ಜುಕರ್‌ಬರ್ಗ್‌‌ರ ಈ ವರ್ಷ ಹೊಸ ನಿರ್ಧಾರ ಏನು ಗೊತ್ತಾ?

New Delhi, ಗುರುವಾರ, 5 ಜನವರಿ 2017 (10:14 IST)

Widgets Magazine

ಫೇಸ್‌ಬುಕ್ ಸೃಷ್ಟಿಕರ್ತ ಜುಕರ್‌ಬರ್ಗ್ ಇತ್ತೀಚೆಗೆ ಹೊಸ ಸವಾಲು ಹಾಕಿದ್ದಾರೆ. ಯಾರಿಗೆ ಅಂತಿದ್ದೀರಾ? ಸ್ವತಃ ಅವರಿಗೇ ಹಾಕಿಕೊಂಡಿದ್ದಾರೆ. ಪ್ರತಿ ವರ್ಷ ಒಂದು ಹೊಸ ಸವಾಲನ್ನು ಇಟ್ಟುಕೊಂಡು ಕೆಲಸ ಮಾಡುವುದು ಅವರ ಶೈಲಿ.
 
2017 ಮುಗಿಯುವುದರೊಳಗೆ ಅಮೆರಿಕಾದ ಪ್ರತಿ ರಾಜ್ಯದಲ್ಲೂ ಕೆಲವು ವ್ಯಕ್ತಿಗಳನ್ನು ವೈಯಕ್ತಿಕವಾಗಿ ಭೇಟಿ ಆಗಬೇಕೆಂದು ನಿರ್ಧರಿಸಿದ್ದಾರೆ. ಕಳೆದ ವರ್ಷ ತನ್ನ ಮನೆಗೆ ಕೃತಿಕ ಬುದ್ಧಿಮತ್ತೆ ಅಳವಡಿಸುವುದು, ಮಾಂಡರಿನ್ ಭಾಷೆ ಕಲಿಯುವುದು, 25 ಪುಸ್ತಕಗಳನ್ನು ಓದುವುದು, 587 ಕಿ.ಮೀ ಓಡುವಂತ ನಿರ್ಧಾರಗಳನ್ನು ತೆಗೆದುಕೊಂಡಿದ್ದರು.
 
ಈ ವರ್ಷ ಹೊರಗಡೆ ಹೋಗಿ ಸಾಧ್ಯವಾದಷ್ಟು ಜನರನ್ನು ಬೆರೆಯಬೇಕೆಂದು ನಿರ್ಧರಿಸಿದ್ದಾರೆ. ಜನ ಹೇಗೆ ಜೀವನ ನಡೆಸುತ್ತಿದ್ದಾರೆ, ಹೇಗೆ ಕೆಲಸ ಮಾಡುತ್ತಿದ್ದಾರೆ, ಭವಿಷ್ಯದ ಬಗ್ಗೆ ಏನು ಕನಸು ಕಾಣುತ್ತಿದ್ದಾರೆ ತಿಳಿದುಕೊಳ್ಳಬೇಕಿದೆಯಂತೆ. 
 
ಈ ವರ್ಷ ಪ್ರತಿಯೊಬ್ಬರ ಮಾತಿಗೂ ಪ್ರಾಧಾನ್ಯತೆ ಕೊಡುವುದು ನನ್ನ ಕೆಲಸ. ಎಲ್ಲರ ಅಭಿಪ್ರಾಯಗಳನ್ನು ವೈಯಕ್ತಿಕವಾಗಿ ಆಲಿಸುತ್ತೇನೆ. ಫೇಸ್‍ಬುಕ್, ಚಾನ್ ಜುಕರ್‌ಬರ್ಗ್ ಸಂಸ್ಥೆಗಳನ್ನು ಸಮರ್ಥವಾಗಿ ಮುನ್ನಡೆಸಲು ಇದರಿಂದ ಸಾಧ್ಯವಾಗಲಿದೆ ಎಂದಿದ್ದಾರೆ ಜುಕರ್ ಬರ್ಗ್. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ರಸ್ತೆಗಿಳಿಯಲಿದೆ ಆಂಡ್ರಾಯ್ಡ್ ’ಸ್ಮಾರ್ಟ್ ಬೈಕ್’

ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನೊಂದಿಗೆ ಕೆಲಸ ಮಾಡುವ ಸ್ಮಾರ್ಟ್‍ಫೋನ್, ಸ್ಮಾರ್ಟ್ ವಾಚ್‍ಗಳ ಬಗ್ಗೆ ...

news

ಟೊಯೊಟೊ ಕಿರ್ಲೋಸ್ಕರ್ ಕ್ಯಾಂಪಸ್ ಸಂದರ್ಶನ

ರಾಮನಗರ ಜಿಲ್ಲೆಯ ಬಿಡದಿಯ ಮೆ.ಟೊಯೊಟೊ ಕಿರ್ಲೋಸ್ಕರ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಐ.ಟಿ.ಐ. ಪಾಸಾದ ...

news

ಆನ್‌ಲೈನ್‌ನಲ್ಲಿ ಸಿಲಿಂಡರ್‌ ಬುಕ್ ಮಾಡಿದಲ್ಲಿ ಶೇ.5 ರಷ್ಟು ರಿಯಾಯಿತಿ

ನವದೆಹಲಿ: ಎಲ್‌ಪಿಜಿ ಸಿಲಿಂಡರ್‌ಗಾಗಿ ಆನ್‌ಲೈನ್‌ನಲ್ಲಿ ಬುಕ್ ಮಾಡುವ ಗ್ರಾಹಕರಿಗೆ ಶೇ.5 ರಷ್ಟು ರಿಯಾಯಿತಿ ...

news

ಫ್ಲಿಪ್‍ಕಾರ್ಟ್‌ನಲ್ಲಿ ರೂ.9,900ಕ್ಕೆ ಆಪಲ್ ಐಫೋನ್!

ಜನಪ್ರಿಯ ಆನ್‌ಲೈನ್ ರಿಟೇಲರ್ ಫ್ಲಿಪ್‌ಕಾರ್ಟ್ ಆಪಲ್ ಐಫೋನ್‍ಗಳ ಮೇಲೆ ಭಾರಿ ರಿಯಾಯಿತಿ ಪ್ರಕಟಿಸಿದೆ. ಐಫೋನ್ ...

Widgets Magazine Widgets Magazine