ತೆರಿಗೆ ಪಾವತಿದಾರರಿಗೊಂದು ಸಿಹಿಸುದ್ದಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಕೊನೆಯ ದಿನಾಂಕ ವಿಸ್ತರಣೆ

ನವದೆಹಲಿ, ಶುಕ್ರವಾರ, 27 ಜುಲೈ 2018 (07:37 IST)

ನವದೆಹಲಿ : ಕೇಂದ್ರೀಯ ನೇರ ತೆರಿಗೆ ಮಂಡಳಿಯು (ಸಿಬಿಡಿಟಿ) ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಕೆಗೆ ನಿಗದಿಪಡಿಸಿದ್ದ ಕೊನೆ ದಿನಾಂಕವನ್ನು ಒಂದು ತಿಂಗಳ ಕಾಲ ಮುಂದೂಡಿದೆ ಎಂದು ಹೇಳುವುದರ ಮೂಲಕ ತೆರಿಗೆ ಪಾವತಿದಾರರಿಗೆ ಸಿಹಿಸುದ್ದಿ ನೀಡಿದೆ.


ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವ ಕೊನೆಯ ದಿನಾಂಕವನ್ನು ಜುಲೈ 31 ರಿಂದ ಆಗಸ್ಟ್ 31 ರವರೆಗೆ ವಿಸ್ತರಿಸಿದೆ. ಈ ವಿಚಾರವನ್ನು ಹಣಕಾಸು ಸಚಿವಾಲಯ ಟ್ವೀಟ್  ಮಾಡುವುದರ ಮೂಲಕ ತಿಳಿಸಿದೆ.


ಇನ್ನೊಂದು ತಿಂಗಳು ಕಾಲಾವಕಾಶ ಸಿಕ್ಕಿದ್ದು, ಪರಿಷ್ಕೃತ ಆದೇಶದ ಪ್ರಕಾರ ಆಗಸ್ಟ್‌ 31 ಆದಾಯ ತೆರಿಗೆ ಸಲ್ಲಿಕೆಗೆ ಕೊನೆ ದಿನಾಂಕವಾಗಿರುತ್ತದೆ. ಒಟ್ಟಿನಲ್ಲಿ ತೆರಿಗೆ ಪಾವತಿಸುವವರಿಗೆ ಅನುಕೂಲವಾಗದ್ದು, ನಿಗದಿತ ದಿನಾಂಕದ ನಂತರ ಐಟಿಆರ್ ಪಾವತಿಸಿದರೆ ರೂ. 5,000 ವರೆಗೆ ದಂಡ ವಿಧಿಸಲಾಗುತ್ತದೆ ಎಂದಿದು ತಿಳಿಸಲಾಗಿತ್ತು. ಆದರೆ ಈಗ ಗಡುವು ನೀಡಿರುವುದು ತೆರಿಗೆದಾರರಲ್ಲಿ ನೆಮ್ಮದಿ ತರಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಬಿ ಎಸ್ ಎನ್ ಎಲ್ ನಿಂದ 499 ರೂ. ಹೊಸ ಆಫರ್

ಬೆಂಗಳೂರು : ರಿಲಾಯನ್ಸ್ ಜಿಯೋ 509 ಪ್ಲಾನ್ ಗೆ ಟಕ್ಕರ್ ನೀಡಲು ಭಾರತ ಸಂಚಾರ ನಿಗಮ ನಿಯಮಿತ (ಬಿ ಎಸ್ ಎನ್ ...

news

ಏರ್ ಟೆಲ್ ಗ್ರಾಹಕರಿಗೆ ನೀಡಿದೆ ಬಂಪರ್ ಆಫರ್

ಬೆಂಗಳೂರು : ಏರ್ಟೆಲ್ ತನ್ನ ಗ್ರಾಹಕರಿಗಾಗಿ ಈಗ ರೂ. 299 ಪ್ರಿಪೇಡ್ ಯೋಜನೆಯನ್ನು ಪರಿಚಯಿಸಿದೆ. ಇದರಲ್ಲಿ ...

news

ವಾಹನ ಮಾಲೀಕರಿಗೆ ಸಿಹಿಸುದ್ದಿ ನೀಡಿದ ಸುಪ್ರಿಂಕೋರ್ಟ್

ನವದೆಹಲಿ : ಅಪಘಾತ ಸಂದರ್ಭದಲ್ಲಿ ಮೂರನೇ ವ್ಯಕ್ತಿ ಮೃತಪಟ್ಟರೆ ಆತನ ಕುಟುಂಬಕ್ಕೆ ಯಾವುದೇ ಪರಿಹಾರ ಸಿಗದ ...

news

ಮಹಿಳೆಯರಿಗೆ ಕೇಂದ್ರಸರ್ಕಾರದಿಂದ ಒಂದು ಸಿಹಿಸುದ್ದಿ

ನವದೆಹಲಿ : ಸ್ಯಾನಿಟರಿ ನ್ಯಾಪ್‌ ಕಿನ್ಸ್‌ಗಳ ಮೇಲೆ ಜಿ.ಎಸ್‌.ಟಿ. ವಿಧಿಸಿರುವುದಕ್ಕೆ ವಿರೋಧ ವ್ಯಕ್ತವಾದ ...

Widgets Magazine
Widgets Magazine