ಮಾರುಕಟ್ಟೆಗೆ ದಾಂಗುಡಿ ಇಟ್ಟ ಇಂಟೆಕ್ಸ್ ಎಸಿಗಳು

New Delhi, ಗುರುವಾರ, 9 ಮಾರ್ಚ್ 2017 (11:56 IST)

Widgets Magazine

ಕಂಪ್ಯೂಟರ್ ಉತ್ಪನ್ನಗಳು, ಮೊಬೈಲ್ ಫೋನ್‌ಗಳು, ಗೃಹೋಪಕರಣಗಳ ಕ್ಷೇತ್ರಕ್ಕೆ ಅಡಿಯಿಟ್ಟ ಇಂಟೆಕ್ಸ್ ಇತ್ತೀಚೆಗೆ ಹವಾ ನಿಯಂತ್ರಣ (ಎಸಿ) ಕ್ಷೇತ್ರಕ್ಕೂ ಅಡಿಯಿಟ್ಟಿದೆ. ಎರಡು ಇನ್ವರ್ಟರ್ ಎಸಿಗಳ ಜತೆಗೆ 18 ಮಾಡೆಲ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
 
ಇವುಗಳ ಬೆಲೆ ರೂ.19,999ರಿಂದ 39,999 ಶ್ರೇಣಿಯಲ್ಲಿರುತ್ತದೆ ಎಂದು ಇಂಟೆಕ್ಸ್ ನಿರ್ದೇಶಕ ನಿಧಿ ಮಾರ್ಕಂಡೇಯ ತಿಳಿಸಿದ್ದಾರೆ. ಈ ಹಿಂದೆ ಬಿಡುಗಡೆ ಮಾಡಿದ ವಾಶಿಂಗ್ ಮೆಷಿನ್‌ಗಳು, ರೆಫ್ರಿಜರೇಟರ್ ಇನ್ನಿತರೆ ಉತ್ಪನ್ನಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 2017-18ರಲ್ಲಿ ಒಂದು ಲಕ್ಷ ಎಸಿಗಳನ್ನು ಮಾರಾಟ ಮಾಡಬೇಕೆಂದು ಗುರಿ ಇಟ್ಟುಕೊಳ್ಳಲಾಗಿದೆ ಎಂದು ವಿವರ ನೀಡಿದ್ದಾರೆ.
 
ಈಗಲೂ ದೇಶೀಯ ಎಸಿ ಬಳಕೆಯಲ್ಲಿ ಬಹಳ ಕಡಿಮೆ ಇರುವ ಕಾರಣ ಈ ಮಾರುಕಟ್ಟೆಗೆ ಅಡಿಯಿಟ್ಟಿರುವುದಾಗಿ ತಿಳಿಸಿದ್ದಾರೆ. ಮುಂಬರುವ ಐದು ವರ್ಷಗಳಲ್ಲಿ ದೇಶೀಯ ಗೃಹೋಪಕರಣಗಳ ಮಾರುಕಟ್ಟೆಯಲ್ಲಿ ನಂಬರ್ ಒನ್ ಬ್ರ್ಯಾಂಡ್ ಆಗಬೇಕೆಂದು ಇಂಟೆಕ್ಸ್ ಭಾವಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಇಂಟೆಕ್ಸ್ ಎಸಿ ಇನ್ವರ್ಟರ್ ಎಸಿ ಹವಾನಿಯಂತ್ರಣ Intex Tech Launches Acs Dedicated To Homemakers

Widgets Magazine

ವ್ಯವಹಾರ

news

ಭಾರತದಲ್ಲಿ ಖತಾರ್ ವಿಮಾನಯಾನ ಸಂಸ್ಥೆ

ಭಾರತದಲ್ಲಿ ದೇಶೀಯ ವಿಮಾನಯಾನ ಸಂಸ್ಥೆ ಆರಂಭಿಸಬೇಕೆಂದು ಗಲ್ಫ್ ವಿಮಾನಯಾನ ಸಂಸ್ಥೆ ಖತಾರ್ ಏರ್‌‍ವೇಸ್ ...

news

ಟಿಸಿಎಸ್‌ನಲ್ಲಿ ಉದ್ಯೋಗ ಜಗತ್ತಿನಲ್ಲೇ ಅತ್ಯುತ್ತಮ

ದೇಶೀಯ ಮಾಹಿತಿ ತಂತ್ರಜ್ಞಾನ ದಿಗ್ಗಜ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಮುಕುಟಕ್ಕೆ ಮತ್ತೊಂದು ...

news

ಭಾರತದಲ್ಲಿ ಆಲಿಬಾಬಾ ಭಾರಿ ಬಂಡವಾಳ ಹೂಡಿಕೆ!

ಅಲಿಬಾಬಾಗೆ ಸೇರಿದ ಮೊಬೈಲ್ ವಹಿವಾಟು ಕಂಪೆನಿ ಯುಸಿ ವೆಬ್ ಭಾರತದಲ್ಲಿ ಭಾರಿ ಮೊತ್ತದ ಬಂಡವಾಳ ಹೂಡುವ ಬಗ್ಗೆ ...

news

ಮುಸ್ಲಿಂ ಮಹಿಳೆಯರಿಗಾಗಿ ನೈಕಿ ’ಪ್ರೋ ಹಿಜಾಬ್’ ಉತ್ಪನ್ನ!

ಪ್ರಮುಖ ಕ್ರೀಡಾ ಉತ್ಪನ್ನಗಳ ಕಂಪೆನಿ ನೈಕಿ....ಮುಸ್ಲಿಂ ಮಹಿಳಾ ಅಥ್ಲೀಟ್‌ಗಳಿಗಾಗಿ ವಿಶೇಷ ಪ್ರೋ ಹಿಜಾಬ್ ...

Widgets Magazine