ಪ್ಲಿಫ್‌ಕಾರ್ಟ್ ಬಿಗ್ ಸೇಲ್‌

ಬೆಂಗಳೂರು, ಬುಧವಾರ, 10 ಅಕ್ಟೋಬರ್ 2018 (13:55 IST)

ಭಾರತದ ಮಾರುಕಟ್ಟೆಯಲ್ಲೇ ಹೊಸ ಸಂಚಲನ ಮೂಡಿಸಿರುವ ಆನ್‌ಲೈನ್ ಮಾರುಕಟ್ಟೆಗಳಲ್ಲಿ ಫ್ಲಿಪ್‌ಕಾರ್ಟ್ ಕೂಡಾ ಒಂದು. ದೇಶದಲ್ಲಿ ಉತ್ತಮ ಗುಣಮಟ್ಟದ ವಸ್ತುಗಳನ್ನು ಗ್ರಾಹಕರಿಗೆ ಪೂರೈಕೆ ಮಾಡುವುದರೊಂದಿಗೆ ತನ್ನ ಗುಣಮಟ್ಟತೆಯನ್ನು ಸಹ ಸಂಸ್ಥೆ ಕಾಪಾಡಿಕೊಂಡಿದೆ. ಇದೀಗ ಪ್ಲಿಫ್‌ಕಾರ್ಟ್ ಹೊಸದಾಗಿ ಬಿಗ್ ಬಿಲಿಯನ್ ಡೇ ಅನ್ನು ಘೋಷಿಸಿದ್ದು ಹಲವಾರು ವಸ್ತುಗಳನ್ನು ನೀವು ಕಡಿಮೆ ಬೆಲೆಗೆ ಕೊಂಡುಕೊಳ್ಳಬಹುದಾಗಿದೆ ಹಾಗಾದರೇ ಈ ವರ್ಷದ ಬಿಗ್ ಬಿಲಿಯನ್ ಡೇನಲ್ಲಿ ಯಾವೆಲ್ಲಾ ಆಫರ್‌ಗಳಿವೆ ಮತ್ತು ಯಾವೆಲ್ಲಾ ವಸ್ತುಗಳನ್ನು ನೀವು ಖರೀದಿಸಲು ಉತ್ತಮ ಎಂಬುದರ ಸಂಪೂರ್ಣ ಡೀಟೇಲ್ಸ್ ಇಲ್ಲಿದೆ.
ಇದೇ ಅಕ್ಟೋಬರ್ 10 ರಿಂದ 14 ರವರೆಗೆ ಪ್ಲಿಫ್‌ಕಾರ್ಟ್ ಬಿಗ್‌ಬಿಲಿಯನ್ ಡೇ ನಡೆಯುತ್ತಿದೆ. ಈ ವರ್ಷ ಮೊಬೈಲ್‌ಗಳ ಮೇಲೆ ಬಾರಿ ರಿಯಾಯಿತಿಯನ್ನು ನೀವು ನಿರೀಕ್ಷಿಸಬಹುದಾಗಿದೆ. ಅಲ್ಲದೇ ಹಲವಾರು ಮೊಬೈಲ್ ಸಂಬಂಧಿಸಿದ ವಸ್ತುಗಳನ್ನು ನೀವು ಕಡಿಮೆ ಬೆಲೆಗೆ ಖರೀದಿಸಲು ಇದು ಉತ್ತಮ ಸಮಯ ಎಂದೇ ಹೇಳಬಹುದು.
 
ಅಷ್ಟೇ ಅಲ್ಲದೇ ಗ್ರಹೋಪಯೋಗಿ ವಸ್ತುಗಳಾದ ಟಿವಿ, ಫ್ರಿಡ್ಜ್ ವಾಶಿಂಗ್ ಮೆಷಿನ್‌ಗಳ ಮೇಲೆ ಕೂಡಾ ಬಾರಿ ರಿಯಾಯಿತಿಗಳನ್ನು ಸಂಸ್ಥೆ ನೀಡಲಿದೆ ಹಾಗಾಗಿ ನೀವು ಇಂತಹ ವಸ್ತುಗಳನ್ನು ಕೊಳ್ಳುವ ಮೊದಲು ವಾರೆಂಟಿ ಮುಂತಾದವುಗಳ ಕುರಿತು ತಿಳಿದು ಖರೀದಿಸಬಹುದು
 
ಅಲ್ಲದೇ ಇದೇ ಮೊದಲ ಬಾರಿ ಪ್ಲಿಫ್‌ಕಾರ್ಟ್ ತನ್ನ ಸಂಸ್ಥೆಯ ಉತ್ಪಾದನಾ ವಸ್ತುಗಳ ಮೇಲೆ ಶೇಕಡಾ 70% ರಿಯಾಯಿತಿಯನ್ನು ಘೋಷಿಸಿದೆ. ಮನೆಗೆ ಸಂಬಂಧಿಸಿದ ವಸ್ತುಗಳು ಫರ್ನಿಚರ್‌ಗಳ ಮೇಲೆ 50% ರಿಂದ 90% ರಿಯಾಯಿತಿ ಘೋಷಿಸಿದೆ. ಅಲ್ಲದೇ ಲ್ಯಾಪ್‌ಟಾಪ್ ಮತ್ತು ಗ್ಯಾಜೆಟ್‌ಗಳು ಮೇಲೂ ಸಹ 80% ರಿಯಾಯಿತಿ ಇದ್ದೂ ಇದರ ಸಂಪೂರ್ಣ ಲಾಭವನ್ನು ಗ್ರಾಹಕರು ಪಡೆಯಬಹುದಾಗಿದೆ. ಅಷ್ಟೇ ಅಲ್ಲ ಪ್ರತಿ ಖರೀದಿಯಲ್ಲೂ ಎಚ್‌ಡಿಎಫ್‌ಸಿ ಕಾರ್ಡುಗಳ ಮೇಲೆ 10% ರಷ್ಟು ತ್ವರಿತ ರಿಯಾಯಿತಿಗಳನ್ನು ನೀವು ಪಡೆಯಬಹುದಾಗಿದೆ. ಇನ್ನುಳಿದ ವಸ್ತುಗಳಾದ ಶೂಗಳು ಮತ್ತು ಬ್ಯಾಗ್‌ಗಳ ಮೇಲು ಉತ್ತಮ ರಿಯಾಯಿತಿ ದೊರೆಯಬಹುದು ಎಂಬ ನಿರೀಕ್ಷೆ ಮಾರುಕಟ್ಟೆ ವಲಯದಲ್ಲಿದೆ. 
 
ಒಟ್ಟಿನಲ್ಲಿ ನೀವು ಬಯಸುವ ವಸ್ತುಗಳು ಅತೀ ಕಡಿಮೆ ಬೆಲೆಗೆ ಲಭ್ಯವಿದ್ದು ಅದರ ಗುಣಮಟ್ಟ ವಾರೆಂಟಿ ಎಲ್ಲವನ್ನು ಪರಿಶೀಲಿಸಿ ನೀವು ಕೊಳ್ಳುವುದು ಉತ್ತಮ ಹೆಚ್ಚಿನ ವಿವರಗಳಿಗೆ ಪ್ಲಿಫ್‌‌ಕಾರ್ಟ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಏರ್ ಟೆಲ್ ಹೊಸ ಬಂಪರ್ ಪ್ಲ್ಯಾನ್ ಘೋಷಣೆ

ನವದೆಹಲಿ: ಟೆಲಿಕಾಂ ಕ್ಷೇತ್ರದಲ್ಲಿ ಪೈಪೋಟಿಗಿಳಿದಿರುವ ಏರ್ ಟೆಲ್ 159 ರೂ.ಗಳ ಹೊಸ ಬಂಪರ್ ಯೋಜನೆಯೊಂದನ್ನು ...

news

ವೊಡಾಫೋನ್ ನೀಡುತ್ತಿದೆ 84 ದಿನಗಳ ವ್ಯಾಲಿಡಿಟಿ ಹೊಂದಿರುವ ರೂ. 279 ರ ಹೊಸ ಪ್ಲಾನ್

ಬೆಂಗಳೂರು : ಜಿಯೋ ಮತ್ತು ಏರ್ಟೆಲ್ ಯೋಜನೆಗಳಿಗೆ ಟಕ್ಕರ್ ನೀಡಲು ವೊಡಾಫೋನ್ ತನ್ನ ಗ್ರಾಹಕರಿಗೆ 84 ದಿನಗಳ ...

news

ತನ್ನ ಬಳಕೆದಾರರ ಕೆಲಸ ಸುಲಭ ಮಾಡಿದೆ ಇನ್ಸ್ಟ್ರಾಗ್ರಾಮ್. ಹೇಗೆ ಗೊತ್ತಾ?

ಬೆಂಗಳೂರು : ಇನ್ಸ್ಟ್ರಾಗ್ರಾಮ್ ತನ್ನ ಬಳಕೆದಾರರಿಗೆ ತಮ್ಮ ಸ್ನೇಹಿತರನ್ನು ಹುಡುಕಲು ಸುಲಭವಾಗಲು ಹೊಸ ಫೀಚರ್ ...

news

ಬ್ಯಾಂಕ್ ಆಫ್ ಮಹಾರಾಷ್ಟ್ರ ತನ್ನ ಗ್ರಾಹಕರಿಗೆ ನೀಡಿದೆ ಬಿಗ್ ಶಾಕ್

ಬೆಂಗಳೂರು : ಬ್ಯಾಂಕ್ ಆಫ್ ಮಹಾರಾಷ್ಟ್ರ (ಬಿಒಎಂ) ದೇಶಾದ್ಯಂತ ತನ್ನ 51 ಶಾಖೆಗಳನ್ನು ಬಂದ್ ಮಾಡುವುದರ ಮೂಲಕ ...

Widgets Magazine