ಆರ್`ಬಿಐನ 50 ರೂ. ಹೊಸ ನೋಟಿನ ಫೋಟೋ ಲೀಕ್

ನವದೆಹಲಿ, ಶುಕ್ರವಾರ, 18 ಆಗಸ್ಟ್ 2017 (17:55 IST)

ಕಳೆದ ವರ್ಷ ನವೆಂಬರ್`ನಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ 1000 ಮತ್ತು 500 ರೂ. ನೋಟುಗಳನ್ನ ಅಮಾನ್ಯಗೊಳಿಸಿದ ಬಳಿಕ ಜನಸಾಮಾನ್ಯರ ದಿನನಿತ್ಯದ ವಹಿವಾಟಿಗಾಗಿ 50 ಮತ್ತು 10 ರೂಪಾಯಿ ನೋಟು ಬಿಡುಗಡೆ ಘೋಷಿಸಿತ್ತು.
 


ಇದಾದ ಬಳಿಕ 50 ಮತ್ತು 10 ರೂಪಾಯಿ ನೋಟಿನ ಬಗ್ಗೆ ಸುದ್ದಿಯೇ ಇರಲಿಲ್ಲ. ಇದೀಗ,  50 ರೂಪಾಯಿ ನೋಟುಗಳ ಸುದ್ದಿ ಪ್ರತ್ಯಕ್ಷವಾಗಿದೆ. ಆರ್`ಬಿಐ ಮುದ್ರಿಸಿದೆ ಎನ್ನಲಾದ 50 ರೂ. ನೋಟುಗಳ ಬಂಡಲ್`ನ ಇಮೇಜ್ ಆನ್`ಲೈನ್`ನಲ್ಲಿ ಲೀಕ್ ಆಗಿದೆ. ತೆಳು ಹಸಿರು ಬಣ್ಣದ ನೋಟು ಇದಾಗಿದ್ದು, ಚಲಾವಣೆಯಲ್ಲಿರುವ 50 ರೂ. ನೋಟುಗಳಿಗಿಂತ ವಿಭಿನ್ನವಾಗಿದೆ. 2005ನೇ ಮಹಾತ್ಯಾಗಾಂಧಿ ಫೋಟೋ ಒಳಗೊಂಡಿರುವ ನೊಟುಗಳು ಇವಾಗಿವೆ.
 
ಆನ್`ಲೈನ್`ನಲ್ಲಿ ಲೀಕ್ ಆಗಿರುವ ಈ ಇಮೇಜ್ ಬಗ್ಗೆ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರದಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಹೊಸ ನೋಟಿನ ಭದ್ರತಾ ಲಕ್ಷಣಗಳು ಹಳೆಯ ನೋಟುಗಳ ರೀತಿಯೇ ಇರಲಿವೆ ಎನ್ನಲಾಗಿದೆ.   
 
 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಇನ್ ಫೋಸಿಸ್ ಸಿಇಒ ವಿಶಾಲ್ ಸಿಕ್ಕಾ ರಾಜೀನಾಮೆ

ಬೆಂಗಳೂರು: ಪ್ರತಿಷ್ಠಿತ ಐಟಿ ಸಂಸ್ಥೆ ಇನ್ ಫೋಸಿಸ್ ನ ಸಿಇಒ ಸ್ಥಾನಕ್ಕೆ ವಿಶಾಲ್ ಸಿಕ್ಕಾ ಇಂದು ಬೆಳಿಗ್ಗೆ ...

news

ನೀವೂ ಚೀನಾ ಮೊಬೈಲ್ ಬಳಸುತ್ತಿದ್ದೀರಾ..? ಹುಷಾರ್ ಹುಷಾರ್..!

ಭಾರತ ಮತ್ತು ಚೀನಾ ನಡುವೆ ಯುದ್ದದ ಸನ್ನಿವೇಶ ಏರ್ಪಟ್ಟಿರುವ ಬೆನ್ನಲ್ಲೇ ಚೀನಾ ಮೋಬೈಲ್`ಗಳಿಂದ ಭಾರತಕ್ಕೆ ...

news

ಗೂಗಲ್`ನಲ್ಲಿ ಈಗ ಕನ್ನಡದಲ್ಲೂ ವಾಯ್ಸ್ ಸರ್ಚ್ ಮಾಡಬಹುದು..!

ಜಗತ್ತಿನ ಪ್ರಸಿದ್ಧ ಸರ್ಚ್ ಎಂಜಿನ್ ಗೂಗಲ್ ಕಾಲಕ್ಕೆ ತಕ್ಕಂತೆ ತನ್ನ ತಂತ್ರಜ್ಞಾನದಲ್ಲಿ ಅಪ್ಡೇಟ್ ...

news

ಜಿಯೋ ಫೋನ್ ಬುಕಿಂಗ್ ಶುರು! ಮಾಡೋದು ಹೇಗೆ?

ಮುಂಬೈ: ರಿಲಯನ್ಸ್ ಸಂಸ್ಥೆ ತನ್ನ ಮಹತ್ವಾಕಾಂಕ್ಷೆಯ ಜಿಯೋ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ...

Widgets Magazine