ಈ ರೆಸ್ಟೋರೆಂಟ್‌ನಲ್ಲಿ ವೆಟರ್‌ಗಳೇ ಇಲ್ಲಾ? ನಿಮಗೆ ಗೊತ್ತೇ?

ಮುಂಬೈ, ಬುಧವಾರ, 20 ಡಿಸೆಂಬರ್ 2017 (15:28 IST)

ಇಂದು ಜಗತ್ತಿನ ಬಹು ದೊಡ್ಡ ಉದ್ಯಮಗಳಲ್ಲಿ ಹೊಟೇಲ್ ಉದ್ಯಮವು ಒಂದು ರುಚಿಕರವಾದ ಆಹಾರ, ಶುದ್ಧತೆ ಮತ್ತು ಗ್ರಾಹಕರ ತೃಪ್ತಿ ಇದೇ ಈ ಉದ್ಯಮದ ಮೂಲ ತತ್ವ. ಆದರೆ ಜಗತ್ತು ಬೆಳೆದಂತೆ ಎಲ್ಲಾ ರಂಗದಲ್ಲೂ ಪೈಫೋಟಿ ಉಂಟಾಗುತ್ತದೆ ಅದಕ್ಕಾಗಿಯೇ ಹೊಸ ಹೊಸ ಆಲೋಚನೆಗಳೊಂದಿಗೆ ವ್ಯಾಪಾರವನ್ನು ಮುನ್ನಡೆಸುವುದು ಸವಾಲಾಗಿ ಪರಿಣಮಿಸುತ್ತದೆ.
ನೀವು ವಿದೇಶಗಳಲ್ಲಿ ರೋಬೊಗಳ ಕುರಿತು ಕೇಳಿರುತ್ತೀರಿ ಇಲ್ಲವೇ ನೋಡಿರುತ್ತೀರಿ. ಆದರೆ ಭಾರತದಲ್ಲಿ ನಿಮಗೆ ಅದು ಕಾಣಸಿಗುವುದು ವಿರಳ ಅದು ರೆಸ್ಟೋರೆಂಟ್‌ಗಳಲ್ಲಿ ಅಂದರೆ ಅಚ್ಚರಿಯೇ, ಹೌದು ಈಗ ನಾವು ಹೇಳ ಹೊರಟಿರುವುದು ಒಂದು ರೆಸ್ಟೋರೆಂಟ್ ಕುರಿತು ಎಲ್ಲಾ ರೆಸ್ಟೋರೆಂಟ್‌ಗಳಿಗೆ ಹೋಲಿಸಿದರೆ ಅದು ಸ್ವಲ್ಪ ವಿಭಿನ್ನ ಹೇಗೆ ಅಂತೀರಾ ಹೇಳ್ತಿವಿ ಓದಿ.
 
ಇದು ಒಂದು ಹೈಟೆಕ್ ರೆಸ್ಟೋರೆಂಟ್ ಇಲ್ಲಿ ಸೇವೆಯನ್ನು ನೀಡಲು ಯಾವುದೇ ವೇಟರ್‌ಗಳಿಲ್ಲ ಅವರ ಬದಲಿಗೆ ಇಲ್ಲಿ ರೋಬೊಗಳು ಕಾರ್ಯನಿರ್ವಹಿಸುತ್ತವೆ. ಈ ರೋಬೊಗಳು ಗ್ರಾಹಕರು ಆರ್ಡರ್ ಮಾಡಿದ ಆಹಾರವನ್ನು ಅವರು ಕುಳಿತಲ್ಲಿಗೆ ಬಂದು ತಲುಪಿಸುತ್ತದೆ. ಇದನ್ನು ನೋಡಲು ವಿಶೇಷವಾಗಿದ್ದು ಗ್ರಾಹಕರನ್ನು ಆಕರ್ಷಿಸಲು ಈ ರೀತಿಯ ರೋಬೊಗಳನ್ನು ಈ ರೆಸ್ಟೋರೆಂಟ್‌ ಅಲ್ಲಿ ಇರಿಸಿರುವುದು ವಿಶೇಷ ಅದರಲ್ಲೂ ಇದು ಚೆನ್ನೈನಲ್ಲಿರುವುದು ಇನ್ನೂ ವಿಶೇಷ. 
 
ಈ ರೆಸ್ಟೋರೆಂಟ್ ಚೆನ್ನೈನಲ್ಲಿರುವ ಕಾಮರಾಜ್‌ ನಗರದ ಸೆಮ್ಮಂಚೇರಿ ಬಳಿ ಇದ್ದು ಮಧ್ನಾಹ್ನ 12 ಗಂಟೆಯಿಂದ ಸಂಜೆ 7.30 ರ ವರೆಗೆ ಸೇವೆಯನ್ನು ನೀಡುತ್ತದೆ. ವೀಕೆಂಡುಗಳಲ್ಲಿ ಸ್ವಲ್ಪ ಸುತ್ತಾಡಿ ರೆಸ್ಟೋರೆಂಟ್‌ನಲ್ಲಿ ಊಟಮಾಡಿ ಬರಬೇಕು ಎನ್ನುವವರಿಗೆ ಇದು ಉತ್ತಮ ಜಾಗ ಎಂದೇ ಹೇಳಬಹುದು. ರುಚಿಕರ ಆಹಾರ ವಿಭಿನ್ನ ಸೇವೆಗಳನ್ನು ಪಡೆಯುವ ಕೂತುಹಲ ನಿಮಗೆ ಇದ್ದಲ್ಲಿ ನೀವು ಒಂದು ಸಲ ಈ ರೆಸ್ಟೋರೆಂಟ್‌ಗೆ ಭೇಟಿ ನೀಡಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಜಿಯೋದಿಂದ ಟ್ರಿಬಲ್ ಕ್ಯಾಶ್‌ಬ್ಯಾಕ್ ಆಫರ್

ಮುಂಬೈ : ದೇಶದ ಅತೀ ದೊಡ್ಡ ಟೆಲಿಕಾಂ ಕಂಪನಿಯಾದ ರಿಲಯನ್ಸ್ ಜೀಯೊ ಪ್ರಾರಂಭದಿಂದಲೂ ಒಂದಲ್ಲಾ ಒಂದು ...

news

ಶಿಯೋಮಿ ಬಾರಿ ಆಫರ್: ಇಂದು ನಾಳೆ ಮಾತ್ರ

ಭಾರತದಲ್ಲಿನ ಮೊಬೈಲ್ ಮಾರುಕಟ್ಟೆಯಲ್ಲಿ ಅತೀ ಕಡಿಮೆ ದರಕ್ಕೆ ಹೆಚ್ಚಿನ ವೈಶಿಷ್ಟ್ಯಗಳನ್ನು ನೀಡುವ ಮೂಲಕ ...

news

ಗೋಡೆಗೆ ಡಿಕ್ಕಿ ಹೊಡೆದ ಮೆಟ್ರೋ ರೈಲು

ನವ ದೆಹಲಿ: ಮೆಜೆಂತಾ ಲೈನ್ ಅನ್ನು ಕಾರ್ಯಗತಗೊಳಿಸಲು ಮಂಗಳವಾರದಂದು ಪರೀಕ್ಷಾರ್ಥವಾಗಿ ಸಂಚಾರಕ್ಕೆ ಚಾಲಕ ...

news

ಜಿಎಸ್‌ಟಿ ತೆರಿಗೆ ಪಾವತಿ ಬಗ್ಗೆ ನಿಮಗೆಷ್ಟು ಗೊತ್ತು?

ನವದೆಹಲಿ: ಹೊಸ ತೆರಿಗೆ ಆಡಳಿತದ ಐಟಿ ಬೆನ್ನೆಲುಬಾಗಿರುವ ಸರಕು ಮತ್ತು ಸೇವೆಗಳ ತೆರಿಗೆ ಜಾಲವು ...

Widgets Magazine
Widgets Magazine