ಹೊಸ ಐಫೋನ್ ಖರೀದಿಸುವ ಏರ್ ಟೆಲ್ ಗ್ರಾಹಕರು ಹುಷಾರ್!

ನವದೆಹಲಿ, ಬುಧವಾರ, 26 ಸೆಪ್ಟಂಬರ್ 2018 (09:09 IST)

ನವದೆಹಲಿ: ಭಾರತದಲ್ಲಿ ಹೊಸ ಐಫೋನ್ ಖರೀದಿಸುವ ಏರ್ ಟೆಲ್ ಗ್ರಾಹಕರು ಮಹತ್ವದ ವಿಚಾರವೊಂದನ್ನು ತಿಳಿದುಕೊಳ್ಳಲೇಬೇಕು.
 
ಆಪಲ್ ಸಂಸ್ಥೆ ಕೊನೆಗೂ ಡ್ಯುಯಲ್ ಸಿಮ್ ಅಳವಡಿಸಬಹುದಾದ ಐಫೋನ್ ಒಂದನ್ನು ಬಿಡುಗಡೆ ಮಾಡಿದೆ. ಆದರೆ ಭಾರತದ ಗ್ರಾಹಕರಿಗೆ ಒಂದು ಷರತ್ತೂ ಕೂಡಾ ಅನ್ವಯವಾಗಲಿದೆ.
 
ಈ ಡ್ಯುಯಲ್ ಸಿಮ್ ಗಳ ಪೈಕಿ ಒಂದು ಇಸಿಮ್ ಮತ್ತು ಇನ್ನೊಂದು ನ್ಯಾನೋ ಸಿಮ್ ಸ್ಲಾಟ್ ಇರಲಿದೆ. ಸದ್ಯಕ್ಕೆ ಜಿಯೋ ಮಾತ್ರ ಪೋಸ್ಟ್ ಪೇಯ್ಡ್ ಮತ್ತು ಪ್ರಿಪೈಯ್ಡ್ ಗ್ರಾಹಕರಿಗೆ ಇ ಸಿಮ್ ಸೌಲಭ್ಯ ನೀಡಿದೆ. ಏರ್ ಟೆಲ್ ಗ್ರಾಹಕರಿಗೆ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಮಾತ್ರ ಇ ಸಿಮ್ ಸೌಲಭ್ಯ ಸಿಗುತ್ತಿದೆ. ಹೀಗಾಗಿ ಒಂದು ವೇಳೆ ನೀವು ಪ್ರಿಪೇಯ್ಡ್ ಗ್ರಾಹಕರಾಗಿದ್ದು, ಈ ಫೋನ್ ಖರೀದಿಸಬೇಕಾದರೆ ಪೋಸ್ಟ್ ಪೇಯ್ಡ್ ಪ್ಲ್ಯಾನ್ ಗೆ ಬದಲಾಯಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಹೊಸ ಫೋನ್ ಖರೀದಿಸುವ ಮೊದಲು ಈ ಅಂಶಗಳು ಗಮನದಲ್ಲಿರಲಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಮುಂಬೈನಲ್ಲಿ ಪೆಟ್ರೋಲ್ ಬೆಲೆ ಮತ್ತಷ್ಟು ಏರಿಕೆ!

ಮುಂಬೈ: ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗುತ್ತಿದ್ದು ಮುಂಬೈನಲ್ಲಿ ಇಂದು (ಸೋಮವಾರ) ಪೆಟ್ರೋಲ್ ಬೆಲೆ ...

news

ಸಣ್ಣ ಉಳಿತಾಯಗಳ ಮೇಲಿನ ಬಡ್ಡಿ ದರ ಹೆಚ್ಚಳ

ನವದೆಹಲಿ: ಸರಕಾರವು ಸಾರ್ವಜನಿಕ ಭವಿಷ್ಯ ನಿಧಿ ಹಾಗೂ ರಾಷ್ಟ್ರೀಯ ಉಳಿತಾಯ ಪತ್ರ ಸೇರಿದಂತೆ ಸಣ್ಣ ಉಳಿತಾಯಗಳ ...

news

ಮೂರು ಕ್ಯಾಮರಾ ಸೆಟಪ್ ಜೊತೆಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ7..!!

ಸ್ಯಾಮ್‌ಸಂಗ್ ತನ್ನ ನೂತನ ಮಧ್ಯಮ-ದರದ ಮೊಬೈಲ್ ಗ್ಯಾಲಕ್ಸಿ ಎ7 ಅನ್ನು ದಕ್ಷಿಣ ಕೊರಿಯಾದಲ್ಲಿ ಲಾಂಚ್ ...

news

ಮತ್ತೆ ಮೂರು ಬ್ಯಾಂಕ್‍ ಗಳ ವಿಲೀನಕ್ಕೆ ಕೇಂದ್ರ ಸರ್ಕಾರ ನಿರ್ಧಾರ. ಅವು ಯಾವುವು ಗೊತ್ತಾ?

ನವದೆಹಲಿ : ಸಾರ್ವಜನಿಕ ಸ್ವಾಮ್ಯದ ದೇನಾ ಬ್ಯಾಂಕ್, ವಿಜಯ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್‍ಗಳನ್ನು ...

Widgets Magazine