ಜಿಎಸ್ ಟಿ ಜಾರಿಗೆ ಕ್ಷಣಗಣನೆ: ಮಧ್ಯ ರಾತ್ರಿಯಿಂದ ತೆರಿಗೆ ಪದ್ಧತಿ ಹೊಸಯುಗ ಆರಂಭ

ನವದೆಹಲಿ, ಶುಕ್ರವಾರ, 30 ಜೂನ್ 2017 (11:12 IST)

Widgets Magazine

ನವದೆಹಲಿ:ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಇಂದು ಮಧ್ಯರಾತ್ರಿ ಒಂದು ರಾಷ್ಟ್ರ, ಒಂದು ತೆರಿಗೆ ಪರಿಕಲ್ಪನೆಯ ಯುಗಾರಂಭಕ್ಕೆ ಭಾರತ ಸಾಕ್ಷಿಯಾಗಲಿದೆ.
 
ರಾತ್ರಿ 12 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಸಂಸತ್​ನ ವಿಶೇಷ  ಅಧಿವೇಶನದಲ್ಲಿ ಜಿಎಸ್​ಟಿ ಗೆ ಚಾಲನೆ ನೀಡಲಿದ್ದಾರೆ.  ಜಿಎಸ್ ಟಿ ಜಾರಿಗೆ  ಇಂದು ಮಧ್ಯರಾತ್ರಿ ವಿಶೇಷ ಅಧಿವೇಶನ ಕರೆಯಲಾಗಿದ್ದು, ರಾತ್ರಿ 11 ಗಂಟೆಗೆ ಸಂಸತ್​ನ ವಿಶೇಷ ಅಧಿವೇಶನ ಆರಂಭಗೊಳ್ಳಲಿದೆ. ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಜಿಎಸ್​ಟಿ ಕುರಿತು ಸಂಸತ್ ಭವನಕ್ಕೆ ವಿವರಣೆ  ನೀಡಲಿದ್ದಾರೆ. ಬಳಿಕ ಪ್ರಧಾನಿ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸಂಸತ್ ಉದ್ದೇಶಿಸಿ ಮಾತನಾಡಲಿದ್ದು, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಸಹಿತ ಹಲವು  ಗಣ್ಯರು ಉಪಸ್ಥಿತರಿರುತ್ತಾರೆ.
 
ವಿಶೇಷ ಅಧಿವೇಶನಕ್ಕೆ ಉದ್ಯಮಿ ರತನ್ ಟಾಟಾ, ನಟ ಅಮಿತಾಭ್​ ಬಚ್ಚನ್​ ರಿಗೂ ಆಹ್ವಾನ ನೀಡಲಾಗಿದ್ದು, ಅಂತೆಯೇ ಜಿಎಸ್​ಟಿಗೆ ಸಂಬಂಧಿಸಿದ ಕಿರುಚಿತ್ರವೊಂದು ಪ್ರದರ್ಶನಗೊಳ್ಳಲಿದೆ. ಇನ್ನು ಜಿಎಸ್ ಟಿ ವಿಶೇಷ ಅಧಿವೇಶನವನ್ನು ವಿಪಕ್ಷಗಳು ಬಹಿಷ್ಕರಿಸಿವೆ. ಸ್ವಾತಂತ್ರ್ಯ ಘೋಷಣೆಯ ಮುನ್ನಾದಿನ  ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ದೇಶವನ್ನು ಉದ್ದೇಶಿಸಿ ಸೆಂಟ್ರಲ್‌ ಹಾಲ್‌ನಿಂದ ಮಧ್ಯರಾತ್ರಿ ಮಾತನಾಡಿದ್ದರು.  ಪ್ರಧಾನಿ ನರೇಂದ್ರ ಮೋದಿ ಅವರು ಅದೇ ರೀತಿಯಲ್ಲಿ ಭಾಷಣ ಮಾಡಲು ನಿರ್ಧರಿಸಿರುವುದು ಕೂಡ ಕಾಂಗ್ರೆಸ್‌ನ ಅತೃಪ್ತಿಗೆ ಕಾರಣವಾಗಿದೆ. ಸಂಸತ್ತಿನ ಸೆಂಟ್ರಲ್‌ ಹಾಲನ್ನು ಮಧ್ಯರಾತ್ರಿ  ಕಾರ್ಯಕ್ರಮ ನಡೆಸುವುದಕ್ಕೆ ಈವರೆಗೆ ಮೂರು ಬಾರಿ ಮಾತ್ರ ಬಳಸಿಕೊಳ್ಳಲಾಗಿದೆ.
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಜಿಎಸ್ ಟಿ ಮಧ್ಯರಾತ್ರಿ ಚಾಲನೆ ಪ್ರಧಾನಿ ನರೇಂದ್ರ ಮೋದಿ Gst Pm Modi June 30 Midnight Launch

Widgets Magazine

ವ್ಯವಹಾರ

news

200 ರೂ ಮುಖಬೆಲೆಯ ನೋಟು ಶೀಘ್ರ ಚಲಾವಣೆಗೆ

200 ಮುಖಬೆಲೆಯ ನೋಟುಗಳ ಬಿಡುಗಡೆಗೆ ನಿರ್ಧಾರ ಕೈಗೊಂಡಿರುವ ರಿಸರ್ವ್ ಬ್ಯಾಂಕ್ ಅಫ್ ಇಂಡಿಯಾ ಈಗಾಗಲೆ ನೋಟು ...

news

ಟೊಮೆಟೋ ಸಾರು ಮಾಡುವವರು ಹುಷಾರು!

ಬೆಂಗಳೂರು: ಟೊಮೆಟೊ ನಮ್ಮ ಪ್ರತಿ ನಿತ್ಯದ ಅಡುಗೆಗೆ ಬೇಕೇ ಬೇಕು. ಆದರೆ ಇನ್ನು ಕಿಲೋಗಟ್ಟಲೆ ಟೊಮೆಟೊ ...

news

ಇನ್ಮುಂದೆ ಕನ್ನಡ ಭಾಷೆಯಲ್ಲಿ ರೈಲು ಟಿಕೆಟ್ ಲಭ್ಯ

ಬೆಂಗಳೂರು: ಇನ್ಮುಂದೆ ಪ್ರಯಾಣಿಕರಿಗೆ ಕನ್ನಡ ಭಾಷೆಯಲ್ಲಿಯೇ ರೈಲು ಟಿಕೆಟ್ ಲಭ್ಯವಾಗಲಿದೆ ಎಂದು ರೈಲ್ವೆ ...

news

ವೈರಸ್..ವೈರಸ್…! ನಿಮ್ಮ ಕಂಪ್ಯೂಟರ್ ಬಗ್ಗೆ ಎಚ್ಚರ!

ನವದೆಹಲಿ: ಮತ್ತೆ ವಿಶ್ವದಾದ್ಯಂತ ಕಂಪ್ಯೂಟರ್ ಗಳಿಗೆ ಹ್ಯಾಕರ್ ಹಾವಳಿ ಶುರುವಾಗಿದೆ. ಭಾರತವೂ ಸೇರಿದಂತೆ ...

Widgets Magazine