ಕೋಲ್ಕೊತ್ತಾ ನೈಟ್ ರೈಡರ್ಸ್ ಗೌತಮ್ ಗಂಭೀರ್ ರನ್ನೇ ಕೈ ಕೊಟ್ಟಿದ್ದೇಕೆ ಗೊತ್ತಾ?!

ಕೋಲ್ಕೊತ್ತಾ, ಮಂಗಳವಾರ, 30 ಜನವರಿ 2018 (10:39 IST)

ಕೋಲ್ಕೊತ್ತಾ: ಈ ಬಾರಿಯ ಐಪಿಎಲ್ ಬಿಡ್ಡಿಂಗ್ ನಲ್ಲಿ ಕೆಕೆಆರ್ ತಂಡ ತನ್ನ ಯಶಸ್ವಿ ನಾಯಕ ಗೌತಮ್ ಗಂಭೀರ್ ರನ್ನೇ ಕೈ  ಬಿಟ್ಟಿದ್ದು ಅಚ್ಚರಿಗೆ ಕಾರಣವಾಗಿತ್ತು. ಕೋಲ್ಕೊತ್ತಾ ತಂಡವನ್ನು ಐಪಿಎಲ್ ಚಾಂಪಿಯನ್ ಮಾಡಿದ ನಾಯಕನಿಗೆ ಕೊಕ್ ನೀಡಿದ್ದೇಕೆ ಎನ್ನುವುದು ಈಗ ಬಹಿರಂಗವಾಗಿದೆ.
 

ಈ ಬಗ್ಗೆ ಪ್ರತಿಕ್ರಿಯಿಸಿದ ಕೆಕೆಆರ್ ತಂಡದ ಸಿಇಒ ವೆಂಕಿ ಮೈಸೂರ್ ನಾವು ಗಂಭೀರ್ ರನ್ನು ಆರ್ ಟಿಎಂ ಕಾರ್ಡ್ ಬಳಸಿ ಉಳಿಸಿಕೊಳ್ಳಲು ಬಯಸಿದ್ದೆವು. ಆದರೆ ಸ್ವತಃ ಗಂಭೀರ್ ಹಾಗೆ ಮಾಡದೆ ಹರಾಜಿಗೆ ಬಿಡುವಂತೆ ಮನವಿ ಮಾಡಿದರು. ಬೇರೊಂದು ಸವಾಲು ಎದುರಿಸಲು ಬಯಸುವುದಾಗಿ ಹೇಳಿದರು. ಅದಕ್ಕೇ ಗಂಭೀರ್ ರನ್ನು ಬಿಟ್ಟುಕೊಟ್ಟೆವು ಎಂದಿದ್ದಾರೆ.
 
ಇದರೊಂದಿಗೆ ಗಂಭೀರ್ ಗೇ ಕೊಕ್ ಕೊಟ್ಟಿದ್ದೇಕೆ ಎಂಬ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದಂತಾಗಿದೆ. ಗಂಭೀರ್ ಈ ಬಾರಿ ತಮ್ಮ ತವರು ದೆಹಲಿ ತಂಡಕ್ಕೆ 2.2 ಕೋಟಿ ರೂ. ಗೆ ಹರಾಜಾಗಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ರಾಹುಲ್ ದ್ರಾವಿಡ್ ಹುಡುಗರ ಭರ್ಜರಿ ಸಾಧನೆ! ವಿಶ್ವಕಪ್ ಫೈನಲ್ ಗೆ ಲಗ್ಗೆ!

ನವದೆಹಲಿ: ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತ ತಂಡ ...

news

ಈ ಟೀಂ ಇಂಡಿಯಾ ಕ್ರಿಕೆಟಿಗನ ಖರೀದಿಸದ್ದಕ್ಕೆ ಬೇಸರದಲ್ಲಿರುವ ನೀತಾ ಅಂಬಾನಿ

ಮುಂಬೈ: ಐಪಿಎಲ್ ಬಿಡ್ಡಿಂಗ್ ನಿನ್ನೆಯಷ್ಟೇ ಮುಗಿದಿದೆ. ಇದರೊಂದಿಗೆ ಎಲ್ಲಾ ಫ್ರಾಂಚೈಸಿಗಳೂ ತಮ್ಮ ತಂಡಕ್ಕೆ ...

news

ಗೆಲ್ಲುತ್ತಿದ್ದ ಹಾಗೇ ವಿರಾಟ್ ಕೊಹ್ಲಿ ಮೇಲಿನ ದ.ಆಫ್ರಿಕನ್ನರ ವರಸೆಯೇ ಬದಲಾಯ್ತು!

ಮುಂಬೈ: ದ.ಆಫ್ರಿಕಾ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಸೋತಾಗ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ...

news

ಲಾರಾ ದಾಖಲೆಗೇ ಕನ್ನ ಹಾಕಿದ ವಿರಾಟ್ ಕೊಹ್ಲಿ!

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕತೆ ಬ್ರಿಯಾನ್ ಲಾರಾ ದಾಖಲೆಗೆ ...

Widgets Magazine
Widgets Magazine