ನೀವೂ ಚೀನಾ ಮೊಬೈಲ್ ಬಳಸುತ್ತಿದ್ದೀರಾ..? ಹುಷಾರ್ ಹುಷಾರ್..!

ನವದೆಹಲಿ, ಬುಧವಾರ, 16 ಆಗಸ್ಟ್ 2017 (18:08 IST)

ಭಾರತ ಮತ್ತು ಚೀನಾ ನಡುವೆ ಯುದ್ದದ ಸನ್ನಿವೇಶ ಏರ್ಪಟ್ಟಿರುವ ಬೆನ್ನಲ್ಲೇ ಚೀನಾ ಮೋಬೈಲ್`ಗಳಿಂದ ಭಾರತಕ್ಕೆ ಅಪಾಯದ ಸೂಚನೆ ಸಿಕ್ಕಿದೆ. ಹೀಗಾಗಿ, ಚೀನಾ ಮೊಬೈಲ್ ಕಂಪನಿಗಳಿಗೆ ನೋಟಿಸ್ ಕೊಟ್ಟಿದೆ.


ವಿವೋ, ಒಪ್ಪೋ, ಷಿಯಾಮಿ, ಜಿಯೋನಿ ಕಂಪನಿಗಳಿಗೆ ನೋಟಿಸ್ ನೀಡಿರುವ ಕೇಂದ್ರ ಸರ್ಕಾರ, ಹ್ಯಾಕಿಂಗ್ ಭದ್ರತಾ ಫೀಚರ್`ಗಳ ಬಗ್ಗೆ ವಿವರಣೆ ಕೇಳಿದೆ.  ಚೀನಾದಲ್ಲಿ ತಯಾರಾದ ಈ ಮೋಬೈಲ್`ಗಳು ಭಾರತೀಯರ ವೈಯಕ್ತಿಕ ಮಾಹಿತಿ ಮತ್ತು ಸಂದೇಶಗಳನ್ನ ಕದಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ.

ಚೀನಾಯೇತರ ಕಂಪನಿಗಳಾದ ಆಪಲ್, ಸ್ಯಾಮ್ ಸಂಗ್, ಭಾತರೀಯ ಕಂಪನಿ ಮೈಕ್ರೋ ಮ್ಯಾಕ್ಸ್ ಸೇರಿ 21 ಕಂಪನಿಗಳಿಗೆ ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಸಚಿವಾಲಯದಿಂದ ನೊಟಿಸ್ ನೀಡಲಾಗಿದೆ.

ಈ ಕಂಪನಿಗಳಿಗೆ ಆಗಸ್ಟ್ 28ರವರೆಗೆ ಕೇಂದ್ರ ಸರ್ಕಾರ ಕಾಲಾವಕಾಶ ನೀಡಲಾಗಿದ್ದು, ಅಷ್ಟರೊಳಗೆ ಭದ್ರತಾ ನಿಯಮಗಳ ಅನುಸರಣೆಯ ಮಾಹಿತಿ ಸಲ್ಲಿಸುವಂತೆ ತಿಳಿಸಲಾಗಿದೆ. ಒಂದೊಮ್ಮೆ ಭದ್ರತಾ ನಿಯಮ ಅನುಸರಣೆ ಉಲ್ಲಂಘನೆ ಸಾಬೀತಾದರೆ ಈ ಕಂಪನಿಗಳಿಗೆ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತದೆ.

ಇದರ ಜೊತೆಗೆ ಕೇಂದ್ರ ಸರ್ಕಾರ, ಚೀನಾದಿಂದ ಆಮದಾಗುವ ಅಪಾರ ಪ್ರಮಾಣದ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನ ಪರಿಶೀಲನೆಗೆ ಒಳಪಡಿಸುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  
ಚೀನಾ ಮೊಬೈಲ್ ಹ್ಯಾಕಿಂಗ್ ಕೇಂದ್ರ ಸರ್ಕಾರ Hacking China Mobiles War Situation

ವ್ಯವಹಾರ

news

ಗೂಗಲ್`ನಲ್ಲಿ ಈಗ ಕನ್ನಡದಲ್ಲೂ ವಾಯ್ಸ್ ಸರ್ಚ್ ಮಾಡಬಹುದು..!

ಜಗತ್ತಿನ ಪ್ರಸಿದ್ಧ ಸರ್ಚ್ ಎಂಜಿನ್ ಗೂಗಲ್ ಕಾಲಕ್ಕೆ ತಕ್ಕಂತೆ ತನ್ನ ತಂತ್ರಜ್ಞಾನದಲ್ಲಿ ಅಪ್ಡೇಟ್ ...

news

ಜಿಯೋ ಫೋನ್ ಬುಕಿಂಗ್ ಶುರು! ಮಾಡೋದು ಹೇಗೆ?

ಮುಂಬೈ: ರಿಲಯನ್ಸ್ ಸಂಸ್ಥೆ ತನ್ನ ಮಹತ್ವಾಕಾಂಕ್ಷೆಯ ಜಿಯೋ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ...

news

ಟೊಮೆಟೋ ಆಯ್ತು.. ಇನ್ನೀಗ ಈರುಳ್ಳಿಗೂ ಕಣ್ಣೀರು ಹಾಕಬೇಕಾ?

ನವದೆಹಲಿ: ಕೆಲವು ದಿನಗಳ ಹಿಂದೆ ಗ್ರಾಹಕರಿಗೆ ಟೊಮೆಟೋ ಶಾಕ್ ನೀಡಿದಂತೆ ಈರುಳ್ಳಿಯೂ ಶಾಕ್ ನೀಡುತ್ತಾ? ಇನ್ನು ...

news

ಗ್ರಾಹಕರೇ ಅಲರ್ಟ್: 4 ದಿನಗಳ ಸತತ ಬ್ಯಾಂಕ್ ರಜೆ, ಎಟಿಎಂ ಖಾಲಿಯಾಗುವ ಮುನ್ನ ಹಣ ಪಡೆಯಿರಿ

ನವದೆಹಲಿ: ದೇಶದ ಅನೇಕ ಭಾಗಗಳಲ್ಲಿ ಆಗಸ್ಟ್ 12 ರಿಂದ ಪ್ರಾರಂಭವಾಗುವ ಎಲ್ಲಾ ಬ್ಯಾಂಕುಗಳು ವ್ಯವಹಾರಕ್ಕಾಗಿ ...

Widgets Magazine