ಈ ಆಪ್ ಇದ್ದರೆ ನೀವು ಜಿಯೋಫೋನ್ ಖರೀದಿಸಬಹುದು.

ಗುರುಮೂರ್ತಿ 

ಬೆಂಗಳೂರು, ಸೋಮವಾರ, 12 ಫೆಬ್ರವರಿ 2018 (17:26 IST)

ರಿಲಾಯನ್ಸ್‌ನ ಹೊಸ ಉತ್ಪನ್ನವಾದ ಜಿಯೋಫೋನ್ ಇದೀಗ ಮಾರುಕಟ್ಟೆಯಲ್ಲಿ ಬಾರಿ ಸಂಚಲನವನ್ನು ಮೂಡಿಸಿದ್ದು, ಇದರ ಮಾರಾಟವನ್ನು ಇನ್ನಷ್ಟು ಹೆಚ್ಚು ಮಾಡುವ ಸಲುವಾಗಿ ರಿಲಾಯನ್ಸ್‌ ಹೊಸ ತಂತ್ರವನ್ನು ರೂಪಿಸಿದೆ.
ಹೌದು, ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಹಣ ಪಾವತಿ ಮತ್ತು ಡಿಜಿಟಲ್ ವಾಲೆಟ್ ಎಂದೇ ಹೆಸರುವಾಸಿಯಾಗಿರುವ ಮೊಬಿಕ್ವೀಕ್‌ನೊಂದಿಗೆ ರಿಲಾಯನ್ಸ್‌  ವ್ಯಾಪಾರ ಒಪ್ಪಂದವನ್ನು ಮಾಡಿಕೊಂಡಿದ್ದು, ಮೊಬಿಕ್ವೀಕ್‌ ಮೂಲಕ ನೀವು ಸುಲಭವಾಗಿ ಜಿಯೋಫೋನ್ ಅನ್ನು ಖರೀದಿಸಬಹುದಾಗಿದೆ.
 
ಈ ಫೋನ್ ಅಧಿಕೃತವಾಗಿ ಮೊಬಿಕ್ವೀಕ್‌‌ನಲ್ಲಿ ಮಾತ್ರವೇ ಲಭ್ಯವಿದ್ದು, ಗ್ರಾಹಕರು ಕೆಲವು ಹಂತಗಳನ್ನು ಅನುಸರಿಸುವ ಮೂಲಕ ಸುಲಭವಾಗಿ ಈ ಫೋನ್ ಅನ್ನು ಖರೀದಿಸಬಹುದಾಗಿದೆ. ಅಲ್ಲದೇ ಜಿಯೋ ಮೊಬೈಲ್ ಅನ್ನು ಮಾರಾಟಮಾಡುವ ಮೊದಲ ಮೊಬೈಲ್ ವಾಲೆಟ್ ಎಂಬ ಹೆಗ್ಗಳಿಕೆಗೆ ಮೊಬಿಕ್ವೀಕ್‌ ಪಾತ್ರವಾಗಿದೆ.
 
ಜಿಯೋಫೋನ್‌ನ ವೈಶಿಷ್ಟ್ಯಗಳು -
 
ಜಿಯೋಫೋನ್‌ನಲ್ಲಿ 2.4 ಇಂಚಿನ 240x320 px, 167 PPI, TFT ಪರದೆಯಿದ್ದು, 512 MB RAM ಅನ್ನು ಇದು ಹೊಂದಿದೆ. ಅಷ್ಟೇ ಅಲ್ಲ ಇದರಲ್ಲಿ ಡ್ಯೂಯಲ್ ಕ್ಯಾಮರಾಗಳಿದ್ದು ಹಿಂಬದಿ ಕ್ಯಾಮರಾ 2MB ಮತ್ತು ಮುಂಬದಿ ಕ್ಯಾಮರಾ 0.3 VGA ಕ್ಯಾಮರಾವನ್ನು ಇದರಲ್ಲಿ ಕಾಣಬಹುದಾಗಿದೆ. ಜೊತೆಗೆ 4 GB ಆಂತರಿಕ ಸಂಗ್ರಹಣೆಯನ್ನು ಈ ಫೋನ್ ಹೊಂದಿದ್ದು, ಮೆಮೊರಿ ಕಾರ್ಡ್ ಅನ್ನು ಹಾಕುವ ಮೂಲಕ 128 GB ವರೆಗೂ ಸಹ ಸಂಗ್ರಹಣೆಯನ್ನು ವಿಸ್ತರಿಸಬಹುದಾಗಿದೆ.
 
ಅದಲ್ಲದೇ ಈ ಫೋನ್ 4G ನೆಟ್‌ವರ್ಕ್ ಅನ್ನು ಬೆಂಬಲಿಸುತ್ತಿದ್ದು, ಎಫ್ ಎಂ ರೇಡಿಯೊ ಆಯ್ಕೆಯು ಈ ಫೋನ್‌ನಲ್ಲಿದೆ. ಇದರಲ್ಲಿ 2,000mAh ಬ್ಯಾಟರಿಯನ್ನು ಅಳವಡಿಸಲಾಗಿದ್ದು, 12 ತಾಸುಗಳ ನಿರಂತರ ಸಂಪರ್ಕ ಸಾಧಿಸಬಹುದಾಗಿದೆ.
 
ಈಗಾಗಲೇ ಮಾರುಕಟ್ಟೆಯಲ್ಲಿ ಜನರ ವಿಶ್ವಾಸವನ್ನು ಗಳಿಸಿರುವ ರಿಲಾಯನ್ಸ್ ಜಿಯೋ ಈ ಮೊಬೈಲ್ ಮೂಲಕ ಉತ್ತಮ ಗುಣಮಟ್ಟದ ಫೋನ್ ಗ್ರಾಹಕರಿಗೆ ನೀಡುವಲ್ಲಿ ಯಶಸ್ಸು ಸಾಧಿಸಿದೆ ಎಂದೇ ಹೇಳಬಹುದು. ನಿಮಗೂ ಈ ಮೊಬೈಲ್ ಖರೀದಿಸಬೇಕು ಎಂದು ಅನಿಸಿದರೆ ಈ ಕೂಡಲೇ ಮೊಬಿಕ್ವೀಕ್‌ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಈ ಅಪ್ಲಿಕೇಶನ್‌ಗಳು ನಿಮ್ಮ ಮೊಬೈಲ್‌ನಲ್ಲಿವೆಯೇ ಕಾದಿದೆ ಆಪತ್ತು...!

ನೀವು ಆಂಡ್ರಾಯ್ಡ್ ಬಳಕೆದಾರರೇ ನಿಮ್ಮ ಮೊಬೈಲ್‌ಗಳನ್ನು ಹ್ಯಾಕ್ ಮಾಡುತ್ತಿರಬಹುದು ಎಚ್ಚರ, ಹೀಗಂತ ಗೂಗಲ್ ...

news

ಆಪಲ್ ಬಿಡುಗಡೆಗೊಳಿಸುತ್ತಿದೆ ವೈರ್‌ಲೆಸ್ ಚಾರ್ಜರ್

ಹೊಸ ಜನರೇಶನ್‌ಗೆ ತಕ್ಕಂತೆ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಆಪಲ್ ಸಂಸ್ಥೆ, ತನ್ನ ...

news

ಮಾರುಕಟ್ಟೆಗೆ ಲಗ್ಗೆ ಇಟ್ಟ ಹೊಂಡಾ ಆಕ್ಟಿವಾ 5G

ದೇಶಿಯ ಮಾರುಕಟ್ಟೆಯಲ್ಲಿ ಸ್ಕೂಟರ್ ತಯಾರಿಕೆಯಲ್ಲಿಯೇ ಹೆಸರುವಾಸಿಯಾಗಿರುವ ಹೊಂಡಾ ಸಂಸ್ಥೆ ತನ್ನ ನೂತನ ...

news

ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಹೊಸ ಟಿವಿಎಸ್ NTORQ 125 ಸ್ಕೂಟರ್

ಯುವಜನತೆಯನ್ನು ಗಮನದಲ್ಲಿರಿಸಿಕೊಂಡು ಟಿವಿಎಸ್ ಮೋಟಾರು ಸಂಸ್ಥೆ ತನ್ನ ಹೊಚ್ಚ ಹೊಸ NTORQ 125 ...

Widgets Magazine