ಬೆಂಗಳೂರಲ್ಲಿ ಆರ್`ಸಿಬಿ ವರ್ಸಸ್ ಡೆಲ್ಲಿ ಫೈಟ್

ಬೆಂಗಳೂರು, ಶನಿವಾರ, 8 ಏಪ್ರಿಲ್ 2017 (15:16 IST)

Widgets Magazine

ಬೆಂಗಳೂರಿನಲ್ಲಿ ಇಂದು ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಡೇರ್ ಡೆವಿಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮೊದಲ ಪಂದ್ಯ ಸೋತಿರುವ ಆರ್`ಸಿಬಿ ಈ ಪಂದ್ಯ ಗೆದ್ದು ಸರಣಿಯಲ್ಲಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕಿದೆ. 360 ಡಿಗ್ರಿ ಆಟಗಾರ ಎ ಬಿ ಡಿವಿಲಿಯರ್ಸ್ ಇಂದಿನ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ. ಹೀಗಾಗಿ, ವ್ಯಾಟ್ಸನ್ ಪಡೆ ನಿಟ್ಟುಸಿರುಬಿಡುವಂತಾಗಿದೆ.


ಕ್ರಿಸ್ ಗೇಲ್ ಮತ್ತು ಡಿವಿಲಿಯರ್ಸ್ ಮೇಲೆ ಹೆಚ್ಚಿನ ನಿರೀಕ್ಷೆ ಇದ್ದು, ಇವರಿಬ್ಬರು ಸಿಡಿದರೆ ಎದುರಾಳಿ ತಂಡಕ್ಕೆ ಸೋಲು ಕಟ್ಟಿಟ್ಟ ಬುತ್ತಿ. ಮಂದೀಪ್ ಸಿಂಗ್, ಕೇದಾರ ಜಾಧವ್, ಟ್ರ್ಯಾವಿಸ್ ಹೆಡ್`ರಂತಹ ಪ್ರತಿಭಾವಂತ ಆಟಗಾರರು ತಂಡದಲ್ಲಿದ್ದು, ಮಧ್ಯಮ ಕ್ರಮಾಂಕ ಬ್ಯಾಟಿಂಗ್ ಲಯ ಕಂಡುಕೊಳ್ಲಬೇಕಿದೆ.

ಐಪಿಎಲ್`ನಲ್ಲಿ ಮೊದಲ ಪಂದ್ಯವಾಡುತ್ತಿರುವ ಜಹೀರ್ ಖಾನ್ ನೇತೃತ್ವದ ದೆಹಲಿ ತಂಡ ಗೆಲುವಿನ ಆರಂಭ ಪಡೆಯುವ ಉತ್ಸಾಹದಲ್ಲಿದೆ. ಕರುಣ್ ನಾಯರ್, ಕ್ವಿಂಟನ್ ಡಿಕಾಕ್, ಬಿಲ್ಲಿಂಗ್ಸ್, ಬ್ರೆಥ್ ವೇಯ್ಟ್, ಕಮಿನ್ಸ್, ಶ್ರೇಯಸ್ ಅಯ್ಯರ್`ರಂತಹ ಪ್ರತಿಭಾವಂತ ಆಟಗಾರರಿದ್ದಾರೆ.

ಬೆಂಗಳೂರಿನಲ್ಲಿ ಕನ್ನಡಿಗರು ವರ್ಸಸ್ ಕನ್ನಡಿಗರು: ಬೆಂಗಳೂರಿನಲ್ಲಿಂದು ನಡೆಯುತ್ತಿರುವ ಪಂದ್ಯದಲ್ಲಿ ಕನ್ನಡಿಗರು ಮತ್ತು ಕನ್ಡಿಗರ ನಡುವೆ ಪೈಪೋಟಿ ನಡೆಯುತ್ತಿದೆ. ಆರ್`ಸಿಬಿಯಲ್ಲಿ ಸ್ಟುವರ್ಟ್ ಬಿನ್ನಿ ಮತ್ತು ಎಸ್, ಅರವಿಂದ್ ಆಡುತ್ತಿದ್ದು, ದೆಹಲಿ ತಂಡಕ್ಕೆ ಬ್ಯಾಟಿಂಗ್ ಸಲಹೆಗಾರರಾಗಿ ರಾಹುಲ್ ದ್ರಾವಿಡ್ ಮತ್ತು ಬ್ಯಾಟ್ಸ್`ಮನ್ ಕರುಣ್ ನಾಯರ್ ಬಲವಿದೆ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಗೌತಮ್ ಗಂಭೀರ್ ಪತ್ನಿಗೆ ಪತಿಯನ್ನು ಕೊಲೆ ಮಾಡಬೇಕೆನ್ನುವಷ್ಟು ಕೋಪ ಯಾಕೋ?!

ನವದೆಹಲಿ: ಗೌತಮ್ ಗಂಭೀರ್ ಹೆಸರಿನಷ್ಟೇ ಗಂಭೀರ ಪ್ರವೃತ್ತಿಯವರು. ಇತರ ಕ್ರಿಕೆಟಿಗರ ಹಾಗೆ, ಡ್ಯಾನ್ಸ್ ಮಾಡು ...

news

ಧೋನಿ ಬಗ್ಗೆ ಅವಹೇಳನ ಮಾಡಿದ ಪುಣೆ ಮಾಲಿಕರ ಸಹೋದರ

ಪುಣೆ: ಧೋನಿ ನಾಯತ್ವದಿಂದ ಕೆಳಗಿಳಿದ ಮೇಲೆ ಅವರ ಮೇಲೆ ಕಲ್ಲೆಸೆಯುವವರ ಸಂಖ್ಯೆಯೂ ಜಾಸ್ತಿಯಾಗಿದ್ದಾರೆ. ...

news

ರಾಯಲ್ಸ್ ಚಾಲೆಂರ್ಸ್ ಬೆಂಗಳೂರು ತಂಡಕ್ಕೆ ಹೊಸ ಆಟಗಾರರು

ಬೆಂಗಳೂರು: ಗಾಯಗೊಂಡ ಕೆಎಲ್ ರಾಹುಲ್ ಮತ್ತು ಡುಮಿನಿ ಬದಲಿಗೆ ರಾಯಲ್ ಚಾಲೆಂರ್ಸ್ ಬೆಂಗಳೂರು ತಂಡ ಹೊಸ ...

news

ಐಪಿಎಲ್: ಅಪ್ಪನ ಅಂತ್ಯಕ್ರಿಯೆ ಮುಗಿಸಿ ದೆಹಲಿ ತಂಡಕ್ಕೆ ಮರಳಿದ ಕ್ರಿಕೆಟಿಗ

ನವದೆಹಲಿ: ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಸೆನ್ಸೇಷನಲ್ ಕ್ರಿಕೆಟಿಗ ರಿಷಬ್ ಪಂತ್ ಗೆ ಇದೀಗ ಒಂದೊಡೆ ...

Widgets Magazine