ಕೇವಲ ರೂ. 36ಕ್ಕೆ ಬಿಎಸ್‌ಎನ್ಎಲ್ 1 ಜಿಬಿ ಡಾಟಾ

New Delhi, ಭಾನುವಾರ, 5 ಫೆಬ್ರವರಿ 2017 (11:47 IST)

Widgets Magazine

ಸರಕಾರಿ ಸ್ವಾಮ್ಯದ ದೂರಸಂಪರ್ಕ ಕಂಪೆನಿ ಬಿಎಸ್ಎನ್ಎಲ್ ಡಾಟಾ ದರಗಳನ್ನು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿದೆ. ಕೇವಲ ರೂ.36ಕ್ಕೆ 1 ಜಿಬಿ 3ಜಿ ಡಾಟಾ ಪ್ಲಾನನ್ನು ಪ್ರಕಟಿಸಿದೆ. ಈಗಿರುವ ಟಾರಿಫ್ ವೋಚರ್‌ಗಳಿಗೆ ಪ್ರಸ್ತುತ ಡಾಟಾ ಹೋಲಿಕೆ ಮಾಡಿದರೆ, ಈ ತಿಂಗಳ 6ರಿಂದ 4 ಪಟ್ಟು ಅಧಿಕವಾಗಿ ಕೊಡುತ್ತಿರುವುದಾಗಿ ಹೇಳಿದೆ. 
 
ರೂ.291ಕ್ಕೆ ರೀಚಾರ್ಜ್ ಮಾಡಿಕೊಂಡರೆ ಇಲ್ಲಿಯವರೆಗೆ 2 ಜಿಬಿ ಡಾಟಾ ನೀಡಲಾಗುತ್ತಿತ್ತು. ಇನ್ನು ಮುಂದೆ ಇದೇ ಬೆಲೆಗೆ 8ಜಿಬಿ ಡಾಟಾ ಲಭ್ಯವಾಗಲಿದೆ. ಇದರ ವ್ಯಾಲಿಡಿಟಿ 28 ದಿನಗಳು. ರೂ.78ಕ್ಕೆ 2ಜಿಬಿ ಡಾಟಾ ಸಿಗಲಿದೆ. ಒಂದು ಜಿಬಿಗೆ ಕೇವಲ ರೂ.36ರಷ್ಟಾಗಲಿದೆ. ಇದು ಅತ್ಯಂತ ಕಡಿಮೆ ದರ ಎಂದಿದೆ ಬಿಎಸ್ಎನ್ಎಲ್. 
 
ರಿಲಯನ್ಸ್ ಜಿಯೋ ಡಾಟಾ, ಕರೆಗಳು ಮತ್ತು ಎಸ್ಎಂಎಸ್‌ ಸೇವೆಯನ್ನು ಆರು ತಿಂಗಳ ಕಾಲ ಉಚಿತವಾಗಿ ನೀಡಿದ ಪರಿಣಾಮ ಬಿಎಸ್ಎನ್ಎಲ್ ಸೇರಿದಂತೆ ಹಲವಾರು ದೂರಸಂಪರ್ಕ ಕಂಪೆನಿಗಳಿಗೆ ಭಾರಿ ಹೊಡೆತ ಬಿದ್ದಿದೆ. ಈಗ ತನ್ನ ಗ್ರಾಹಕರನ್ನು ಸೆಳೆಯಲು ನಾನಾ ರೀತಿಯ ಪ್ಲಾನ್‌ಗಳನ್ನು ಬಿಡಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಬಿಎಸ್ಎನ್ಎಲ್ ದರಪಟ್ಟಿ ಕೇವಲ ರೂ.36ಕ್ಕೆ 1ಜಿಬಿ ಡಾಟಾ Bsnl Slashes 3g Tariffs Offers 1gb Data For Rs 36

Widgets Magazine

ವ್ಯವಹಾರ

news

ಬಜೆಟ್‌ನಿಂದ ರಿಯಲ್ ಎಸ್ಟೇಟ್‌ನ ಗಾಯ ಮಾಯಲಿದೆ

ನೋಟು ರದ್ದತಿ ಬಳಿಕ ರಿಯಲ್ ಎಸ್ಟೇಟ್ ಮೇಲೆ ಸ್ವಲ್ಪ ಪೆಟ್ಟು ಬಿದ್ದಿತ್ತು. ಬಜೆಟ್‌ನಲ್ಲಿ ಜನರಿಗೆ ಕೈಗೆಟಕುವ ...

news

ಬಜೆಟ್ 2017 ವಿಶ್ಲೇಷಣೆ: ಕೈಗೆಟುಕುವ ದರದಲ್ಲಿ ವಸತಿ

`ಉತ್ತಮ’ ಎನಿಸುವಂತಹ ಬಜೆಟ್ ಮಂಡಿಸಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, ಪ್ರತಿಯೊಬ್ಬರಿಗೂ ಒಂದಿಲ್ಲಾ ...

news

ಹೀರೋ ಎಲಕ್ಟ್ರಿಕ್ ಫ್ಲ್ಯಾಶ್ ಫ್ರೀ ಬುಕಿಂಗ್ ಆರಂಭ

ಕಡಿಮೆ ದೂರ ಪ್ರಯಾಣಿಸುವ, ಶಬ್ದ ಮಾಲಿನ್ಯ, ವಾಯು ಮಾಲಿನ್ಯದ ಗೊಡಬೆ ಬೇಡ ಎನ್ನುವವರಿಗೆ, ಆರಾಮದಾಯ ಸವಾರಿಗೆ ...

news

ಝಡ್‍ಟಿಇ ಹೊಸ ಸ್ಮಾರ್ಟ್‌ಫೋನ್ ಬ್ಲೇಡ್ ಎ2 ಪ್ಲಸ್

ಚೀನಾ ಮೂಲದ ಪ್ರಮುಖ ಸ್ಮಾರ್ಟ್‌ಫೋನ್ ತಯಾರಿ ಸಂಸ್ಥೆ ಝಡ್‌ಟಿಇ ಭಾರತದಲ್ಲಿ ಹೊಚ್ಚಹೊಸ ಸ್ಮಾರ್ಟ್‍ಫೋನ್ ...

Widgets Magazine