ಜಿಯೋ, ಏರ್ ಟೆಲ್ ನಂತರ ಬಿಎಸ್ಎನ್ಎಲ್ ನಿಂದ ಅಗ್ಗದ ಫೋನ್

ನವದೆಹಲಿ, ಶುಕ್ರವಾರ, 20 ಅಕ್ಟೋಬರ್ 2017 (08:43 IST)

ನವದೆಹಲಿ: ಅಗ್ಗದ ದರದ 4 ಜಿ ಫೋನ್ ಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಿಟ್ಟಿದ್ದ ರಿಲಯನ್ಸ್ ಜಿಯೋ ಬೆನ್ನಲ್ಲೇ ಏರ್ ಟೆಲ್ 4 ಜಿ ಫೋನ್ ಗಳನ್ನು ಬಿಡುಗಡೆ ಮಾಡುವ ಹಂತದಲ್ಲಿದೆ. ಇದೀಗ ಅದರದ್ದೇ ಹಾದಿಯಲ್ಲಿ ಸರ್ಕಾರಿ ಸಾಮ್ಯದ ಬಿಎಸ್ಎನ್ಎಲ್ ಕೂಡಾ ಹೆಜ್ಜೆಯಿಟ್ಟಿದೆ.


 
ಮೈಕ್ರೋಮ್ಯಾಕ್ಸ್ ಸಂಸ್ಥೆಯ ಸಹಯೋಗದೊಂದಿಗೆ ಬಿಎಸ್ಎನ್ಎಲ್ ಹೊರತಂದಿರುವ ಭಾರತ್ 1 ಫೋನ್ ಈಗಾಗಲೇ ಬಿಡುಗಡೆಯಾಗಿದೆ. ಇದು ಕೂಡಾ 4 ಜಿ ಫೀಚರ್ ಹೊಂದಿದ್ದು, ಹೈ ಸ್ಪೀಡ್ ಇಂಟರ್ನೆಟ್ ಒದಗಿಸಲಿದೆ.
 
ಇದರ ಬೆಲೆ 2,200 ರೂ. ಆಗಿರಲಿದೆ. ಇಂದಿನಿಂದ ಮಾರುಕಟ್ಟೆಗೆ ಲಗ್ಗೆಯಿಡಲಿದೆ. 2.4 ಇಂಚು ಸ್ಕ್ರೀನ್ ಇರಲಿದ್ದು, ಕೀ ಪ್ಯಾಡ್ ಫೋನ್ ಇದಾಗಲಿದೆ. ಆದರೆ ಇದು ಆಂಡ್ರಾಯ್ಡ್ ಫೋನ್ ಆಗಿರುವುದಿಲ್ಲ. ಹೀಗಾಗಿ ಗೂಗಲ್ ಪ್ಲೇಸ್ಟೋರ್ ಲಭ್ಯವಿರುವುದಿಲ್ಲ. ಸಹಜವಾಗಿ ವ್ಯಾಟ್ಸಪ್ ಸೇವೆ ಪಡೆಯಲು ಸಾಧ್ಯವಾಗುವುದಿಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ದೀಪಾವಳಿ ನಂತರ ಮತ್ತೆ ಜಿಯೋ ಫೋನ್ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್

ನವದೆಹಲಿ: ರಿಲಯನ್ಸ್ ಜಿಯೋ ಫೋನ್ ಬುಕಿಂಗ್ ಮಾಡಬೇಕೆಂದಿದ್ದ ಗ್ರಾಹಕರು ಇತ್ತೀಚೆಗೆ ವೆಬ್ ಸೈಟ್ ಹ್ಯಾಕ್ ಆಗಿ ...

news

ಜಿಯೋ ಫೋನ್ ಹಿಂದಿಕ್ಕಿದ ಏರ್ ಟೆಲ್ 4 ಜಿ ಅಗ್ಗದ ಫೋನ್ ಬೆಲೆ ಎಷ್ಟು ಗೊತ್ತಾ?!

ನವದೆಹಲಿ: ರಿಲಯನ್ಸ್ ಜಿಯೋ 4 ಜಿ ಅಗ್ಗದ ಫೋನ್ ಘೋಷಿಸಿದ ಬೆನ್ನಲ್ಲೇ ಏರ್ ಟೆಲ್ ಕೂಡಾ ಅಗ್ಗದ ಫೋನ್ ...

news

ಕೇವಲ 149 ರೂ.ಗಳಿಗೆ ರಿಲಯನ್ಸ್ ಜಿಯೋ ಬಂಪರ್ ಕೊಡುಗೆ!

ನವದೆಹಲಿ: ತನ್ನ ಗ್ರಾಹಕರನ್ನು ಖುಷಿಪಡಿಸಲು ರಿಲಯನ್ಸ್ ಜಿಯೋ ಸಂಸ್ಥೆ ಮತ್ತೊಂದು ಬಂಪರ್ ಆಫರ್ ನೀಡಿದೆ. ...

news

ಗ್ರಾಹಕರೇ ಎಚ್ಚರ: ಆ.13 ರಂದು ಪೆಟ್ರೋಲ್ ಬಂಕ್‌ಗಳು ಬಂದ್

ಬೆಂಗಳೂರು: ಕೇಂದ್ರ ಸರಕಾರದ ನೀತಿಗಳನ್ನು ವಿರೋಧಿಸಿ ಆಕ್ಟೋಬರ್ 13 ರಂದು ಒಂದು ದಿನ ಪೆಟ್ರೋಲ್ ಬಂಕ್ ...

Widgets Magazine
Widgets Magazine