ಬೈಕ್ ಸವಾರಿಗೊಂದು ಸಿಹಿಸುದ್ದಿ ; ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಎಸಿ ಹೆಲ್ಮೆಟ್

ಬೆಂಗಳೂರು, ಶುಕ್ರವಾರ, 31 ಆಗಸ್ಟ್ 2018 (10:42 IST)

ಬೆಂಗಳೂರು : ಬೈಕ್ ಸವಾರಿಗೊಂದು ಸಿಹಿಸುದ್ದಿ. ಇನ್ನುಮುಂದೆ ಹೆಲ್ಮೆಟ್ ಧರಿಸಿ ಸೆಕೆಯಿಂದ ಕಿರಿಕಿರಿ ಅನುಭವಿಸುವ ಅಗತ್ಯವಿಲ್ಲ. ಯಾಕೆಂದರೆ ಅಮೆರಿಕಾದ ಹೆಲ್ಮೆಟ್ ತಯಾರಿಕ ಕಂಪನಿಯೊಂದು ಎಸಿ ಹೆಲ್ಮೆಟ್ ಅನ್ನು  ಸಿದ್ಧಪಡಿಸಿದೆ.


ಹೌದು. ಸುರಕ್ಷಿತ ಪ್ರಯಾಣಕ್ಕೆ ಹೆಲ್ಮೆಟ್ ಕಡ್ಡಾಯ ಎಂದು ತಿಳಿದರೂ ಕೂಡ ಕೆಲವರು ಹೆಲ್ಮೆಟ್ ಧರಿಸಿದರೆ ಕಿರಿಕಿರಿಯಾಗುತ್ತದೆ ಎಂಬ ಕಾರಣಕ್ಕೆ ಹೆಲ್ಮೆಟ್ ಧರಿಸದೇ ಪ್ರಯಾಣ ಬೆಳೆಸಿ ಅಪಘಾತದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.


ಆದಕಾರಣ ಇದೀಗ ಅಮೆರಿಕಾದ ಹೆಲ್ಮೆಟ್ ತಯಾರಿಕ ಕಂಪನಿ Feher helmet ಎಸಿ ಹೆಲ್ಮೆಟ್ ನ್ನು ಸಿದ್ಧಪಡಿಸಿದೆ. ಇದೀಗ ಮಾರುಕಟ್ಟೆಗೆ ಈ ಎಸಿ ಹೆಲ್ಮೆಟ್ ಕಾಲಿಟ್ಟಿದೆ. ಇದರಿಂದ ಬೇಸಿಗೆಯಲ್ಲೂ ಹೆಲ್ಮೆಟ್ ಧರಿಸಿ ಆರಾಮವಾಗಿ ಬೈಕ್ ನಲ್ಲಿ ಪ್ರಯಾಣ ಬೆಳೆಸಬಹುದಾಗಿದೆ.


ಹೊರಗೆ ಹೆಚ್ಚು ಉಷ್ಣತೆ ಇರುವಾಗ ಹೆಲ್ಮೆಟ್ ನಿಮ್ಮ ತಲೆ ಹಾಗೂ ಮುಖದ ಉಷ್ಣತೆಯನ್ನು ಶೇಕಡಾ 10-15 ರಷ್ಟು ಕಡಿಮೆ ಮಾಡುತ್ತದೆಯಂತೆ. ಈ ಎಸಿ ಹೆಲ್ಮೆಟ್ ಗೆ ಯಾವುದೇ ಬ್ಯಾಟರಿ ಅಳವಡಿಸಿಲ್ಲ. ಬದಲಾಗಿ ಪವರ್ ಕೋಡ್ ಅಳವಡಿಸಲಾಗಿದೆ. ಈ Feher ACH-1 ಹೆಲ್ಮೆಟ್ ಬೆಲೆ 599 ಡಾಲರ್ ( ಸುಮಾರು 42,240 ರೂ.) ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

4 ಜಿ ಬಳಕೆದಾರರಿಗೆ ವೊಡಾಫೋನ್, ಏರ್ ಟೆಲ್ ಬಂಪರ್ ಕೊಡುಗೆ

ನವದೆಹಲಿ: ಟೆಲಿಕಾಂ ಕ್ಷೇತ್ರದ ಪೈಪೋಟಿ ಇದೀಗ ಗ್ರಾಹಕನ ಜೇಬಿಗೆ ಲಾಭ ತಂದುಕೊಡುತ್ತಿದೆ. ಇದೀಗ ಏರ್ ಟೆಲ್ ...

news

ಅಮಾನ್ಯಗೊಂಡ 500, 1000 ರೂ. ನೋಟುಗಳು ಏನಾದವು ಗೊತ್ತಾ?!

ನವದೆಹಲಿ: ಪ್ರಧಾನಿ ಮೋದಿ ರಾತ್ರೋ ರಾತ್ರಿ 500 ಮತ್ತು 1000 ರೂ. ನೋಟು ಅಮಾನ್ಯಗೊಳಿಸಿ ಆದೇಶಿಸಿದ ಬಳಿಕ ...

news

ವಿವೋ X21, ವಿವೋ V9 , ವಿವೋ Y83 ಮೊಬೈಲ್‌ಗಳ ದರ ಕಡಿತಗೊಳಿಸಿದ ವಿವೋ

ಭಾರತದ ಮಾರುಕಟ್ಟೆಯಲ್ಲಿ ವಿವೋ ಇಂಡಿಯಾ ತನ್ನ ವಿವೋ V9, ವಿವೋ Y83 ಮತ್ತು ವಿವೋ X21 ಮೊಬೈಲ್‌ಗಳ ಬೆಲೆಯ ...

news

ಎಚ್ಚರಿಕೆ ! ಗೂಗಲ್ ಡ್ರೈವ್ ನಲ್ಲಿ ವಾಟ್ಸಾಪ್ ಮಾಹಿತಿ ಸೇಫ್ ಅಲ್ಲ ; ವಾಟ್ಸಾಪ್

ಬೆಂಗಳೂರು : ವಾಟ್ಸಾಪ್ ತನ್ನ ಬಳಕೆದಾರರಿಗೆ ವಾಟ್ಸಾಪ್ ಸಂದೇಶಗಳನ್ನು ಬ್ಯಾಕ್‌ಅಪ್ ಗಾಗಿ ಗೂಗಲ್ ಡ್ರೈವ್ ...

Widgets Magazine