ಇದೀಗ ಮತ್ತೊಂದು ದರ ಏರಿಕೆಯ ಶಾಕ್!

ಬೆಂಗಳೂರು, ಸೋಮವಾರ, 16 ಜುಲೈ 2018 (14:29 IST)

ಬೆಂಗಳೂರು : ಈಗಾಗಲೇ ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಕಂಗಲಾದ ಜನರಿಗೆ ಇದೀಗ ಮತ್ತೊಂದು ದರ ಏರಿಕೆಯ ಶಾಕ್ ಕಾದಿದೆ.


ಅದೇನೆಂದರೆ ಪೆಟ್ರೋಲ್, ಡೀಸೆಲ್ ದರಗಳು  ಏರಿಕೆಯಾಗಿರುವ ಹಿನ್ನಲೆಯಲ್ಲಿ ಇದೀಗ ಖಾಸಗಿ ಪ್ರವಾಸಿ ಟ್ಯಾಕ್ಸಿ ಮಾಲೀಕರು ಸಹ ದರ ಏರಿಕೆ ಮಾಡಲು ಸಿದ್ಧರಾಗುತ್ತಿದ್ದು ಆ ಮೂಲಕ ಶೇ. 5 ರಿಂದ 10 ರಷ್ಟು ಏರಿಕೆಯಾಗಲಿದೆ ಎನ್ನಲಾಗಿದೆ.


ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು 2018-19ನೇ ಸಾಲಿನ ಬಜೆಟ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಏರಿಸಿದ್ದು, ಅದು ಶುಕ್ರವಾರದಿಂದ ಅನ್ವಯವಾಗಿದೆ. ಈ ದರ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿದ ಪ್ರವಾಸಿ ಟ್ಯಾಕ್ಸಿ ಮಾಲೀಕರು ಈ ನಿರ್ಧಾರ ಕೈಗೊಂಡಿದ್ದಾರೆ. ಆದರೆ ತಮ್ಮ ದೈನಂದಿನ ಪ್ರಯಾಣಕ್ಕಾಗಿ ಖಾಸಗಿ ಟ್ಯಾಕ್ಸಿಗಳನ್ನೇ ಅವಲಂಬಿಸಿಕೊಂಡಿರುವವರಿಗೆ ಈ ದರ ಏರಿಕೆಯ ಬಿಸಿ ತಟ್ಟಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ದೇಶದ 2ನೇ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದ ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್

ನವದೆಹಲಿ : ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ನ ಮಾರುಕಟ್ಟೆ ಈಗ 7 ಲಕ್ಷ ಕೋಟಿ ವರಮಾನ ಹೊಂದುವ ಮೂಲಕ ...

news

ಎಲ್ಪಿಜಿ ಸಬ್ಸಿಡಿ ದರವನ್ನು ಶೇ. 60 ಹೆಚ್ಚಿಸಿದ ಕೇಂದ್ರ ಸರ್ಕಾರ

ನವದೆಹಲಿ : ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆಯಾಗಿರುವ ಹಿನ್ನಲೆಯಲ್ಲಿ ಸಬ್ಸಿಡಿ ಸಹಿತ ...

news

ಸ್ಮಾರ್ಟ್‌ಫೋನ್ ಅನುಕೂಲ ಅನಾನುಕೂಲಗಳೆಷ್ಟು

ಜೀವನ ಎನ್ನುವ ಹರಿವಿನಲ್ಲಿ ಮನುಷ್ಯ ತನ್ನನ್ನ ತಾನು ಅಭಿವೃದ್ಧಿಪಡಿಸಿಕೊಳ್ಳುತ್ತಾ ಇಂದು ಅಭಿವೃದ್ಧಿ ...

news

ಅಮೆಜಾನ್ ಗ್ರಾಹಕರಿಗೊಂದು ಸಿಹಿಸುದ್ದಿ ಜುಲೈ 16ರಿಂದ ಪ್ರೈಂ ಡೇ ಸೇಲ್!

ನವದೆಹಲಿ: ಅಮೆಜಾನ್ ತನ್ನ ಪ್ರೈಮ್ ಗ್ರಾಹಕರಿಗೆ ಜುಲೈ 16 ಹಾಗೂ 17ರಂದು ಭಾರಿ ಮಾರಾಟ ಮೇಳವನ್ನು ...

Widgets Magazine
Widgets Magazine