Widgets Magazine
Widgets Magazine

ಬೆಂಗಳೂರಲ್ಲಿರೋ ಹೈಟೆಕ್ ಪಾರ್ಕಿಂಗ್ ವಿಶೇಷ ಗೊತ್ತಾ?

Bangalore, ಶುಕ್ರವಾರ, 2 ಡಿಸೆಂಬರ್ 2016 (09:57 IST)

Widgets Magazine

ಯಾವುದೇ ಶಾಪಿಂಗ್ ಮಾಲ್‍ನ ಯಶಸ್ಸು ವಿಶೇಷವಾಗಿ ದೊಡ್ಡ ಮಾಲ್‍ಗಳದ್ದು ಕೇವಲ ರಿಟೈಲ್ ಔಟ್‍ಲೆಟ್‍ಗಳ ಮೇಲೆ ಅವಲಂಬಿತವಾಗಿರುವುದಿಲ್ಲ. ಮಾಲ್‍ನ ಹೆಜ್ಜೆ ಸಪ್ಪಳಕ್ಕೆ  ಅಗತ್ಯವಿರುವ ಹಲವಾರು ಅಂಶಗಳಲ್ಲಿ ಪಾರ್ಕಿಂಗ್ ಸೌಲಭ್ಯವೂ ಒಂದು. ವಿಶೇಷವಾಗಿ ಇದು ಮಾಲ್ ಗಳಲ್ಲಿರುವ ಪಾರ್ಕಿಂಗ್ ಸೌಲಭ್ಯವು ಜನರ ಸಮಯವನ್ನು ಹಾಗೂ ಮತ್ತೆ ಜನರನ್ನು ಸೆಳೆಯಲು ದೊಡ್ಡ ನಗರಗಳಲ್ಲಿರುವ ದೊಡ್ಡ ಮಾಲ್‍ಗಳಿಗೆ ಸತ್ಯವಾದ ವಿಷಯ. 
 
ಇದಕ್ಕೆ ಉದಾಹರಣೆಯೆಂದರೆ, ಮಲ್ಲೇಶ್ವರಂ-ರಾಜಾಜಿನಗರದಲ್ಲಿ ಸ್ಥಾಪಿತವಾಗಿರುವ, ಬ್ರಿಗೇಡ್ ಗೇಟ್ ವೇ ಎನ್‍ಕ್ಲೇವ್‍ನಲ್ಲಿರುವ ಬೆಂಗಳೂರಿನ ಅತ್ಯಂತ ಜನಪ್ರಿಯ ಒರಾಯನ್ ಮಾಲ್.   ಈ ಮಾಲ್ ವಿಧಿವತ್ತಾಗಿ ಸಮರ್ಪಿಸಿದ ಅತ್ಯಾಧುನಿಕ ಹಾಗೂ ಉತ್ತಮವಾಗಿ ಯೋಜಿಸಿದ ಪಾರ್ಕಿಂಗ್ ಪ್ರದೇಶ ಹೊಂದಿದೆ. 
 
 ವಿಸ್ತಾರವಾದ ಪಾರ್ಕಿಂಗ್ ಒರಾಯನ್ ಮಾಲ್, ಸುಮಾರು 3,500 ಕಾರುಗಳು ಹಾಗೂ ಅದೇ ಸಂಖ್ಯೆಯ ದ್ವಿಚಕ್ರ ವಾಹನಗಳಿಗಾಗಿ ಜಗಳಮುಕ್ತ ಏಕ ಹಂತದ ಪಾರ್ಕಿಂಗ್ ಅನ್ನು ಸಮರ್ಪಿಸುತ್ತಿದೆ. ಇದರೊಂದಿಗೆ, ಬ್ರಿಗೇಡ್ ಗೇಟ್ ವೇ ಕ್ಯಾಂಪಸ್ ನಲ್ಲಿ ಆರು ಮಹಡಿಯ ಬ್ಯಾಕ್ ಅಪ್, ಬಹು ಹಂತದ ಕಾರ್ ಪಾರ್ಕ್ ದೊರೆಯುತ್ತದೆ.  ಇದು ಮಾಲ್ ಪಾರ್ಕಿಂಗ್ ನಲ್ಲಿ ಸೇರಿಸಲಾದ ಯಾವುದೇ ವಾಹನ ಹೆಚ್ಚುವರಿಯಾದಲ್ಲಿ ಭೇಟಿಗಾರನಿಗೆ ಯಾವುದೇ ಅನಾನುಕೂಲತೆ ಉಂಟಾಗದಂತೆ ಸರಿಹೊಂದಿಸುವ ಭರವಸೆ ನೀಡುತ್ತದೆ. 
 
 ಪಾರ್ಕಿಂಗ್ ಪ್ರದೇಶವು ನೆಲದ ಮೇಲೆ ವಿಶೇಷವಾದ ಪಾಲಿಯುರಿಥೇನ್ ಲೇಪನ ಹೊಂದಿದ್ದು, ಇದು ಪಾರ್ಕಿಂಗ್ ಅನುಭವವನ್ನು ಹೆಚ್ಚಿಸುತ್ತದೆ ಹಾಗೂ ವಾಹನಗಳ ಜಾರು-ಮುಕ್ತ ಚಾಲನೆಯನ್ನು ಖಾತ್ರಿಗೊಳಿಸುತ್ತದೆ. ತಂತ್ರಜ್ಞಾನ ಆಧರಿತ ಪಾರ್ಕಿಂಗ್ ನಿರ್ವಹಣೆ ಮಾಲ್‍ನ ಪಾರ್ಕಿಂಗ್ ಪ್ರದೇಶದಲ್ಲಿ ಖಾಲಿ ಸ್ಲಾಟ್‍ನ ಜಾಡುಹಿಡಿಯಲು, ಮತ್ತು ಅದರಿಂದ ಮಾಲ್ ಭೇಟಿಗಾರನಿಗೆ ಪ್ರತೀ ಸ್ಲಾಟ್ ದೊರೆಯುವಂತೆ ಮಾಡಲು ಪಾರ್ಕಿಂಗ್ ನಿರ್ವಹಣೆ ಸಿಬ್ಬಂದಿಗೆ  ಅನುವು ಮಾಡಿಕೊಡಲು ಆಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತದೆ. 
 
ಈ ಪಾರ್ಕಿಂಗ್ ನಿರ್ವಹಣಾ ವ್ಯವಸ್ಥೆ ಇಡೀ ಕಾರ್ ಪಾರ್ಕ್ ಜೊತೆಗೆ ಪ್ರದೇಶ ಹಾಗೂ ಪ್ರವೇಶ/ ನಿರ್ಗಮನ ಕೌಂಟರ್ ನಿರ್ವಹಣೆಯನ್ನು ಒಳಗೊಂಡ ಸಿಂಗಲ್ ಬೇ ಡಿಟೆಕ್ಷನ್ ಅನ್ನು ನಿರ್ವಹಿಸುವ ಸಾಫ್ಟ್‍ವೇರನ್ನೂ ಒಳಗೊಂಡಿದೆ. ಈ ವ್ಯವಸ್ಥೆಯು  ಕ್ರಿಯಾತ್ಮಕ ಚಿಹ್ನೆಗಳ ಮಾಹಿತಿಯನ್ನೂ ಒಳಗೊಂಡಿದೆ. ಪ್ರತೀ ಪಾರ್ಕಿಂಗ್ ಸ್ಲಾಟ್‍ನಲ್ಲಿ ಕೆಂಪು ಮತ್ತು ಹಸಿರು  ಇಂಡಿಕೇಟಿವ್ ಲೈಟ್‍ಗಳನ್ನು ಹೊಂದಿದ್ದು ಇದು ಸ್ವಯಂಚಾಲಿತವಾಗಿ ಲಭ್ಯತೆಯನ್ನು ಸೂಚಿಸುತ್ತದೆ.
 
 ರಸ್ತೆಗೆ ನೇರ ಪ್ರವೇಶ: 35 ಅಡಿ ಅಗಲದ ಸುರಂಗವು ಕ್ಯಾಂಪಸ್‍ನ ಹಲವಾರು ಭಾಗಗಳಿಂದ  ಮುಖ್ಯ ರಸ್ತೆಗೆ ನೇರ ಪ್ರವೇಶವನ್ನು ನೀಡುತ್ತದೆ. ಈ ಸುರಂಗವು ಒರಾಯನ್ ಮಾಲ್ ನೆಲದಡಿಗೆ ಎಲ್ಲಾ ಸೇವೆಗಳನ್ನು ಖಾತ್ರಿಗೊಳಿಸುವುದಲ್ಲದೇ ರಸ್ತೆ ಮೇಲಿನ ಸಂಚಾರವನ್ನೂ ಸುಲಭಗೊಳಿಸುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ವ್ಯವಹಾರ

news

ವಿವಾಹಿತೆ 500 ಗ್ರಾಂ, ಅವಿವಾಹಿತೆ 250 ಗ್ರಾಂ, ಪುರುಷ 100 ಗ್ರಾಂ ಚಿನ್ನ ಮಾತ್ರ ಇಟ್ಟುಕೊಳ್ಳಬಹುದಂತೆ..!

ನವದೆಹಲಿ: ವಿವಾಹಿತ ಮಹಿಳೆಯರು 500 ಗ್ರಾಂ, ಅವಿವಾಹಿತ ಯುವತಿಯರು 250 ಗ್ರಾಂ ಚಿನ್ನ ಮತ್ತು ಪುರುಷ 100 ...

news

ಈ ರೈತನ ಆದಾಯ ದಿನಕ್ಕೆ ಒಂದು ಸಾವಿರ ರೂಪಾಯಿ

ಪದವಿ ವ್ಯಾಸಂಗ ಪೂರ್ಣಗೊಂಡ ನಂತರ, ಸರ್ಕಾರಿ ಅಥವಾ ಖಾಸಗಿ ನೌಕರಿ ಮಾಡಬೇಕೋ, ಅಥವಾ ಸ್ವಯಂ ಉದ್ಯೋಗ ಮಾಡಬೇಕೊ ...

news

ಲೆನೋವೋ ’ಕೆ6 ಪವರ್’ ಸ್ಮಾರ್ಟ್ ಫೋನ್ ಬಿಡುಗಡೆ

ಚೀನಾ ಮೂಲದ ಪ್ರಮುಖ ಮೊಬೈಲ್ ಹ್ಯಾಂಡ್‌ಸೆಟ್ ತಯಾರಿಕಾ ಕಂಪನಿ ಲೆನೋವೋ ತಾಜಾ ಸ್ಮಾರ್ಟ್ ಫೋನ್ ಬಿಡುಗಡೆ ...

news

ಇಂದು ಮಧ್ಯ ರಾತ್ರಿಯಿಂದ ಪೆಟ್ರೋಲ್ ದರದಲ್ಲಿ ಏರಿಕೆ, ಡೀಸೆಲ್ ದರದಲ್ಲಿ ಇಳಿಕೆ

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯ ವಹಿವಾಟಿನ ಏರಿಳಿತಗಳಿಂದಾಗಿ ಪೆಟ್ರೋಲ್ ದರದಲ್ಲಿ 13 ಪೈಸೆ ...

Widgets Magazine Widgets Magazine Widgets Magazine