ಗೂಗಲ್ ಅಸಿಸ್ಟೆಂಟ್ ಹೊಸ ರೂಪದಲ್ಲಿ ವರ್ಷಾಂತ್ಯಕ್ಕೆ....!

ಗುರುಮೂರ್ತಿ 

ಬೆಂಗಳೂರು, ಸೋಮವಾರ, 19 ಫೆಬ್ರವರಿ 2018 (14:02 IST)

ನೀವು ಹೊಸ ಊರಿಗೋ ದೇಶಕ್ಕೋ ಪ್ರಯಾಣಿಸಿದರೆ ಇನ್ನು ಮುಂದೆ ತಲೆಬಿಸಿ ಮಾಡಿಕೊಳ್ಳುವ ಅಗತ್ಯವಿಲ್ಲ, ಅಲ್ಲಿನ ಸ್ಥಳೀಯ ಭಾಷೆ ಗೊತ್ತಿಲ್ಲವೆಂದು ಆತಂಕ ಪಡುವ ಅಗತ್ಯವು ಇಲ್ಲ. ಅದು ಹೇಗೆ ಅಂತೀರಾ ಇಲ್ಲಿದೆ ವರದಿ..
ಆಮ್‌ಸ್ಟೆರ್‌ಡಾಮ್‌ನಲ್ಲಿ ಮಂಗಳವಾರ ನಡೆದ ಡಿಜಿಟಲ್ ನ್ಯೂಸ್ ಇನಿಶಿಯೇಟಿವ್ (DNI) ಸೆಭೆಯಲ್ಲಿ ಇನ್ನಷ್ಟು ದೇಶಗಳಲ್ಲಿನ ಸ್ಥಳೀಯ ಭಾಷೆಯನ್ನು ಬೆಂಬಲಿಸುವಂತೆ ಗೂಗಲ್ ಅಸಿಸ್ಟೆಂಟ್ ನವೀಕರಿಸಿ 2018 ರ ವರ್ಷಾಂತ್ಯಕ್ಕೆ ಬಿಡುಗಡೆ ಮಾಡಲಾಗುವುದು ಎಂದು ಗೂಗಲ್ ಹೇಳಿದೆ. ಈ ವರದಿಯು ಗೂಗಲ್‌ ತನ್ನ ಅಧಿಕೃತ ಪುಟದಲ್ಲಿ ವಿವರಿಸಿದ್ದು, ಈ ವರ್ಷದ ಅಂತ್ಯಕ್ಕೆ ಪಟ್ಟಿಮಾಡಿರುವ ಎಲ್ಲಾ ದೇಶಗಳ ಭಾಷೆಯನ್ನು ಅಳವಡಿಸಲಾಗುತ್ತದೆ ಅಲ್ಲದೇ ಹೊಸ ಭಾಷೆಗಳನ್ನು ಸೇರಿಸಲಾಗುವುದು ಎಂದು ಹೇಳಲಾಗಿದೆ. ಅಲ್ಲದೇ ಭಾರತದಿಂದ ಇನ್ನು ಕೆಲವು ಭಾಷೆಗಳನ್ನು ಸೇರಿಸಲಾಗುವುದು ಎಂದು ಹೇಳಿದೆ. 
 
ಈಗಾಗಲೇ ಅಸಿಸ್ಟೆಂಟ್ ಅನ್ನು ಸಾಕಷ್ಟು ಅಭಿವೃದ್ಧಿ ಪಡಿಸಲಾಗಿದೆ ಅಷ್ಟೇ ಅಲ್ಲ ಇದರಲ್ಲಿ ಗೂಗಲ್ ಹೋಮ್ ಸ್ಮಾರ್ಟ್ ಸ್ಪಿಕರ್ ಅನ್ನು ಅಳವಡಿಸಿದ್ದು, ಟೈಪ್ ಮಾಡದೆಯೇ ನಿಮ್ಮ ಮಾತುಗಳಲ್ಲಿ ಪದಗಳನ್ನು ಗುರುತಿಸುವ ಸಾಮರ್ಥ್ಯವನ್ನು ಗೂಗಲ್ ಅಸಿಸ್ಟೆಂಟ್‌ ಹೊಂದಿದೆ. ಈಗಾಗಲೇ ಭಾರತದ ಸ್ಥಳೀಯ ಭಾಷೆ ಸೇರಿದಂತೆ ಹಲವು ದೇಶದ ಭಾಷೆಗಳನ್ನು ಅಳವಡಿಸಿರುವ ಗೂಗಲ್ ಅಸಿಸ್ಟೆಂಟ್‌ನಲ್ಲಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ದೇಶದ ಭಾಷೆಗಳು ಮತ್ತು ದೇಶದ ಸ್ಥಳೀಯ ಭಾಷೆಗಳನ್ನು ಸೇರಿಸುವತ್ತ ಗೂಗಲ್ ಗಮನಹರಿಸಿದೆ ಎನ್ನಲಾಗುತ್ತಿದೆ.
 
ಈಗಾಗಲೇ ಲಭ್ಯವಿರುವ ಗೂಗಲ್ ಅಸಿಸ್ಟೆಂಟ್ ಆಂಡ್ರೊಯ್ಡ್ ಲಾಲಿಪಾಪ್ ಮತ್ತು ಅದರ ಮುಂದಿನ ಆವೃತ್ತಿಯ ಆಂಡ್ರೊಯ್ಡ್ ಫೋನ್‌ಗಳು, ಗೂಗಲ್ ಹೋಮ್ ಡಿವೈಸ್ ಮತ್ತು ಹಲವಾರು ತೃತೀಯ ಸಾಧನಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಗೂಗಲ್ ಯತ್ನಿಸುತ್ತಿದೆ ಎನ್ನಲಾಗುತ್ತಿದೆ.
ಈಗಾಗಲೇ ಕಳೆದ ತಿಂಗಳು ಗೂಗಲ್ ಅಸಿಸ್ಟೆಂಟ್ ಹಿಂದಿ ಭಾಷೆಯ ನವೀಕರಣವನ್ನು ಸಿದ್ಧಪಡಿಸಿದ್ದು, ನೀವು ಇದನ್ನು ನಿಮ್ಮ ಫೋನ್‌ನಲ್ಲಿ ಅಳವಡಿಸಿಕೊಂಡು ಧ್ವನಿ ಕಮಾಂಡ್‌‌ಗಳನ್ನು ನೀಡುವ ಮೂಲಕ ನೀವು ಸಂವಹನ ನೆಡೆಸಬಹುದು ನಿಮಗೆ ಬೇಕಾದ ಪದದ ಅರ್ಥ ಹಾಗೂ ಅದರ ಬಳಕೆಯನ್ನು ಸುಲಭವಾಗಿ ಮಾಡಬಹುದಾಗಿದೆ. ಅಲ್ಲದೇ ಇಂಗ್ಲೀಷ್‌ನಲ್ಲಿ ನೀವು ಕಮಾಂಡ್‌ಗಳನ್ನು ನೀಡುವ ಮೂಲಕ ಭಾಷಾಂತರ ಮತ್ತು ಇಂಗ್ಲೀಷ್ ಪದದ ಹಿಂದಿ ಅರ್ಥವನ್ನು ಪಡೆಯಬಹುದಾಗಿದೆ.
 
ಒಟ್ಟಿನಲ್ಲಿ ಸುಲಭವಾಗಿ ಭಾಷೆಯನ್ನು ಅರ್ಥೈಸಿಕೊಳ್ಳಲು ಮತ್ತು ಸಂವಹನ ನಡೆಸಲು ಈ ಆಪ್ ಉಪಯುಕ್ತಕಾರಿಯಾಗಿದೆ ಎನ್ನಬಹುದು.ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಇದೀಗ ಮೊಬೈಲ್‌ನಲ್ಲಿ ತ್ವರೀತ ಟಿಕೆಟ್.. ರೈಲ್ವೇ ಇಲಾಖೆಯಿಂದ ಹೊಸ ಆಪ್...!

ದಕ್ಷಿಣ ಪಶ್ಚಿಮ ರೈಲ್ವೆ (SWR) ಇದೀಗ ಹೊಸದೊಂದು ಅಪ್ಲಿಕೇಶನ್ ಅನ್ನು ಬಿಡುಗಡೆಗೊಳಿಸಿದ್ದು ಅದರ ಮೂಲಕ ...

news

ಜಿಯೊ ಫೋನ್ ಬಳಕೆದಾರರಿಗೆ ಹೊಸ ಕೊಡುಗೆ...!!

ಜಿಯೊ ತನ್ನ ಸೇವೆಯನ್ನು ಆರಂಭಿಸಿದಾಗಿನಿಂದಲೂ ತನ್ನ ಗ್ರಾಹಕರಿಗೆ ಹತ್ತು ಹಲವು ಆಫರ್‌ಗಳನ್ನು ನೀಡುತ್ತಲೇ ...

news

ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ 11 ಸಾವಿರ ಕೋಟಿ ಗುಳಂ

ಮುಂಬೈ: ಮುಂಬೈ ಶಾಖೆಯ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಸುಮಾರು 11,360 ಕೋಟಿ ರೂಪಾಯಿಗಳಷ್ಟು ಬಾರಿ ...

news

ಮೊಟೊ ಪ್ರೀಯರಿಗೆ ಹೊಸ ಸುದ್ದಿ: ಬಿಡುಗಡೆಯಾಗುತ್ತಿದೆ ಹೊಸ ಅತ್ಯಾಧುನಿಕ ಫೋನ್...!

ದೇಶಿಯ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ ಮೊಟೊ ಇದೀಗ ತನ್ನ ನೂತನ ಮೊಬೈಲ್ ಆವೃತ್ತಿಯನ್ನು ಇಂದು ಬಿಡುಗಡೆ ...

Widgets Magazine