ರಾತ್ರಿ ಇವರಿಬ್ಬರು ಇದೇ ರೀತಿಯ ಇನ್ನಿಂಗ್ಸ್ ಆಡಿ ಇನ್ನೊಂದು ದೊಡ್ಡ ಜಯವನ್ನು ತಂದಿತ್ತರು. ಮ್ಯಾಕ್ಸ್‌ವೆಲ್ ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದಾಗ 10 ರನ್ ಕಳೆದುಕೊಂಡು ಎರಡು ವಿಕೆಟ್ ಬಿದ್ದಿತ್ತು.
ಮ್ಯಾಕ್ಸ್‌ವೆಲ್ ಬ್ಯಾಟಿಂಗ್‌ಗೆ ಇಳಿದ ಕೂಡಲೇ ಶಾಟ್‌ಗಳನ್ನು ಹೊಡೆಯಲಾರಂಭಿಸಿದರು. ಅವರು ಔಟಾಗುವಷ್ಟರಲ್ಲಿ 45 ಎಸೆತಗಳಲ್ಲಿ 89 ರನ್ ಬಾರಿಸಿದರು. ಅವರ ಸ್ಕೋರಿನಲ್ಲಿ 8 ಬೌಂಡರಿಗಳು ಮತ್ತು 6 ಸಿಕ್ಸರುಗಳಿದ್ದವು. 
 
 ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಮಿಲ್ಲರ್ ಎರಡನೇ ಅತೀ ವೇಗದ ಐಪಿಎಲ್ ಅರ್ಧಶತಕವನ್ನು ಬಾರಿಸಿ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಜಯಗಳಿಸುವುದಕ್ಕೆ ನೆರವಾದರು. 19ನೇ ಓವರಿನಲ್ಲಿ ಫಾಕನರ್ ಬೌಲಿಂಗ್‌ನಲ್ಲಿ ಅವರ ಸಿಕ್ಸರ್ 19 ಎಸೆತಗಳಲ್ಲಿ ಅವರ ಅರ್ಧಶತಕವನ್ನು ತಂದುಕೊಟ್ಟಿತು. ಮೊದಲಿಗೆ ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನ ರಾಯಲ್ಸ್ ಪರ ಅಭಿಷೇಕ್ ನಾಯರ್ 23 ರನ್ ಮತ್ತು ಸಂಜು ಸ್ಯಾಮ್ಸನ್ 52ರನ್ ಶೇನ್ ವ್ಯಾಟ್ಸನ್  50 ರನ್ ಬಾರಿಸಿ 191 ರನ್‌ಗೆ 5 ವಿಕೆಟ್ ಕಳೆದುಕೊಂಡಿತ್ತು.

ಕಿಂಗ್ಸ್ ಇಲೆವನ್ ಪಂಜಾಬ್ ಪರ ವೀರೇಂದ್ರ ಸೆಹ್ವಾಗ್ ಬೇಗನೇ ಔಟಾದರೂ ಪೂಜಾರಾ 40 ರನ್ ಸೇರಿಸಿದರು.ಮ್ಯಾಕ್ಸ್‌ವೆಲ್ ಮತ್ತೆ ಬಿಡುಬೀಸಿನ ಆಟವಾಡಿ 89 ರನ್ ಬಾರಿಸಿದರು. ನಂತರ ಮಿಲ್ಲರ್ 51 ರನ್ ಹೊಡೆದು ಗುರಿಯನ್ನು ಮುಟ್ಟಿದರು.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ರಿಚಮಂಡ್‌‌ ಓಪನ್‌: ಪ್ರಶಸ್ತಿ ಮುಡಿಗೇರಿಸಿಕೊಂಡ ಜೋಶ್ನಾ

ರಿಚಮಂಡ್‌‌( ಅಮೆರಿಕಾ) : 10 ಸಾವಿರ ಡಾಲರ್ ಮೊತ್ತದ ಬಹುಮಾನವುಳ್ಳ ರಿಚಮಂಡ್‌‌ ಓಪನ್‌ ಸ್ಕ್ವಾಶ್‌‌ ...

ಟೆಬಲ್‌ ಟೆನಿಸ್‌‌ ತೆರಬೇತಿಗೆ ವಿದೇಶೀ ಕೋಚ್‌‌ಗಳ ನೇಮಕ

ಭಾರತೀಯ ಟೆಬಲ್‌ ಟೆನಿಸ್‌‌ ಮಹಾಸಂಘ ಇಬ್ಬರು ವಿದೇಶಿ ಕೋಚ್‌‌‌‌‌‌ಗಳನ್ನು ನೇಮಕ ಮಾಡಿದೆ. ಉತ್ತರ ಕೋರಿಯಾದ ...

ಇಂದು ಮಧ್ಯಾಹ್ನ 3ಕ್ಕೆ ಬಿಸಿಸಿಐ ಸಭೆ

ಮುಂಬೈ : ಕ್ರಿಕೆಟ್‌‌ ಬೋರ್ಡ್‌ ಕಾರ್ಯಕಾರಿ ಸಮಿತಿ ಇಂದು ತಮ್ಮ ಮುಖ್ಯ ಕಾರ್ಯಾಲಯದಲ್ಲಿ ಮದ್ಯಾಹ್ನ 3 ...

ಮೊಂಟೆಕಾರ್ಲೊ ಓಪನ್‌: 8 ಬಾರಿ ಚಾಂಪಿಯನ್ ರಫೆಲ್ ನಡಾಲ್‌‌‌ಗೆ ಭಾರಿ ಸೋಲು

ಮೊಂಟೆಕಾರ್ಲೊ: ಮೊಂಟೆಕಾರ್ಲೊ ಮಾಸ್ಟರ್ಸ್‌‌‌ ಟೆನಿಸ್‌‌‌ ಟೂರ್ನಮೆಂಟ್‌‌‌ನಲ್ಲಿ ಡೆವಿಡ್‌ ಫೆರರ್‌‌ ತಮ್ಮದೇ ...

Widgets Magazine