ನೀವು ಎಸ್‌ಬಿಐ ಬ್ಯಾಂಕ್ ಗ್ರಾಹಕರೆ? ಹಾಗಾದ್ರೆ ಮಾಸಿಕ 15000 ರೂ ಆದಾಯ ಗಳಿಸಿ

ನವದೆಹಲಿ, ಗುರುವಾರ, 16 ನವೆಂಬರ್ 2017 (16:04 IST)

ನೀವು ಎಸ್‌ಬಿಐ ಬ್ಯಾಂಕ್ ಗ್ರಾಹಕರೆ ಹಾಗಾದ್ರೆ ಮಾಸಿಕ 15000 ರೂ ಆದಾಯ ಗಳಿಸಬಹುದು. ನಂಬಲು ಸಾಧ್ಯವಾಗುತ್ತಿಲ್ಲವೇ? ದೇಶದಲ್ಲಿಯೇ ಅತಿ ದೊಡ್ಡ ಬ್ಯಾಂಕ್ ಎನ್ನುವ ಎಸ್‌ಬಿಐ ಖಾತೆದಾರರಿಗೆ ಚಿನ್ನದ ಅವಕಾಶ ನೀಡಿದೆ.
 
ಬ್ಯಾಂಕ್ ತನ್ನ ಯೋಜನಾ ಅಡಿಯಲ್ಲಿ ಖಾತೆದಾರರು ಬ್ಯಾಂಕನೊಂದಿಗೆ ಕೂಡಿ ಕೆಲಸ ಮಾಡುವ ಮೂಲಕ ತಿಂಗಳಿಗೆ 15000 ರೂಪಾಯಿಗಳನ್ನು ಗಳಿಸುವ ಅವಕಾಶವನ್ನು ನೀಡಿದೆ.
 
ಎಸ್‌ಬಿಐ ಬ್ಯಾಂಕ್ ಯೂಥ್ ಫೆಲೋಶಿಪ್ ಯೋಜನೆಯ ಪ್ರಕಾರ ಖಾತೆದಾರನು ಬ್ಯಾಂಕ್‌ನಲ್ಲಿ 13 ತಿಂಗಳುಗಳ ಕಾಲ ಕಾರ್ಯನಿರ್ವಹಿಸಬೇಕಾಗುತ್ತದೆ. ಯೂಥ್ ಫೆಲೋಶಿಪ್ ಅಡಿಯಲ್ಲಿ ನೀವು ಹಳ್ಳಿಗಳಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಅಲ್ಲಿನ ಗ್ರಾಮಸ್ಥರಿಗೆ ಮತ್ತು ಮಕ್ಕಳಿಗೆ ಶಿಕ್ಷಣ ನೀಡಬೇಕಾಗುತ್ತದೆ. ಶಿಕ್ಷಣದ ಬಗ್ಗೆ ಅರಿವು ಮೂಡಿಸಬೇಕಾಗುತ್ತದೆ. 
 
ಹಳ್ಳಿಗಳಲ್ಲಿ ಶಿಕ್ಷಣ ನೀಡಲು ಅಗತ್ಯವಾಗುವ ಎಲ್ಲಾ ಸೌಲಭ್ಯಗಳನ್ನು ಬ್ಯಾಂಕ್ ಒದಗಿಸುತ್ತದೆ.ಗ್ರಾಮಗಳಿಗೆ ತೆರಳಿ ಮಕ್ಕಳು, ಯುವಕರು ಪ್ರತಿಯೊಬ್ಬರಿಗೆ ಶಿಕ್ಷಣದ ಮಹತ್ವ ಸಾರುವುದಲ್ಲದೇ ಯೋಜನೆಯಲ್ಲಿ ತೊಡಗಿಸಿಕೊಳ್ಳುವಂತೆ ಮನವರಿಕೆ ಮಾಡಿಕೊಳ್ಳಬೇಕು.
 
ಗ್ರಾಮಗಳಲ್ಲಿ ಯಾವ ರೀತಿ ಕಾರ್ಯನಿರ್ವಹಿಸಬೇಕು ಎನ್ನುವ ಬಗ್ಗೆ ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ತರೇಬೇತಿ ನೀಡುತ್ತಾರೆ. ಪದವೀಧರರು ಮತ್ತು ಯುವ ವೃತ್ತಿಪರರು ಎನ್‌ಜಿಓ ಸಂಸ್ಥೆಗಳೊಂದಿಗೆ ಕಾರ್ಯನಿರ್ವಹಿಸಬೇಕಾಗುತ್ತದೆ. ಇದಕ್ಕೆ ಬ್ಯಾಂಕ್ ಮಾಸಿಕ 15 ಸಾವಿರ ರೂ ವೇತನ ನೀಡುತ್ತದೆ.
 
ಗ್ರಾಮಗಳಿಗೆ ಭೇಟಿ, ಆಹಾರ, ಭೋಜನಕ್ಕಾಗಿ ತಗಲುವ ವೆಚ್ಚವನ್ನು ಬ್ಯಾಂಕ್ ಪ್ರತ್ಯೇಕವಾಗಿ ನೀಡಲಿದೆ. ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಳಿಸಿದ ನಂತರ ಬ್ಯಾಂಕ್ 30 ಸಾವಿರ ಮರುಪಾವತಿ ಮೊತ್ತವನ್ನು ಪಡೆಯಬಹುದಾಗಿದೆ.ಹೆಚ್ಚಿನ ವಿವರಗಳಿಗಾಗಿ ಹತ್ತಿರದ ಎಸ್‌ಬಿಐ ಶಾಖೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಪಿಎಂ ಮೋದಿ ಸರಕಾರದ ಬಜೆಟ್ ಚುನಾವಣೆಗೆ ಪೂರಕವಾಗಲಿದೆಯೇ?

ಕೇಂದ್ರದ ಈ ಬಾರಿಯ ಬಜೆಟ್ ಮುಂಬರುವ ಸಾರ್ವತ್ರಿಕ ಚುನಾವಣೆಗಳಿಗೆ ಬುನಾದಿ ಹಾಕಿದೆ. ಮುಂಬರುವ ...

news

ಸಾಮಾನ್ಯ ಬಜೆಟ್ ನಡೆದು ಬಂದ ದಾರಿ

ನವದೆಹಲಿ: ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ಸಮಯವನ್ನು ಬೆಳಗ್ಗೆಗೆ ಬದಲಾಯಿಸಿತು ...

news

ಬಿಜೆಪಿ ಬಜೆಟ್ ಕಾರ್ಪೊರೇಟ್‌ಗಳ ಪರವಾಗಿರಲಿದೆ: ಕಾಂಗ್ರೆಸ್ ಟೀಕೆ

ಬಿಜೆಪಿಯ ಪೂರ್ಣವರ್ಷಾವಧಿಯ ಬಜೆಟ್ ಪೊಳ್ಳು ಎಂದು ವಿರೋಧ ಪಕ್ಷ ಟೀಕಿಸಿದ್ದು, ಇದು ಮುನ್ನೋಟದ ಕೊರತೆ ...

news

ಜಗತ್ತಿನಾದ್ಯಂತ ವಾಟ್ಸಾಪ್ ಕ್ರ್ಯಾಷ್...!

ನವದೆಹಲಿ: ಜಗತ್ತಿನಾದ್ಯಂತ ವಾಟ್ಸಾಪ್ ಕ್ರ್ಯಾಷ್ ಆಗಿದ್ದು ಕಾರ್ಯನಿರ್ವಹಿಸುತ್ತಿಲ್ಲ. ಇಡೀ ವಿಶ್ವದಾದ್ಯಂತ ...

Widgets Magazine
Widgets Magazine