Widgets Magazine
Widgets Magazine

ಗಾಯಕ್‌ವಾಡ್ ಎಫೆಕ್ಟ್: ಅಶಿಸ್ತಿನ ಪ್ರಯಾಣಿಕರಿಗೆ 15 ಲಕ್ಷ ದಂಡ ವಿಧಿಸಲಿರುವ ಏರ್ ಇಂಡಿಯಾ

ನವದೆಹಲಿ, ಸೋಮವಾರ, 17 ಏಪ್ರಿಲ್ 2017 (20:18 IST)

Widgets Magazine

ಅಶಿಸ್ತಿನ ಪ್ರಯಾಣಿಕರಿಗೆ ಶಾಸ್ತಿ ಮಾಡುವ ನಿಟ್ಟಿನಲ್ಲಿ ಸರಕಾರಿ ಸ್ವಾಮ್ಯದ ಏರಿಂಡಿಯಾ ಹೊಸ ನೀತಿ ಜಾರಿಗೆ ತಂದಿದೆ. ನೂತನ ನೀತಿ ಅನ್ವಯ ಅಶಿಸ್ತಿನ ಪ್ರಯಾಣಿಕರಿಂದ ವಿಮಾನ ಹಾರಾಟ ಎರಡು ಗಂಟೆಗಳವರೆಗೆ ವಿಳಂಬವಾದಲ್ಲಿ 15 ಲಕ್ಷ ರೂಪಾಯಿ ವಿಧಿಸಲಿದೆ. 
 
ಇತ್ತೀಚೆಗೆ ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್ ವಿಮಾನ ಪ್ರಯಾಣದಲ್ಲಿ ಸಿಬ್ಬಂದಿಗೆ ಚಪ್ಪಲಿ ಏಟು ಬಾರಿಸಿದ ಘಟನೆಯ ನಂತರ ಏರಿಂಡಿಯಾ ಹೊಸ ನಿಯಮ ಜಾರಿಗೆ ತಂದಿದೆ.
 
ಹೊಸ ನಿಯಮದ ಅನ್ವಯ ಅಶಿಸ್ತಿನ ಪ್ರಯಾಣಿಕರಿಂದ ವಿಮಾನ ಹಾರಾಟ ಒಂದು ಗಂಟೆಯಿಂದ ಎರಡು ಗಂಟೆಯವರೆಗೆ ವಿಳಂಬವಾದಲ್ಲಿ 5 ಲಕ್ಷ ರೂ.ದಂಡ ವಿಧಿಸಲಿದೆ. ಎರಡು ಗಂಟೆಗೂ ಹೆಚ್ಚು ಸಮಯ ವಿಳಂಬವಾದಲ್ಲಿ ಪ್ರಯಾಣಿಕರು 15 ಲಕ್ಷ ದಂಡ ತೆರಬೇಕಾಗುತ್ತದೆ.
 
ರವೀಂದ್ರ ಗಾಯಕ್‌ವಾಡ್ ಏರಿಂಡಿಯಾ ವಿಮಾನದಲ್ಲಿ ತೋರಿದ ಅಸಭ್ಯ ವರ್ತನೆಯ ಘಟನೆಯ ನಂತರ ಏರಿಂಡಿಯಾ ಸಂಸ್ಥೆ ಮತ್ತು ಕೇಂದ್ರ ಸರಕಾರ ಅಶಿಸ್ತಿನ ಪ್ರಯಾಣಿಕರಿಗೆ ಹೇಗೆ ಕಡಿವಾಣ ಹಾಕಬೇಕು ಎನ್ನುವ ಬಗ್ಗೆ ಚಿಂತನೆ ನಡೆಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ವ್ಯವಹಾರ

news

ಮತ್ತೆ ಪೆಟ್ರೋಲ್, ಡೀಸೆಲ್ ದರ ಏರಿಕೆ

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಏರಿಕೆಯಾದ ಹಿನ್ನೆಲೆಯಲ್ಲಿ ಪ್ರತಿ ಲೀಟರ್ ...

news

ಬೆಂಗಳೂರಲ್ಲಿ ಎಟಿಎಂಗಳು ಖಾಲಿ ಖಾಲಿ: ಜನತೆಯ ಪರದಾಟ

ಬೆಂಗಳೂರು: ಬೆಂಗಳೂರಿನಲ್ಲಿ ಎಟಿಎಂಗಳು ಹಣವಿಲ್ಲದೇ ನೋ ಕ್ಯಾಶ್ ಬೋರ್ಡ್ ಹೊತ್ತುಕೊಂಡು ನಿಂತಿವೆ. ಜನತೆ ...

news

ಜಿಯೋಗೆ ಸಡ್ಡು: ಏರ್ ಟೆಲ್ ಬಂಪರ್ ಆಫರ್!

ನವದೆಹಲಿ: ಟೆಲಿಕಾಂ ಸಂಸ್ಥೆಗಳ ಮಧ್ಯೆ ಪ್ರಬಲ ಪೈಪೋಟಿ ಆರಂಭವಾಗಿದೆ. ಆದರೆ ಇದರ ಲಾಭವಾಗುತ್ತಿರುವುದು ...

news

ಮೇ 1 ರಿಂದ ಪ್ರತಿದಿನ ಪೆಟ್ರೋಲ್, ಡೀಸೆಲ್‌ ದರ ಪರಿಷ್ಕರಣೆ

ನವದೆಹಲಿ: ವಿಶ್ವದ ಪ್ರಮುಖ ದೇಶಗಳಂತೆ ಇದೀಗ ಭಾರತದಲ್ಲೂ ಪ್ರತಿದಿನ ಪೆಟ್ರೋಲ್, ಡೀಸೆಲ್‌ ಖರೀದಿಸುವ ...

Widgets Magazine Widgets Magazine Widgets Magazine