ಫೋನ್ ಆರ್ಡರ್ ಮಾಡಿದ ವ್ಯಕ್ತಿ ಕೈಗೆ ಬಂದಿದ್ದು ಏನು ಗೊತ್ತಾ?

ನವದೆಹಲಿ, ಗುರುವಾರ, 14 ಸೆಪ್ಟಂಬರ್ 2017 (10:53 IST)

ನವದೆಹಲಿ: ಆನ್ ಲೈನ್ ನಲ್ಲಿ ವಸ್ತುಗಳನ್ನು ಆರ್ಡರ್ ಮಾಡುವಾಗ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಸ್ಮಾರ್ಟ್ ಫೋನ್ ಆರ್ಡರ್ ವ್ಯಕ್ತಿಗೆ ಸಾಬೂನು ಕೈಗೆ ಬಂದಿದೆ.


 
ದೆಹಲಿ ಮೂಲದ ವ್ಯಕ್ತಿ ಚಿರಾಗ್  ಧವನ್ ಎಂಬವರು ಅಮೆಝೋನ್ ಆನ್ ಲೈನ್ ಶಾಪಿಂಗ್ ತಾಣದಲ್ಲಿ ಸ್ಮಾರ್ಟ್ ಫೋನ್ ಗಾಗಿ ಸೆಪ್ಟೆಂಬರ್ 7 ರಂದು ಆರ್ಡರ್ ಮಾಡಿದ್ದರು. ಸೆಪ್ಟೆಂಬರ್ 11 ರಂದು ಆರ್ಡರ್ ಅವರ ಕೈಗೆ ಬಂತು.
 
ಆದರೆ ತೆರೆದು ನೋಡಿದಾಗ ಶಾಕ್ ಕಾದಿತ್ತು. ಸ್ಮಾರ್ಟ್ ಫೋನ್ ಬದಲಿಗೆ ಬಾರ್ ಸೋಪ್ ಗಳನ್ನು ಚೆನ್ನಾಗಿ ಪ್ಯಾಕ್ ಮಾಡಿ ಕೊಡಲಾಗಿತ್ತು. ತಕ್ಷಣ ಕಸ್ಟಮರ್ ಕೇರ್ ಗೆ ಫೋನ್ ಮಾಡಿದಾಗ ಸರಿಯಾದ ಉತ್ತರ ಸಿಗಲಿಲ್ಲ ಎಂದು ಫೇಸ್ ಬುಕ್ ನಲ್ಲಿ ಚಿರಾಗ್ ಹೇಳಿಕೊಂಡಿದ್ದಾರೆ. ಫೇಸ್ ಬುಕ್ ನಲ್ಲಿ ಪ್ರಕಟಿಸಿದ ತಕ್ಷಣ ಸಾವಿರಾರು ಮಂದಿ ಲೈಕ್ಸ್ ಕೊಟ್ಟಿದ್ದು, ತಕ್ಷಣ ಎಚ್ಚೆತ್ತುಕೊಂಡ ಅಮೆಝೋನ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಚಿರಾಗ್ ಕೇಳಿದ್ದ ವಸ್ತು ನೀಡುವುದಾಗಿ ಘೋಷಿಸಿದೆ.
 
ಇದನ್ನೂ ಓದಿ.. ‘ಭಾರತದಲ್ಲಿ ರಾಹುಲ್ ಗಾಂಧಿ ಭಾಷಣ ಯಾರೂ ಕೇಳಲ್ಲ, ಅದಕ್ಕೇ ಅಮೆರಿಕಾಗೆ ಹೋಗಿದ್ದಾರೆ’
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಅಮೆಝೋನ್ ಆನ್ ಲೈನ್ ಶಾಪಿಂಗ್ Amazone Online Shopping

ವ್ಯವಹಾರ

news

ದೀಪಾವಳಿಗೆ ಬರಲಿದೆ ಏರ್ ಟೆಲ್ 4 ಜಿ ಫೋನ್! ಹೇಗಿರುತ್ತೆ? ಬೆಲೆ ಎಷ್ಟು ನೋಡಿ!

ನವದೆಹಲಿ: ರಿಲಯನ್ಸ್ ಜಿಯೋ 4 ಜಿ ಫೋನ್ ಅಗ್ಗದ ಬೆಲೆಗೆ ನೀಡಿದ ಬೆನ್ನಲ್ಲೇ ಏರ್ ಟೆಲ್ ಕೂಡಾ 4 ಜಿ ಫೋನ್ ...

news

ನಂಬಲು ಅಸಾಧ್ಯ: ಏರ್‌ಟೆಲ್‌ನಿಂದ ಕೇವಲ 5 ರೂಪಾಯಿಗೆ 4ಜಿಬಿ ಡೇಟಾ

ನವದೆಹಲಿ: ರಿಲಯನ್ಸ್ ಜಿಯೋ ಮತ್ತು ಅದರ ಅಗ್ಗ ಆಫರ್‌ಗಳಿಂದಾಗಿ ಟೆಲಿಕಾಂ ಕ್ಷೇತ್ರವೇ ತಲ್ಲಣಿಸಿರುವಾಗ, ಇತರ ...

news

ಗಗನಕ್ಕೇರಿದ ಬಂಗಾರದ ಬೆಲೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಏರುಗತಿಯಲ್ಲಿ ಸಾಗಿದೆ. ಸೋಮವಾರ ಚಿನಿವಾರಪೇಟೆಯಲ್ಲಿ ...

news

ಸದ್ಯಕ್ಕೆ ನಿಮಗೆ 200 ನೋಟು ಭಾಗ್ಯವಿಲ್ಲ!

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗಷ್ಟೇ 200 ರೂ. ನೋಟುಗಳನ್ನು ಬಿಡುಗಡೆ ಮಾಡಿತ್ತು. ಆದರೆ ...

Widgets Magazine