Widgets Magazine

ಭಾರತದಲ್ಲಿಯೇ ಉತ್ಪಾದನೆಯಾದ ಸ್ಮಾರ್ಟ ಫೊನ್‌ ಯಾವುದು ಗೊತ್ತಾ ?

ನವದೆಹಲಿ| ವೆಬ್‌ದುನಿಯಾ| Last Modified ಸೋಮವಾರ, 23 ಡಿಸೆಂಬರ್ 2013 (17:26 IST)
PR
ಟ್ಯಾಬ್ಲೆಟ್‌ ಉತ್ಪಾದಿಸುವ ಸಿಮಟ್ರಾನಿಕ್ಸ್‌ ಈಗ ಸ್ಮಾರ್ಟ್ ಫೋನ್‌ ಉತ್ಪಾದನೆ ಮಾಡುತ್ತಿದೆ. ಎರಡು ಸಿರೀಜ್‌ನಲ್ಲಿ ಆಂಡ್ರ್ಯಾಡ್‌ ಹ್ಯಾಂಡ್‌ಸೆಟ್‌‌ ಪರಿಚಯಿಸುತ್ತಿದೆ. ಇದರ ಬೆಲೆ 3,499 ರೂಪಾಯಿಗಳಿಂದ ಪ್ರಾರಂಭವಾಗುತ್ತವೆ. ಇದರ ಇನ್ನೊಂದು ವಿಶೇಷತೆ ಎನೆಂದರೆ ಈ ಮೊಬೈಲ್‌‌ ಉತ್ಪಾದನೆಯನ್ನು ಭಾರತದಲ್ಲಿ ಮಾಡಲಾಗಿದೆ . ಇದಕ್ಕು ಮೊದಲು ಚೀನಾದಿಂದ ಸ್ಮಾರ್ಟ್ ಫೋನ್‌ ತರಿಸಿಕೊಳ್ಳಲಾಗುತಿತ್ತು.

ಈ ಹೊಸ ಸಾಹಸಕ್ಕೆ ಕೈ ಹಾಕಿರುವ ಕಂಪೆನಿ 200 ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಘೋಷಣೆ ಮಾಡಿದೆ ಎಕ್ಸಪೈಡ್ ಫನಡ್ರಾಯಡ್‌ ಮತ್ತು ಅಮೆಜಾಯಡ್‌ ಸೀರಿಜ್‌ನಲ್ಲಿ ಹ್ಯಾಂಡಸೆಟ್‌‌ಗಳು ಪರಿಚಯಿಸುತ್ತಿದೆ. ಇದರ ಬೆಲೆ 3,499 ರೂಪಾಯಿನಿಂದ 8,999 ರೂಪಾಯಿವರೆಗೆ ಇದೆ.

" ಕಂಪೆನಿ ಸ್ಮಾರ್ಟ ಪೋನ್‌ ತಯಾರಿಕೆಗೆ 200 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಈ ಹಣಕಾಸು ವರ್ಷದಲ್ಲಿ ಒಟ್ಟು 800 ಕೋಟಿ ರೂಪಾಯಿಯ ವಹಿವಾಟು ನಡೆಯುವ ವಿಶ್ವಾಸವಿದೆ" ಎಂದು ಕಂಪೆನಿಯ ಎಮ್‌ಡಿ ಇಂದ್ರಜೀತ್‌ ಸಭರವಾಲ್ ತಿಳಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :