ಗ್ರಾಹಕರ ಆಕ್ರೋಶ: ಮತ್ತೆ ಅಡುಗೆ ಸಿಲಿಂಡರ್ ದರದಲ್ಲಿ ಹೆಚ್ಚಳ

ನವದೆಹಲಿ, ಬುಧವಾರ, 1 ನವೆಂಬರ್ 2017 (16:19 IST)

ಸಿಲಿಂಡರ್ ದರವನ್ನು ಪ್ರತಿ ತಿಂಗಳು ಹೆಚ್ಚಿಸಿ ಸಬ್ಸಿಡಿ ಅಂತ್ಯಗೊಳಿಸಲು ಸರಕಾರ ತೀರ್ಮಾನಿಸಿದ ನಂತರ ಕ ಳೆದ ಜುಲೈ 2016 ರಿಂದ 19ನೇ ಬಾರಿಗೆ ಸಿಲಿಂಡರ್ ದರದಲ್ಲಿ ಹೆಚ್ಚಳಗೊಳಿಸಲಾಗಿದೆ. ಇದೀಗ ಮತ್ತೆ ಸಿಲಿಂಡರ್ ದರದಲ್ಲಿ 4.50 ರೂಪಾಯಿ ಏರಿಕೆಗೊಳಿಸಲಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆಯಿಂದಾಗಿ ಜೆಟ್ ಇಂಧನ ದರದಲ್ಲೂ ಶೇ.2 ರಷ್ಟು ಹೆಚ್ಚಳವಾಗಿದ್ದು ಕಳೆದ ಆಗಸ್ಟ್ ತಿಂಗಳಿನಿಂದ ನಾಲ್ಕನೇ ಬಾರಿ ದರ ಹೆಚ್ಚಳ ಮಾಡಲಾಗಿದೆ ಎಂದು ಸರಕಾರಿ ಸ್ವಾಮ್ಯದ ತೈಲ ಸಂಸ್ಥೆ ಮೂಲಗಳು ತಿಳಿಸಿವೆ.
 
ಸಬ್ಸಿಡಿರಹಿತ ಅಡುಗೆ ಸಿಲಿಂಡರ್ ದರ ಪ್ರತಿ ಸಿಲಿಂಡರ್‌ಗೆ 93 ರೂಪಾಯಿ ಹೆಚ್ಚಳಗೊಳಿಸಿ 742 ರೂಪಾಯಿಗಳಾಗಿವೆ. ಸಬ್ಸಿಡಿ ಸಿಲಿಂಡರ್‌ ದರ ಪ್ರತಿ ಸಿಲಿಂಡರ್‌ಗೆ 4.50 ರೂಪಾಯಿ ಹೆಚ್ಚಳಗೊಳಿಸಿ 495.69 ರೂಪಾಯಿಗಳಿಗೆ ತಲುಪಿದೆ.
 
ಕಳೆದ ವರ್ಷ ಸರಕಾರ, ಮಾರ್ಚ್‌ವರೆಗೆ ಸಿಲಿಂಡರ್ ಸಬ್ಸಿಡಿಯನ್ನು ಅಂತ್ಯಗೊಳಿಸುವಂತಾಗಲು ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಪ್ರತಿ ತಿಂಗಳು ದರವನ್ನು ಹೆಚ್ಚಿಸಲು ಅವಕಾಶ ನೀಡಿತ್ತು.  
 
ಕಳೆದ ಜೂನ್ 2016ರಲ್ಲಿ ಪ್ರತಿ ಸಿಲಿಂಡರ್ ದರ 419.18 ರೂಪಾಯಿಗಳಾಗಿತ್ತು. ಇದೀಗ ಸಿಲಿಂಡರ್ ದರದಲ್ಲಿ ಒಟ್ಟು 76.51 ರೂಪಾಯಿಗಳ ಏರಿಕೆಯಾಗಿ 495.69 ರೂಪಾಯಿಗಳಿಗೆ ತಲುಪಿದೆ 
 
ಪ್ರತಿಯೊಂದು ಕುಟುಂಬಕ್ಕೆ ವಾರ್ಷಿಕವಾಗಿ 12 ಸಿಲಿಂಡರ್‌ಗಳನ್ನು ಬಳಸುವ ಅವಕಾಶವಿದ್ದು, ತದನಂತರದ ಸಿಲಿಂಡರ್ ಅಗತ್ಯವಾದಲ್ಲಿ ಮಾರುಕಟ್ಟೆ ದರದಲ್ಲಿ ಸಬ್ಸಿಡಿರಹಿತ ಸಿಲಿಂಡರ್‌ಗಳನ್ನು ಖರೀದಿಸಬೇಕಾಗುತ್ತದೆ ಎಂದು ಸರಕಾರಿ ಸ್ವಾಮ್ಯದ ತೈಲ ಸಂಸ್ಥೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಆರ್ಥಿಕತೆ ಸುಭದ್ರವಾಗಿದ್ರೆ ಮರುಬಂಡವಾಳ ಹೂಡಿಕೆ ಘೋಷಣೆ ಯಾಕೆ?: ಜೇಟ್ಲಿ ವಿರುದ್ಧ ಚಿದಂಬರಂ ಕಿಡಿ

ನವದೆಹಲಿ: ದೇಶದ ಆರ್ಥಿಕತೆ ಸುಭದ್ರವಾಗಿದ್ರೆ ಮರುಬಂಡವಾಳ ಹೂಡಿಕೆ ಘೋಷಣೆ ಯಾಕೆ? ಮಾಡಿದ್ದೀರಿ ಎಂದು ವಿತ್ತ ...

news

ಮುಂಬೈಯಂತೆ, ಬೆಂಗಳೂರಿನಲ್ಲೂ ಲೋಕಲ್ ರೈಲು ಸಂಪರ್ಕ: ಗೋಯಲ್

ಮುಂಬೈಯಂತೆಯೇ, ಬೆಂಗಳೂರು ಶೀಘ್ರದಲ್ಲೇ ಉಪನಗರ ರೈಲ್ವೇ ನೆಟ್ವರ್ಕ್ ಆರಂಭಿಸುವ ಪ್ರಸ್ತಾವನೆ ಸರಕಾರದ ...

news

ಟೊಮೆಟೊ ಬೆಲೆ ಹೆಚ್ಚಲು ಕಾರಣ ಭಾರತ ವಿರೋಧಿ ನೀತಿ ಎಂದ ಪಾಕ್

ನವದೆಹಲಿ: ಪಾಕಿಸ್ತಾನದ ಲಾಹೋರ್ ನಲ್ಲಿ ಈಗ ಹೋಗಿ ಟೊಮೆಟೋ ಬೆಲೆ ಕೇಳಿದರೆ ಹೌಹಾರುತ್ತೀರಿ. ಅಲ್ಲಿ ಇದೀಗ ...

news

ಸುಳ್ಳೇ ಸುಳ್ಳು ಜಾಹೀರಾತು ನೀಡಿದ್ರೆ ಹುಷಾರ್ ಅಂದ್ರು ಪ್ರಧಾನಿ ಮೋದಿ!

ನವದೆಹಲಿ: ಇನ್ನು ಮುಂದೆ ಸುಳ್ಳು ಮಾಹಿತಿ ನೀಡಿರುವ ಜಾಹೀರಾತು ನೀಡಿದರೆ ತಕ್ಕ ಬೆಲೆ ತೆರಬೇಕಾಗಹುದು. ಹಾಗಂತ ...

Widgets Magazine