ಧರ್ಮಗ್ರಂಥಗಳಿಗೂ ನೀಡಬೇಕು ಜಿ.ಎಸ್.ಟಿ; ಮಹಾರಾಷ್ಟ್ರ ಜಿ.ಎಸ್.ಟಿ. ಕೋರ್ಟ್ ಆದೇಶ

ಮಹಾರಾಷ್ಟ್ರ, ಬುಧವಾರ, 5 ಸೆಪ್ಟಂಬರ್ 2018 (14:48 IST)

: ಧರ್ಮಗ್ರಂಥ, ಧಾರ್ಮಿಕ ಪತ್ರಿಕೆ, ನಿಯತಕಾಲಿಕೆ, ಡಿವಿಡಿ ಮಾರಾಟ ಒಂದು ವ್ಯಾಪಾರವಾಗಿದ್ದು, ಇವುಗಳು ಜಿ.ಎಸ್.ಟಿ. ಅಡಿಯಲ್ಲಿ ಬರಬೇಕೆಂದು ಮಹಾರಾಷ್ಟ್ರ ಜಿ.ಎಸ್.ಟಿ. ಕೋರ್ಟ್ ಮಹತ್ವದ ಆದೇಶ ನೀಡಿದೆ.


ಈ ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀಮದ್ ರಾಮಚಂದ್ರ ಆಧ್ಯಾತ್ಮಿಕ ಸತ್ಸಂಗ ಸಾಧನಾ ಕೇಂದ್ರವು ಮಹಾರಾಷ್ಟ್ರ ಕೋರ್ಟ್ ನಲ್ಲಿ  ಆಧ್ಯಾತ್ಮಿಕ ಹಾಗೂ ಧಾರ್ಮಿಕ ನೀಡುವುದು ನಮ್ಮ ಕೆಲಸ. ಹಾಗಾಗಿ ಸಂಸ್ಥೆಯನ್ನು ವ್ಯಾಪಾರದ ಅಡಿ ಸೇರಿಸಬಾರದೆಂದು ಅರ್ಜಿ ಸಲ್ಲಿಸುವುದರ ಮೂಲಕ ಮನವಿ ಮಾಡಿದೆ.


ಆದರೆ ಜಿ.ಎಸ್.ಟಿ. ಆಯಕ್ಟ್ 2(17)ರ ಪ್ರಕಾರ, ಸೇವೆ ಅಥವಾ ಶಿಕ್ಷಣ ನೀಡಲು ಹಣ ಪಡೆಯುವ ಯಾವುದೇ ಧಾರ್ಮಿಕ ಟ್ರಸ್ಟ್ ಜಿ.ಎಸ್.ಟಿ. ಅಡಿ ಬರಲಿದೆ. ಅಂಥ ಸಂಸ್ಥೆಗಳು ಶೇಕಡಾ 18ರಷ್ಟು ಜಿ.ಎಸ್.ಟಿ. ಪಾವತಿ ಮಾಡಬೇಕಾಗುತ್ತದೆ ಎಂದು ತಿಳಿಸಿದೆ.
ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಸಂಸ್ಥೆಯನ್ನು ಜಿ.ಎಸ್.ಟಿ.ಯಿಂದ ಹೊರಗಿಡಲು ಸಾಧ್ಯವಿಲ್ಲ. ಯಾವುದೇ ಧಾರ್ಮಿಕ ಸಂಸ್ಥೆಗಳು ಧರ್ಮಗ್ರಂಥ ಅಥವಾ ಪುಸ್ತಕಗಳ ಮಾರಾಟಕ್ಕೆ ಜಿ.ಎಸ್.ಟಿ. ಕಟ್ಟಬೇಕು. ಸಾರ್ವಜನಿಕ ಗ್ರಂಥಾಲಯದಂತೆ ಭಕ್ತರಿಗೆ ಉಚಿತವಾಗಿ ಓದಲು ಅವಕಾಶ ನೀಡಿದ್ರೆ ಜಿ.ಎಸ್.ಟಿ. ಕಟ್ಟಬೇಕಾಗಿಲ್ಲ ಎಂದು ಕೋರ್ಟ್ ತಿಳಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಸಬ್ಸಿಡಿ ರಹಿತ ಸಿಲಿಂಡರ್‌ನ ದರದಲ್ಲಿ ಏರಿಕೆ

ನವದೆಹಲಿ : ತೈಲ ಕಂಪನಿಗಳು ಸಬ್ಸಿಡಿ ರಹಿತ ಸಿಲಿಂಡರ್ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್ ಗಳ ಮೇಲಿನ ...

news

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ದಾಖಲೆ ಏರಿಕೆ

ನವದೆಹಲಿ: ಇಂಧನ ಬೆಲೆ ಏರಿಕೆ ಕುರಿತು ವಿಪಕ್ಷಗಳು ಟೀಕೆ ಮಾಡುತ್ತಿರುವ ಬೆನ್ನಲ್ಲೇ ಮುಂಬೈಯಲ್ಲಿ ಪೆಟ್ರೋಲ್ ...

news

ನೋಟುಗಳಿಂದಲೂ ಖಾಯಿಲೆ ಬರುತ್ತಂತೆ!

ನವದೆಹಲಿ: ಎಲ್ಲಾರೂ ಮಾಡುವುದು ದುಡ್ಡಿಗಾಗಿ ಎನ್ನುವ ಈ ಕಾಲದಲ್ಲಿ ಆಘಾತ ನೀಡುವ ಸುದ್ದಿಯೊಂದು ಬಂದಿದೆ.

news

ರಿಲಯನ್ಸ್ ಜಿಯೊ ಬಗ್ಗೆ ಇಂತಹದ್ದೊಂದು ಸುದ್ದಿ ಬಂದರೆ ನಂಬಬೇಡಿ!

ನವದೆಹಲಿ: ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಅಗ್ಗದ ದರಕ್ಕೆ ಇಂಟರ್ನೆಟ್ ಸೇವೆ ಒದಗಿಸಿ ಹೊಸ ಕ್ರಾಂತಿ ...

Widgets Magazine
Widgets Magazine