ರೂ.345ಕ್ಕೆ 28 ಜಿಬಿ ಡಾಟಾ ನೀಡಲಿರುವ ಏರ್‌ಟೆಲ್

New Delhi, ಶನಿವಾರ, 4 ಮಾರ್ಚ್ 2017 (22:29 IST)

Widgets Magazine

ಟೆಲಿಕಾಂ ಕ್ಷೇತ್ರದಲ್ಲಿ ವಿವಿಧ ಆಫರ್‌ಗಳನ್ನು ಪ್ರಕಟಿಸುತ್ತಾ ಸಂಚಲನ ಸೃಷ್ಟಿಸುತ್ತಿರುವ ಜಿಯೋಗೆ ಪೈಪೋಟಿ ನೀಡಲು ಬೇರೆ ನೆಟ್‌ವರ್ಕ್ ಕಂಪೆನಿಗಳು ಪ್ರಯತ್ನಿಸುತ್ತಿವೆ. ಇದರ ಭಾಗವಾಗಿ ಪ್ರಮುಖ ಮೊಬೈಲ್ ಕಂಪೆನಿ ಏರ್‌ಟೆಲ್ ಬಳಕೆದಾರರಿಗೆ ಹೊಸ ಆಫರ್ ಪ್ರಕಟಿಸಿದೆ.
 
ಕೇವಲ ರೂ.345ಕ್ಕೆ ರೀಚಾರ್ಜ್ ಮಾಡಿಕೊಂಡರೆ ಅವರಿಗೆ 28 ಜಿಬಿ ಡಾಟಾ, ಅನಿಯಮಿತ ಲೋಕಲ್ ಮತ್ತು ಎಸ್ಟಿಡಿ ಕರೆಗಳನ್ನು ನೀಡಲಿದೆ. ದಿನಕ್ಕೆ 1ಜಿಬಿಯಂತೆ 28 ದಿನಗಳಿಗೆ ಬೆಳಗ್ಗೆ 500 ಎಂಬಿ, ರಾತ್ರಿ 500 ಎಂಬಿ ಡಾಟಾ ನೀಡುವುದಾಗಿ ಪ್ರಕಟಿಸಿದೆ.
 
ಅಷ್ಟೇ ಅಲ್ಲದೆ ರೂ.549 ರೀಚಾರ್ಜ್ ಮಾಡಿಕೊಂಡರೆ ಅವರು ಯಾವುದೇ ಮಿತಿ ಇಲ್ಲದೆ 1ಜಿಬಿ ಡಾಟಾವನ್ನು ದಿನದಲ್ಲಿ ಯಾವಾಗ ಬೇಕಾದರೂ ಬಳಸಿಕೊಳ್ಳಬಹುದು. ಮಾರ್ಚ್ 31ರೊಳಗೆ ರೀಚಾರ್ಜ್ ಮಾಡಿಕೊಳ್ಳುವವರಿಗೆ ಈ ಆಫರ್ ಸಿಗಲಿದೆ. 
 
ರೂ.549 ರೀಚಾರ್ಜ್ ಮಾಡಿಸಿಕೊಳ್ಳುವವರಿಗೆ ವಾರಕ್ಕೆ 1200 ನಿಮಿಷಗಳ ಉಚಿತ ಟಾಕ್‌ಟೈಮ್ ನೀಡಲಿದ್ದಾರೆ. ಅದೂ ಸಹ ದಿನಕ್ಕೆ ಕೇವಲ 300 ನಿಮಿಷಗಳಷ್ಟು ಮಾತ್ರ. ಆ ಮಿತಿ ದಾಟಿದರೆ  ನಿಮಿಷಕ್ಕೆ 30 ಪೈಸೆ ಚಾರ್ಚ್ ಆಗುತ್ತದೆ. ವಾರದಲ್ಲಿ ಒಂದೇ ನಂಬರ್‌ಗೆ 100 ಬಾರಿ ಕರೆ ಮಾಡಿದರೆ 101ನೇ ಕರೆಯಿಂದ ನಿಮಿಷಕ್ಕೆ 30 ಪೈಸೆ ಹೆಚ್ಚುವರಿ ವಸೂಲಿ ಮಾಡಲಾಗುತ್ತದೆ ಎಂದು ಕಂಪೆನಿ ತಿಳಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಏರ್‌ಟೆಲ್ ಆಫರ್ ರೂ.34ಕ್ಕೆ 28 ಜಿಬಿ ರಿಲಯನ್ಸ್ ಜಿಯೋ After Reliance Jio Prime Plans Airtel Offers 28gb Data At Rs. 345

Widgets Magazine

ವ್ಯವಹಾರ

news

ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಫ್ಲಿಪ್‍ಕಾರ್ಟ್ ಟಾಪ್

ಭಾರತದ ಅತಿದೊಡ್ದ ಆನ್‌ಲೈನ್ ರೀಟೇಲ್ ಕಂಪೆನಿ ಫ್ಲಿಪ್‌ಕಾರ್ಟ್ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಸಿಂಹಪಾಲನ್ನು ...

news

ಸದ್ಯಸ್ಯರಿಗೆ ಹೆಚ್ಚುವರಿ 5ಜಿಬಿ ಡಾಟಾ: ರಿಲಯನ್ಸ್ ಜಿಯೋ

ರೂ.99ಕ್ಕೆ ವಾರ್ಷಿಕ ಸದಸ್ಯತ್ವವ ಪಡೆದು ತಿಂಗಳಿಗೆ ರೂ.303 ರೀಚಾರ್ಜ್ ಮಾಡಿಕೊಳ್ಳುವವರಿಗೆ ಹೆಚ್ಚುವರಿ ...

news

ಸ್ಕೈಪ್ ವೈಫೈನ್ನು ನಿಲ್ಲಿಸುತ್ತಿದೆ ಮೈಕ್ರೋಸಾಫ್ಟ್!

ಸ್ಕೈಪ್ ವೈಫೈ ಆಪನ್ನು ಮೈಕ್ರೋಸಾಫ್ಟ್ ನಿಲ್ಲಿಸುತ್ತಿರುವುದಾಗಿ ಸುದ್ದಿ ಇದೆ. ಭಾರತೀಯರಿಗಾಗಿ ವಿಶೇಷ ...

news

ಲಂಬೋರ್ಗಿನಿ ಅವೆಂಡಾರ್ ಎಸ್ ಬೆಲೆ ರೂ.5.01 ಕೋಟಿ!

ಇಟಲಿ ಸೂಪರ್ ಸ್ಫೋರ್ಟ್ಸ್ ಕಾರುಗಳ ದಿಗ್ಗಜ ಲಂಬೋರ್ಗಿನಿ ತನ್ನ ಹೊಚ್ಚಹೊಸ ಅವೆಂಡಾರ್ ಎಸ್ ಎಲ್‌ಪಿ 740-4 ...

Widgets Magazine