ಖಾತೆ ಹೊಂದಿರದಿದ್ದರೂ ಈ ಬ್ಯಾಂಕ್ ನಲ್ಲಿ ಸಿಗುತ್ತೆ ಎಟಿಎಂ ಕಾರ್ಡ್

ಬೆಂಗಳೂರು, ಬುಧವಾರ, 10 ಏಪ್ರಿಲ್ 2019 (09:23 IST)

ಬೆಂಗಳೂರು : ಸಾಮಾನ್ಯವಾಗಿ ಬ್ಯಾಂಕ್ ಗಳು ಖಾತೆ ಹೊಂದಿದ ಗ್ರಾಹಕರಿಗೆ ಮಾತ್ರ ಎಟಿಎಂ ಕಾರ್ಡ್ ನೀಡುತ್ತದೆ. ಆದರೆ ಈ ಬ್ಯಾಂಕ್ ಖಾತೆ ಹೊಂದಿರದ ಗ್ರಾಹಕರಿಗೂ ಎಟಿಎಂ ಕಾರ್ಡ್ ನೀಡುತ್ತದೆಯಂತೆ.


ಹೌದು. ಪಂಜಾಬ್ ನ್ಯಾಷನಲ್ ಬ್ಯಾಂಕ್, ಬಿ.ಎನ್.ಬಿ. ಸುವಿದಾ ಕಾರ್ಡ್ ಎಂಬ  ಹೆಸರಿನ ಪ್ರಿಪೇಯ್ಡ್ ಎಟಿಎಂ ಕಾರ್ಡ್ ನೀಡುತ್ತಿದೆ. ಇದಕ್ಕೆ ಬ್ಯಾಂಕ್ ನಲ್ಲಿ ಖಾತೆ ಹೊಂದಿರಬೇಕಾಗಿಲ್ಲ. ಆದರೆ ಈ ಕಾರ್ಡ್ ದಾರರು ಮೊದಲು ರಿಚಾರ್ಜ್ ಮಾಡಿ ನಂತರ ಬಳಕೆ ಮಾಡಬೇಕು.


ಕಾರ್ಡ್ ದಾರರು ತಮಗೆ ಬೇಕಾದಷ್ಟು ಹಣವನ್ನು ಬ್ಯಾಂಕ್ ಖಾತೆಯಿಂದ ಕಾರ್ಡ್ ಗೆ ವರ್ಗಾವಣೆ ಮಾಡಿಕೊಳ್ಳಬೇಕು. ನಂತರ ಕಾರ್ಡ್ ಬಳಕೆ ಮಾಡಬಹುದು. ಈ ಪ್ರಿಪೇಯ್ಡ್ ಕಾರ್ಡ್ ಗೆ 500 ರೂಪಾಯಿಯಿಂದ 50,000 ರೂಪಾಯಿಯವರೆಗೆ ರಿಚಾರ್ಜ್ ಮಾಡಬಹುದು. ಈ ಕಾರ್ಡ್ ಮೂರು ವರ್ಷಗಳ ಕಾಲ ಮಾನ್ಯತೆ ಹೊಂದಿದ್ದು, ಮಾರುಕಟ್ಟೆಯಲ್ಲಿ, ಸ್ವೈಪ್ ಮಷಿನ್ ಗಳಲ್ಲಿ ಇದನ್ನು ಬಳಕೆ ಮಾಡಬಹುದಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

 



ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಬ್ಯಾಂಕ್ ಉದ್ಯೋಗ ಮಾಡಬೇಕೆಂದು ಬಯಸುವವರಿಗೆ ಇಲ್ಲಿದೆ ಸಿಹಿಸುದ್ದಿ

ಬೆಂಗಳೂರು : ಬ್ಯಾಂಕ್ ಉದ್ಯೋಗ ಮಾಡಬೇಕೆಂದು ಬಯಸುವವರಿಗೆ ಬ್ಯಾಂಕ್ ವಲಯದಿಂದ ಸಿಹಿಸುದ್ದಿ. ಅದೇನೆಂದರೆ ...

news

ಫೇಸ್ ಬುಕ್ ಬಳಕೆದಾರರೇ ಎಚ್ಚರ! ಸಂಸ್ಥೆಯೇ ನಿಮ್ಮ ಡೇಟಾ,ಖಾಸಗಿ ಸಂದೇಶಗಳನ್ನು ಮಾರಾಟ ಮಾಡುತ್ತಿದೆಯಂತೆ

ನವದೆಹಲಿ : ಫೇಸ್ ಬುಕ್ ನಲ್ಲಿ ಬಳಕೆದಾರರು ಖಾಸಗಿ ಸಂದೇಶ ಕಳುಹಿಸುವ ಮುನ್ನ ಎಚ್ಚರಿಕೆಯಿಂದಿರಿ. ಯಾಕೆಂದರೆ ...

news

ಬಿಜೆಪಿ ನೀರವ್ ಮೋದಿ, ಲಲಿತ್ ಮೋದಿ, ಮಲ್ಯ, ಮೋದಿಯಂತ ಭ್ರಷ್ಟರನ್ನು ನೀಡಿದೆ-ಸಿ.ಎಂ. ಇಬ್ರಾಹಿಂ

ಹಾಸನ : ಸಿ.ಎಂ.ಇಬ್ರಾಹಿಂ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಪ್ರಧಾನಿ ದೇವೇಗೌಡರ ಜೊತೆ ಹೋಲಿಕೆ ...

news

ಹೊಸದಾಗಿ ಮನೆ ಕಟ್ಟೋರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ

ನವದೆಹಲಿ : ಗೃಹ ಸಾಲದ ಬಡ್ಡಿದರಗಳನ್ನು ಇಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ಆ ಮೂಲಕ ಹೊಸದಾಗಿ ...

Widgets Magazine