ದನ, ಕರುಗಳಿದೆಯಾ? ಒಎಲ್ ಎಕ್ಸ್ ನಲ್ಲಿ ಮಾರಿ ಬಿಡಿ!

ನವದೆಹಲಿ, ಶುಕ್ರವಾರ, 22 ಸೆಪ್ಟಂಬರ್ 2017 (09:25 IST)

ನವದೆಹಲಿ: ದೇಶಾದ್ಯಂತ ಗೋ ಹತ್ಯೆ ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಇದಕ್ಕೆ ಬಿಜೆಪಿಯೇತರ ರಾಜ್ಯಗಳು ವಿರೋಧವನ್ನೂ ವ್ಯಕ್ತಪಡಿಸಿದ್ದವು. ಗೋ ಹತ್ಯೆ ನಿಷೇಧಿಂದಾಗಿ ದನ ಕರುಗಳ ಮಾರಾಟದ ಮೇಲೆ ಹಲವು ನಿರ್ಬಂಧ ವಿಧಿಸಲಾಗಿದೆ. ಇದರ ಪರಿಹಾರಕ್ಕೆ ರಾಜಸ್ಥಾನ ಸರ್ಕಾರ ಒಂದು ವಿನೂತನ ಪ್ರಯತ್ನ ನಡೆಸಿದೆ.


 
ಈಗ ಪ್ರಕ್ರಿಯೆ ಜನಪ್ರಿಯವಾಗಿರುವ ಹಿನ್ನಲೆಯಲ್ಲಿ ಪಶುಗಳನ್ನೂ ರಾಜಸ್ಥಾನ ಸರ್ಕಾರ, ಪ್ರಮುಖ ಆನ್ ಲೈನ್ ಡೀಲರ್ ಗಳಾದ ಒಎಲ್ಎಕ್ಸ್, ಕ್ವಿಕರ್ ಮೂಲಕ ಮಾರಾಟ ಅಥವಾ ಖರೀದಿ ಮಾಡಲು ಅವಕಾಶ ನೀಡಲಿದೆ.
 
ಹೀಗಾಗಿ ಇನ್ನು ಮುಂದೆ ಒಎಲ್ಎಕ್ಸ್ ಮತ್ತು ಕ್ವಿಕರ್ ನಲ್ಲಿ ಮಾರಾಟಕ್ಕಿರುವ ಪಶುಗಳನ್ನೂ ಕಾಣಬಹುದಾಗಿದೆ. ಗೋ ರಕ್ಷಣೆ ಹೆಸರಿನಲ್ಲಿ ದಾಂಧಲೆ ನಡೆಸುವ ಗುಂಪನ್ನು ಹತ್ತಿಕ್ಕಲು ಮತ್ತು ಅಕ್ರಮ ಮಾರಾಟ ತಪ್ಪಿಸಲು ಸರ್ಕಾರ ಆನ್ ಲೈನ್ ಮಾರಾಟಕ್ಕೆ ಹಸಿರು ನಿಶಾನೆ ತೋರಿದೆ. ಇದು ಇನ್ನು ದೇಶಾದ್ಯಂತ ಜಾರಿಗೆ ಬಂದರೂ ಅಚ್ಚರಿ ಪಡಬೇಕಿಲ್ಲ. ಇನ್ನಿತರ ವಸ್ತುಗಳಂತೆ ಗೋವುಗಳ ಫೋಟೋ ಹಾಗೂ ಇನ್ನಿತರ ವಿವರಗಳು ಲಭ್ಯವಿರಲಿದೆ. ಇದರಿಂದ ಮಧ್ಯವರ್ತಿಗಳ ಕಾಟವೂ ತಪ್ಪುತ್ತದೆ ಎನ್ನುವುದು ಸರ್ಕಾರದ ಆಲೋಚನೆ.
 
ಇದನ್ನೂ ಓದಿ.. ಪ್ರಧಾನಿ ಮೋದಿಗೆ ಹೆದರಿ ಆಗಾಗ ನೆಲೆ ಬದಲಿಸಿದ್ದ ದಾವೂದ್
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಶೀಘ್ರದಲ್ಲೇ ಬಿಎಸ್ ಎನ್ ಎಲ್ ಅಗ್ಗದ ಫೋನ್ ಗಳು ಮಾರುಕಟ್ಟೆಗೆ

ನವದೆಹಲಿ: ರಿಲಯನ್ಸ್ ಜಿಯೋ ಫೋನ್ ಈಗಾಗಲೇ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಏರ್ ಟೆಲ್ ದೀಪಾವಳಿ ...

news

ಫೋನ್ ಆರ್ಡರ್ ಮಾಡಿದ ವ್ಯಕ್ತಿ ಕೈಗೆ ಬಂದಿದ್ದು ಏನು ಗೊತ್ತಾ?

ನವದೆಹಲಿ: ಆನ್ ಲೈನ್ ನಲ್ಲಿ ವಸ್ತುಗಳನ್ನು ಆರ್ಡರ್ ಮಾಡುವಾಗ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ...

news

ದೀಪಾವಳಿಗೆ ಬರಲಿದೆ ಏರ್ ಟೆಲ್ 4 ಜಿ ಫೋನ್! ಹೇಗಿರುತ್ತೆ? ಬೆಲೆ ಎಷ್ಟು ನೋಡಿ!

ನವದೆಹಲಿ: ರಿಲಯನ್ಸ್ ಜಿಯೋ 4 ಜಿ ಫೋನ್ ಅಗ್ಗದ ಬೆಲೆಗೆ ನೀಡಿದ ಬೆನ್ನಲ್ಲೇ ಏರ್ ಟೆಲ್ ಕೂಡಾ 4 ಜಿ ಫೋನ್ ...

news

ನಂಬಲು ಅಸಾಧ್ಯ: ಏರ್‌ಟೆಲ್‌ನಿಂದ ಕೇವಲ 5 ರೂಪಾಯಿಗೆ 4ಜಿಬಿ ಡೇಟಾ

ನವದೆಹಲಿ: ರಿಲಯನ್ಸ್ ಜಿಯೋ ಮತ್ತು ಅದರ ಅಗ್ಗ ಆಫರ್‌ಗಳಿಂದಾಗಿ ಟೆಲಿಕಾಂ ಕ್ಷೇತ್ರವೇ ತಲ್ಲಣಿಸಿರುವಾಗ, ಇತರ ...

Widgets Magazine