ಬ್ಯಾಂಕ್ ಕೆಲಸಗಳಿದ್ದರೆ ಇಂದೇ ಮಾಡಿಕೊಳ್ಳಿ!

ಬೆಂಗಳೂರು, ಬುಧವಾರ, 24 ಜನವರಿ 2018 (08:54 IST)

ಬೆಂಗಳೂರು: ಈ ವಾರ ತುರ್ತಾಗಿ ಬ್ಯಾಂಕ್ ವ್ಯವಹಾರಗಳನ್ನು ಮಾಡಿ ಮುಗಿಸಬೇಕೆಂದು ತುರ್ತಿನಲ್ಲಿದ್ದರೆ ಇಂದೇ ಮಾಡಿಕೊಳ್ಳುವುದು ಒಳಿತು!
 

ಈ ವಾರದ ಅಂತ್ಯದಲ್ಲಿ ಮತ್ತೆ ಸಾಲು ಸಾಲು ರಜೆ ಬರುತ್ತಿರುವುದರಿಂದ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಹೀಗಾಗಿ ಏನೇ ವ್ಯವಹಾರಗಳಿದ್ದರೂ ಇಂದೇ ಮಾಡಿಕೊಳ್ಳುವುದು ಉತ್ತಮ.
 
ನಾಳೆ ಅಂದರೆ ಜನವರಿ 25 ರಂದು ಕರ್ನಾಟಕ ಬಂದ್ ಇರುವುದರಿಂದ ಬಹುತೇಕ ಬ್ಯಾಂಕ್ ಗಳು ಕಾರ್ಯನಿರ್ವಹಣೆ ಮಾಡುವುದು ಅನುಮಾನ. ಒಂದು ವೇಳೆ ತೆರೆದರೂ ಸಿಬ್ಬಂದಿ ಕೊರತೆಯಿಂದ ಕಷ್ಟವಾಗಬಹುದು.
 
ಜನವರಿ 26 ಅಂದರೆ ಶುಕ್ರವಾರ ಗಣರಾಜ್ಯೋತ್ಸವ ನಿಮಿತ್ತ ರಜೆ. ಶನಿವಾರ ತಿಂಗಳ ಕೊನೆ ಶನಿವಾರವೆಂಬ ಕಾರಣಕ್ಕೆ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ರಜೆಯಿರುತ್ತದೆ. ಭಾನುವಾರ ಮಾಮೂಲಿನ ರಜೆ.  ಹೀಗಾಗಿ ಇಂದು ಬ್ಯಾಂಕ್ ಕೆಲಸ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಸೋಮವಾರವಷ್ಟೇ ಸಾಧ್ಯವಾಗುತ್ತದೆ. ಹಾಗಾಗಿ ತುರ್ತು ಕೆಲಸಗಳಿಗೆ ಇಂದೇ ತೆರಳಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

10 ರೂ. ನಾಣ್ಯ ನಿಜವಾಗಿಯೂ ನಿಷೇಧವಾಗಿದೆಯಾ? ಆರ್ ಬಿಐ ಹೇಳಿದ್ದೇನು?

ನವದೆಹಲಿ: ಇತ್ತೀಚೆಗಿನ ದಿನಗಳಲ್ಲಿ ಯಾವುದೇ ಅಂಗಡಿಗೆ, ವ್ಯಾಪಾರ ಮಳಿಗೆಗೆ ಹೋಗಿ 10 ರೂ. ನಾಣ್ಯ ನೀಡಿದರೆ ...

news

ನಿಮ್ಮ ಬಿಎಸ್ಎನ್ಎಲ್ ನಂಬರ್ ಗೆ ಆಧಾರ್ ಲಿಂಕ್ ಆಗಿದೆಯೇ? ಪತ್ತೆ ಹಚ್ಚುವುದು ಹೇಗೆ ಗೊತ್ತಾ?

ನವದೆಹಲಿ: ಮೊಬೈಲ್ ಸಂಖ್ಯೆಗೆ ಆಧಾರ್ ಸಂಖ್ಯೆ ಜೋಡಿಸಲು ಕೇಂದ್ರ ಸರ್ಕಾರ ಮಾರ್ಚ್ 31 ರವರೆಗೆ ಗಡುವು ...

news

ಫೋರ್ಡ್‌ನಿಂದ ನೂತನ ಅವೃತ್ತಿಯ ಕಾರ್ ಮಾರುಕಟ್ಟೆಗೆ

ಭಾರತದ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಸಂಚಲನ ಮೂಡಿಸುತ್ತಿರುವ ಅಮೇರಿಕಾ ಮೂಲಕ ಫೋರ್ಡ್ ಕಂಪನಿ ಈ ವರ್ಷ ತನ್ನ ...

news

ಕ್ಲಾಸಿಕ್ ಲುಕ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ ಅವೆಂಜರ್‌

ಭಾರತದಲ್ಲಿ ತನ್ನ ನೂತನ ತಂತ್ರಜ್ಞಾನ ವಿನ್ಯಾಸ ಹಾಗೂ ದರಗಳಿಂದ ಬೈಕ್ ಮಾರುಕಟ್ಟೆಯಲ್ಲಿ ತನ್ನದೇ ಆದ ...

Widgets Magazine
Widgets Magazine