ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಿದ ಹಾನರ್‌...!

ಗುರುಮೂರ್ತಿ 

ಬೆಂಗಳೂರು, ಶುಕ್ರವಾರ, 23 ಫೆಬ್ರವರಿ 2018 (19:43 IST)

ದೇಶಿಯ ಮಾರುಕಟ್ಟೆಯಲ್ಲಿ ಮೊಬೈಲ್‌ ಉದ್ಯಮ ದಿನದಿಂದ ದಿನಕ್ಕೆ ಹೊಸತನ ಕಾಣುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಅದರಲ್ಲೂ ಮೊಬೈಲ್ ಕಂಪನಿಗಳು ಒಹಳಷ್ಟು ಉತ್ತಮ ತಂತ್ರಜ್ಞಾನಗಳನ್ನು ಅಳವಡಿಸಿ ಹೊಸ ಮಾದರಿಯ ಮೊಬೈಲ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದು, ಇದೀಗ ಮಾರುಕಟ್ಟೆಯಲ್ಲೇ ತನ್ನದೇ ಆದ ಗ್ರಾಹಕ ವಲಯವನ್ನು ಹೊಂದಿರುವ ಹುವಾವೇಯ ಉಪ ಬ್ರಾಂಡ್ ಆದ ಹಾನರ್ ಹೊಸ ತಂತ್ರಜ್ಞಾನದೊಂದಿಗೆ ತನ್ನ ನೂತನ ಮೊಬೈಲ್ ಅನ್ನು ಪರಿಚಯಿಸಿದೆ.
ಹುವಾವೇಯ ಉಪ ಬ್ರಾಂಡ್ ಆದ ಹಾನರ್ ತನ್ನ ನೂತನ ಮೊಬೈಲ್ ಆದ ಲೈಟ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರಲ್ಲಿ HOTA (ಹುವಾವೇನ ಓವರ್ ದ ಏರ್ ಅಪ್‌ಡೇಟ್) ಮೂಲಕ ಫೇಸ್ ಅನ್‌ಲಾಕ್ ಸಿಸ್ಟಂ ಅನ್ನು ಅಳವಡಿಸಿದ್ದು, ಈ ಮೊಬೈಲ್ ನಿಮ್ಮ ಮುಖದ ಗುರುತಿಸುವಿಕೆಯ ಮೂಲಕ ಪರದೆ ತೆರೆಯುತ್ತದೆ. ಈ ಮೂಲಕ ನಿಮ್ಮ ಮೊಬೈಲ್ ಇನ್ನಷ್ಟು ಸುರಕ್ಷಿತವಾಗಿರಿಸಬಹುದು ಎಂದು ಕಂಪನಿ ತಿಳಿಸಿದೆ.
 
ಈ ಮೊಬೈಲ್ ಫೋನ್ ಅನ್ನು ಬುಧವಾರದಂದು ಮಾರುಕಟ್ಟೆಗೆ ಪರಿಚಯಿಸಿದ್ದು, ಈ ಸಂದರ್ಭದಲ್ಲಿ ಮಾತನಾಡಿದ ಹುವಾಯ್‌ನ‌ ಗ್ರಾಹಕ ವ್ಯಾಪಾರ ಗುಂಪಿನ ಮಾರಾಟದ ಉಪಾಧ್ಯಕ್ಷರಾದ ಪಿ. ಸಂಜೀವ್ ಮಾತನಾಡಿ, ದೇಶಿಯ ಮಾರುಕಟ್ಟೆಯಲ್ಲಿ ಫೇಸ್ ಲಾಕ್ ಬೆಂಬಲಿಸುವ ಅತೀ ಕಡಿಮೆ ಹಾಗೂ ಕೈಗೆಟುಕುವ ದರದ ಸ್ಮಾರ್ಟ್‌ಫೋನ್ ಇದಾಗಿದ್ದು, ಉತ್ತಮ ಹಾರ್ಡವೇರ್ ಮತ್ತು ಸಾಫ್ಟ್‌ವೇರ್ ಕಾನ್ಫಿಗರೇಶನ್‌ಗಳೊಂದಿಗೆ ಈ ಗ್ರಾಹಕರು ನೀಡುವ ಹಣಕ್ಕೆ ಯಾವುದೇ ಮೋಸವಿಲ್ಲ ಎಂದು ಹೇಳಿದರು. 
ಈ ಸ್ಮಾರ್ಟ್‌ಫೋನ್‌ನಲ್ಲಿ 5.65 ಇಂಚಿನ ಪರದೆಯಿದ್ದು ಇದು ಮುಂದೆ ಮತ್ತು ಹಿಂದೆ ಎರಡು ಕಡೆಯಲ್ಲಿ ಡ್ಯೂಯಲ್ ಕ್ಯಾಮರಾವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ EMUI 8.0 ಜೊತೆಗೆ ಆಂಡ್ರಾಯ್ಡ್ 8.0 ಓರಿಯೋ ಮೂಲಕ ಕಾರ್ಯನಿರ್ವಹಿಸುತ್ತಿದ್ದು 3GB, 4GB ಎರಡು ರೀತಿಯ RAM ಅನ್ನು ಹೊಂದಿದ್ದು 32GB ಹಾಗೂ 64GB ಆಂತರಿಕ ಸಂಗ್ರಹಣೆಯನ್ನು ಒಳಗೊಂಡಿದೆ ಅಲ್ಲದೇ ಇದು ಕಪ್ಪು, ನೀಲಿ ಹಾಗೂ ಬುದು ಬಣ್ಣಗಳಲ್ಲಿ ಲಭ್ಯವಿದ್ದು ಅತ್ಯುತ್ತಮವಾದ ಹೊರವಿನ್ಯಾಸವನ್ನು ಹೊಂದಿದೆ. ಇದರ ಬೆಲೆಗಳು RAM ಹಾಗೂ ಆಂತರಿಕ ಸಂಗ್ರಹಣೆಗೆಳಿಗೆ ಅನುಗುಣವಾಗಿದ್ದು 32 GB ಫೋನ್‌ಗೆ 10,999 ರೂಪಾಯಿ ಮತ್ತು 64 GB ಫೋನ್‌ಗೆ 14999 ರೂ. ಎಂದು ಕಂಪನಿ ತಿಳಿಸಿದೆ.



ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಮುಚ್ಚುವ ಆತಂಕದಲ್ಲಿ ಏರ್ ಸೆಲ್ ಕಂಪನಿ!

ನವದೆಹಲಿ: ಒಂದು ಕಾಲದಲ್ಲಿ ಅಗ್ಗದ ಬೆಲೆಗೆ ಕರೆ ಒದಗಿಸಿ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದ ಏರ್ ...

news

ನಿಮ್ಮ ಸ್ಥಳವನ್ನು ಸುಲಭವಾಗಿ ತಲುಪುವಂತೆ ಮಾಡುತ್ತಿದೆ ಮೆಟ್ರೋ...!

ಗಾರ್ಡನ್ ಸಿಟಿಯಲ್ಲಿ ಮೆಟ್ರೋ ಪ್ರಯಾಣಿಕರು ಇನ್ನು ಮುಂದೆ ಪರದಾಡಬೇಕಿಲ್ಲ ತಮ್ಮ ಪ್ರಯಾಣವನ್ನು ಯಾವುದೇ ...

news

ಜಿಯೋ, ಏರಟೆಲ್‌ಗೆ ಸೆಡ್ಡು ಹೊಡೆದ ಐಡಿಯಾ....!!!

ಇತ್ತೀಚಿನ ದಿನಗಳಲ್ಲಿ ಒಂದರ ಮೇಲೊಂದು ಹೊಸ ಆಫರ್‌ಗಳನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯಲು ಏರ್‌ಟೆಲ್ ...

news

ಗೂಗಲ್ ಅಸಿಸ್ಟೆಂಟ್ ಹೊಸ ರೂಪದಲ್ಲಿ ವರ್ಷಾಂತ್ಯಕ್ಕೆ....!

ನೀವು ಹೊಸ ಊರಿಗೋ ದೇಶಕ್ಕೋ ಪ್ರಯಾಣಿಸಿದರೆ ಇನ್ನು ಮುಂದೆ ತಲೆಬಿಸಿ ಮಾಡಿಕೊಳ್ಳುವ ಅಗತ್ಯವಿಲ್ಲ, ಅಲ್ಲಿನ ...

Widgets Magazine