ಬಂಗಾರ ಪ್ರಿಯರಿಗೊಂದು ಸಿಹಿ ಸುದ್ದಿ ಇಲ್ಲಿದೆ ನೋಡಿ

ಮುಂಬೈ, ಶುಕ್ರವಾರ, 3 ಆಗಸ್ಟ್ 2018 (14:19 IST)

ಮುಂಬೈ : ಬಂಗಾರವೆಂದರೆ ಯಾರಿಗೆ ಇಷ್ಟವಿರಲ್ಲ. ಎಲ್ಲರೂ ಪ್ರಿಯರೇ. ಆದರೆ ವರ್ಲ್ಡ್​ ಗೋಲ್ಡ್​ ಕೌನ್ಸಿಲ್​ ವರದಿ ತಿಳಿಸಿರುವಂತೆ ಭಾರತೀಯರಿಗೆ ಬಂಗಾರದ ಮೇಲಿನ ಪ್ರೀತಿ ಕಡಿಮೆಯಾಗಿದೆಯಂತೆ.


ಹೌದು. ವರ್ಲ್ಡ್​ ಗೋಲ್ಡ್​ ಕೌನ್ಸಿಲ್​ 2ನೇ ತ್ರೈಮಾಸಿಕ ಅವಧಿಯಲ್ಲಿ ಭಾರತದಲ್ಲಿ ಬಂಗಾರ ಬೇಡಿಕೆಶೇ 8ರಷ್ಟು ಕಡಿಮೆಯಾಗಿದೆ ಎಂದು ತನ್ನ ವರದಿಯಲ್ಲಿ ಹೇಳಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 161 ಟನ್​ ಬಂಗಾರ ಆಮದು ಮಾಡಿಕೊಳ್ಳಲಾಗಿತ್ತು.ಈ ಬಾರಿ ಅದು 147 .9 ಟನ್​ಗೆ ಇಳಿಕೆ ಕಂಡಿದೆ. ಇದರ ಜತೆಗೆ ಈ ವರ್ಷ ಬಂಗಾರದ ಮೇಲಿನ ಹೂಡಿಕೆಯೂ ಶೇ. 5 ರಷ್ಟು ಕಡಿಮೆಯಾಗಿದೆ ಎಂಬುದು ಈ ವರದಿಯಿಂದ ತಿಳಿದು ಬಂದಿದೆ.


ದೇಶದಲ್ಲಿ ಉತ್ತಮ ಮಾನ್ಸೂನ್​ ಬಂದಿದ್ದು, ಜನ ಕೃಷಿಯಲ್ಲಿ ನಿರತರಾಗಿದ್ದಾರೆ. ಈ ನಡುವೆ ಹಬ್ಬಗಳ ಸೀಜನ್​ ಸಹ ಇಲ್ಲದೇ ಇರುವುದು ಎರಡನೇ ತ್ರೈ ಮಾಸಿಕದಲ್ಲಿ ಬಂಗಾರದ ಬೇಡಿಕೆ ಕಡಿಮೆಯಾಗಲು ಕಾರಣ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಪೇಟಿಎಂಗೆ ಆರ್.ಬಿ.ಐ ನೀಡಿದ ಸೂಚನೆ ಏನು ಗೊತ್ತಾ?

ಬೆಂಗಳೂರು : ಪೇಟಿಎಂಗೆ ನೂತನ ಬಳಕೆದಾರರನ್ನು ಸೇರಿಸಿಕೊಳ್ಳುವ ಕಾರ್ಯವನ್ನು ಈ ಕೂಡಲೇ ನಿಲ್ಲಿಸುವಂತೆ ...

news

ಇನ್ಮುಂದೆ ವಾಟ್ಸಾಪ್ ನಲ್ಲಿ ಗ್ರೂಪ್ ವಿಡಿಯೋ ಕಾಲಿಂಗ್ ಮಾಡಬಹುದಂತೆ

ಬೆಂಗಳೂರು : ವಾಟ್ಸಾಪ್ ಇದೀಗ ಹೊಸ ಗ್ರೂಪ್ ವಿಡಿಯೋ ಕಾಲಿಂಗ್ ವ್ಯವಸ್ಥೆಯೊಂದನ್ನು ನೀಡುವುದರ ಮೂಲಕ ತನ್ನ ...

news

ದೇಶದ 23 ವಿಮಾ ಕಂಪನಿಗಳಲ್ಲಿ 15,167 ಕೋಟಿ ರೂ.ಗೆ ವಾರಸುದಾರರಿಲ್ಲ- ಐಆರ್‌ಡಿಎಐ

ನವದೆಹಲಿ : ದೇಶದ ಸುಮಾರು 23 ವಿಮಾ ಕಂಪನಿಗಳಲ್ಲಿ 15,167 ಕೋಟಿ ರೂಪಾಯಿ ವಾರಸುದಾರರಿಲ್ಲದ ಹಣವಿದೆ ಎಂದು ...

news

ಗ್ರಾಹಕರಿಗೆ ಸಿಹಿ ಸುದ್ದಿ ; ಗೃಹೋಪಯೋಗಿ ವಸ್ತುಗಳ ಮೇಲಿನ ಜಿ.ಎಸ್.ಟಿ ದರ ಇಳಿಕೆ

ನವದೆಹಲಿ : ಕೇಂದ್ರ ಸರ್ಕಾರ ಗೃಹೋಪಯೋಗಿ ವಸ್ತುಗಳ ಮೇಲಿನ ಜಿ.ಎಸ್.ಟಿ ದರ ಇಳಿಕೆ ಮಾಡಿದ್ದು, ಜಿಎಸ್ ಟಿ ...

Widgets Magazine
Widgets Magazine