ಜಿಯೋ, ಏರಟೆಲ್‌ಗೆ ಸೆಡ್ಡು ಹೊಡೆದ ಐಡಿಯಾ....!!!

ಗುರುಮೂರ್ತಿ 

ಬೆಂಗಳೂರು, ಬುಧವಾರ, 21 ಫೆಬ್ರವರಿ 2018 (13:45 IST)

ಇತ್ತೀಚಿನ ದಿನಗಳಲ್ಲಿ ಒಂದರ ಮೇಲೊಂದು ಹೊಸ ಆಫರ್‌ಗಳನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯಲು ಏರ್‌ಟೆಲ್ ಹಾಗೂ ಜಿಯೋ ಪೈಫೋಟಿಗೆ ಬಿದ್ದಿರುವುದು ಎಲ್ಲರಿಗೂ ತಿಳಿದಿರುವಂತದ್ದೇ, ಇಗಾಗಲೇ ಹಲವು ಕಡಿಮೆ ದರದ ಆಫರ್‌ಗಳನ್ನು ನೀಡಿ ಪ್ರಚಾರದಲ್ಲಿದ್ದ ಏರ್‌ಟೆಲ್ ಮತ್ತು ಜಿಯೋಗೆ ಐಡಿಯಾ ಟಕ್ಕರ್ ನೀಡಿದ್ದು ತನ್ನ ಹೊಸ ರಿಚಾರ್ಜ್‌ ಪ್ಲಾನ್ ಅನ್ನು ಬಿಡುಗಡೆ ಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದೆ.
ಐಡಿಯಾ ತನ್ನ ಹೊಸ ಪ್ರಿಪೇಯ್ಡ್ ರಿಚಾರ್ಜ್ ಅನ್ನು ಬಿಡುಗಡೆಗೊಳಿಸಿದ್ದು, ಗ್ರಾಹಕರಿಗೆ ಬಂಫರ್ ಆಫರ್ ನೀಡಿದೆ. ಕೇವಲ 109 ರೂಪಾಯಿಗಳಿಗೆ ಅನ್‌ಲಿಮಿಟೆಡ್ ಕರೆಗಳನ್ನು ಹೊಂದಿರುವ ಈ ಪ್ಲಾನ್ 14 ದಿನಗಳ  ವ್ಯಾಲಿಡಿಟಿಯನ್ನು ಹೊಂದಿದೆ. ಇದು ಕೆಲವು ವಲಯಗಳಿಗೆ ಮಾತ್ರ ಸೀಮಿತವಾಗಿದೆ. ಅದಲ್ಲಗೇ 93 ರೂಪಾಯಿಗಳ ಇನ್ನೊಂದು ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು ಇದರಲ್ಲಿ 10 ದಿನಗಳ ವ್ಯಾಲಿಡಿಟಿ ಹಾಗೂ ಅನಿಯಮಿತ ಕರೆ ಮತ್ತು ಪ್ರತಿ ದಿನ 1 GB ಡೇಟಾವನ್ನು ಪಡೆಯಬಹುದಾಗಿದೆ.
 
ಅಧಿಕೃತ ಐಡಿಯಾ ಸೆಲ್ಯುಲರ್ ವೈಬ್‌ಸೈಟ್ ಪ್ರಾಕಾರ, 109 ರ ರಿಚಾರ್ಜ್ ಪ್ಲಾನ್, ಅನಿಯಮಿತ ಸ್ಥಳೀಯ ಹಾಗೂ ಎಸ್‌ಟಿಡಿ ಮತ್ತು ರೋಮಿಂಗ್ ಕರೆಗಳನ್ನು ಹೊಂದಿದ್ದು, 1 GB  4G/3G ಡೇಟಾವನ್ನು ಹೊಂದಿದೆ. ಅಲ್ಲದೇ ಸ್ಥಳೀಯ 100 ಎಸ್‌ಎಂಎಸ್‌ಗಳನ್ನು ಈ ಪ್ಯಾಕ್ ಒಳಗೊಂಡಿದೆ. ಇದರಲ್ಲಿ ಧ್ವನಿ ಕರೆಗಳು, ಪ್ರತಿದಿನ 250 ನಿಮಿಷಗಳು ಮತ್ತು ವಾರಕ್ಕೆ 1000 ನಿಮಿಷಗಳು ಉಚಿತವಾಗಿದ್ದು, ಇದು ಉಳಿದ ಉಚಿತ ಪ್ಯಾಕ್‌ಗೆ ಸಮನಾಗಿರುತ್ತದೆ. ಒಂದು ವೇಳೆ ಈ ಉಚಿತ ಅವಧಿಯವನ್ನು ಮೀರಿದರೆ ಪ್ರತಿ ಸೆಕೆಂಡ್‌ಗೆ 1 ಪೈಸೆಯಂತೆ ದರವನ್ನು ವಿಧಿಸಲಾಗುತ್ತದೆ ಎಂದು ಹೇಳಲಾಗಿದೆ.
 
ಈ ರೀಚಾರ್ಜ್ ಪ್ಯಾಕ್, ಆಂಧ್ರ ಪ್ರದೇಶ ಮತ್ತು  ತೆಲಂಗಾಣ, ಬಿಹಾರ್. ಜಾರ್ಕಂಡ್, ಗುಜರಾತ್, ಹರಿಯಾಣ ಮತ್ತು ಕರ್ನಾಟಕ ಸೇರಿದಂತೆ ಕೆಲವು ವಲಯಗಳಲ್ಲಿ ಮಾತ್ರವೇ ಲಭ್ಯವಿರುತ್ತದೆ. ಈ ರೀಚಾರ್ಜ್ ಈಗಾಗಲೇ ಲಭ್ಯವಿದ್ದು, ಆನ್‌ಲೈನ್‌ನಲ್ಲಿ ಇಲ್ಲವೇ ನಿಮ್ಮ ಮೈ ಐಡಿಯಾ ಆಪ್ ಮೂಲಕ ರಿಚಾರ್ಜ್ ಮಾಡಿಕೊಳ್ಳಬಹುದಾಗಿದೆ.
 
ಅಷ್ಟೇ ಅಲ್ಲ ಈ ವಾರಕ್ಕೂ ಮೊದಲು ಬಿಡುಗಡೆಯಾಗಿರುವ ಪೋಸ್ಟ್‌ಪೇಯ್ಡ್ ಯೋಜನೆಗಳಾದ ರೂ. 499, 649, 999, 389, 1,299, 1,699, 1,999,ಮತ್ತು 2,999 ಪ್ಲಾನ್ ಉಳಿದ ಬ್ರಾಂಡ್ ರಿಚಾರ್ಜ್‌ ಆಫರ್‌ಗಳಿಗೆ ಹೋಲಿಸಿದಲ್ಲಿ ಉತ್ತಮ ಎಂದೇ ಹೇಳಬಹುದು.ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ನಿಮ್ಮ ಸ್ಥಳವನ್ನು ಸುಲಭವಾಗಿ ತಲುಪುವಂತೆ ಮಾಡುತ್ತಿದೆ ಮೆಟ್ರೋ...!

ಗಾರ್ಡನ್ ಸಿಟಿಯಲ್ಲಿ ಮೆಟ್ರೋ ಪ್ರಯಾಣಿಕರು ಇನ್ನು ಮುಂದೆ ಪರದಾಡಬೇಕಿಲ್ಲ ತಮ್ಮ ಪ್ರಯಾಣವನ್ನು ಯಾವುದೇ ...

news

ಗೂಗಲ್ ಅಸಿಸ್ಟೆಂಟ್ ಹೊಸ ರೂಪದಲ್ಲಿ ವರ್ಷಾಂತ್ಯಕ್ಕೆ....!

ನೀವು ಹೊಸ ಊರಿಗೋ ದೇಶಕ್ಕೋ ಪ್ರಯಾಣಿಸಿದರೆ ಇನ್ನು ಮುಂದೆ ತಲೆಬಿಸಿ ಮಾಡಿಕೊಳ್ಳುವ ಅಗತ್ಯವಿಲ್ಲ, ಅಲ್ಲಿನ ...

news

ಇದೀಗ ಮೊಬೈಲ್‌ನಲ್ಲಿ ತ್ವರೀತ ಟಿಕೆಟ್.. ರೈಲ್ವೇ ಇಲಾಖೆಯಿಂದ ಹೊಸ ಆಪ್...!

ದಕ್ಷಿಣ ಪಶ್ಚಿಮ ರೈಲ್ವೆ (SWR) ಇದೀಗ ಹೊಸದೊಂದು ಅಪ್ಲಿಕೇಶನ್ ಅನ್ನು ಬಿಡುಗಡೆಗೊಳಿಸಿದ್ದು ಅದರ ಮೂಲಕ ...

news

ಜಿಯೊ ಫೋನ್ ಬಳಕೆದಾರರಿಗೆ ಹೊಸ ಕೊಡುಗೆ...!!

ಜಿಯೊ ತನ್ನ ಸೇವೆಯನ್ನು ಆರಂಭಿಸಿದಾಗಿನಿಂದಲೂ ತನ್ನ ಗ್ರಾಹಕರಿಗೆ ಹತ್ತು ಹಲವು ಆಫರ್‌ಗಳನ್ನು ನೀಡುತ್ತಲೇ ...

Widgets Magazine