Widgets Magazine

ವಿಮಾನಯಾನ: ಭಾರತಕ್ಕೆ ಎರಡನೇ ಸ್ಥಾನ

ನವದೆಹಲಿ| ಇಳಯರಾಜ| Last Modified ಶುಕ್ರವಾರ, 26 ಅಕ್ಟೋಬರ್ 2007 (11:42 IST)
ಜಾಗತಿಕ ವೈಮಾನಿಕ ಕ್ಷೇತ್ರದ ಹೆದ್ದಾರಿಯಾಗಿದ್ದು ಆದಾಯದಲ್ಲಿ ಅಮೆರಿಕದ ನಂತರ ಭಾರತ ಎರಡನೇ ಪಡೆದಿದೆ ಎಂದು ಬ್ರಿಟಿಷ್ ಏರ್‌ವೇಸ್ ಪ್ರಕಟಿಸಿದೆ.

ಪ್ರೆಮೀಯರ್ ಏರ್‌ಲೈನ್ಸ್ ಎರಡು ವರ್ಷಗಳ ಹಿಂದೆ ಬಾರತಕ್ಕೆ ವಾರಕ್ಕೆ 19 ವಿಮಾನಗಳ ಸೇವೆಯನ್ನು ನೀಡುತ್ತಿದ್ದು ಪ್ರಸ್ತುತ 43 ವಿಮಾನಗಳ ಸೇವೆಯನ್ನು ಲಂಡನ್ ಹಿತ್ರೋ ದಿಂದ ಭಾರತದ ಐದು ಮಹಾನಗರಗಳಿಗೆ ನೀಡುತ್ತಿದೆ ಎಂದು ಸಂಸ್ಥೆ ತಿಳಿಸಿದೆ.

ಅಮೆರಿಕದ ನಂತರ ಭಾರತ ವೈಮಾನಿಕ ಕ್ಷೇತ್ರಕ್ಕೆ ಹೆಚ್ಚಿನ ಆದಾಯ ನೀಡುವ ದೇಶವಾಗಿದ್ದು ಆಸ್ಟ್ರೇಲಿಯಾದೊಂದಿಗೆ ಆದಾಯ ಸಂಬಂಧಿತ ವಿಷಯದಲ್ಲಿ ತೀರಾ ಹತ್ತಿರದಲ್ಲಿ ಸ್ಪರ್ಧಿಸುತ್ತಿದೆ ಎಂದು ಬ್ರಿಟಿಷ್ ಏರ್‌ವೇಸ್ ಪ್ರಾದೇಶಿಕ ವ್ಯವಸ್ಥಾಪಕರಾದ ರೊಬ್ಬಿ ಬೆರ್ಡ್ ತಿಳಿಸಿದ್ದಾರೆ.

ಭಾರತಕ್ಕೆ ಜಗತ್ತಿನ ಅತಿದೊಡ್ಡ ವಿಮಾನವಾದ ಸೂಪರ್‌ಜಂಬೋ ಸೇವೆಯ ನೀಡುವ ಉದ್ದೇಶವನ್ನು ಸಂಸ್ಥೆ ಪರಿಶೀಲಿಸುತ್ತಿದ್ದು, ವೈಮಾನಿಕ ಕ್ಷೇತ್ರದ ವಿಸ್ತರಣೆ ಹಂತದಲ್ಲಿ ಈ ಕುರಿತು ಪರೀಶಿಲಿಸಲಾಗುವುದು ಎಂದು ಹೇಳಿದ್ದಾರೆ.

ದೆಹಲಿ, ಮುಂಬೈ ಮತ್ತು ಬೆಂಗಳೂರಿಗೆ ಪ್ರತಿನಿತ್ಯದ ಸೇವೆಯನ್ನು ನೀಡುತ್ತಿದ್ದು ಬೆಂಗಳೂರಿಗೆ ಬಿ-777ಎಸ್ ದಿಂದ ಬಿ-747ಎಸ್ ಬೃಹತ್ ಗಾತ್ರದ ವಿಮಾನ ಸೇವೆಯನ್ನು ನೀಡಲಾಗುತ್ತಿದೆ ಎಂದು ಬೆರ್ಡ್ ಹೇಳಿದರು.

ಮುಂಬರುವ ನಾಲ್ಕೈದು ವರ್ಷಗಳಲ್ಲಿ ಭಾರತಕ್ಕೆ ಬೃಹತ್ ವಿಮಾನಗಳ ಸೇವೆಯನ್ನು ನೀಡಲು ಉದ್ದೇಶಿಸಲಾಗಿದ್ದು ವೈಮಾನಿಕ ಕ್ಷೇತ್ರದ ಬೆಳವಣಿಗೆಗಳ ಮೇಲೆ ಅವಲಂಬಿಸಿದೆ ಎಂದು ರೊಬ್ಬಿ ಬೆರ್ಡ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :