ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉಳಿತಾಯ ಖಾತೆಯ ಕನಿಷ್ಠ ಠೇವಣಿಯಲ್ಲಿ ಇಳಿಕೆಗೊಳಿಸಿ ಗ್ರಾಹಕರಿಗೆ ನಿರಾಳತೆ ತಂದಿದೆ. ಪಿಂಚಣಿದಾರರು, ಮಕ್ಕಳಿಗೆ ಕನಿಷ್ಠ ಠೇವಣಿಯನ್ನು ಐದು ಸಾವಿರ ರೂಪಾಯಿಗಳಿಂದ 3 ಸಾವಿರ ರೂಪಾಯಿಗಳಿಗೆ ಇಳಿಕೆ ಮಾಡಿ ಆದೇಶ ಹೊರಡಿಸಿದೆ. ಉಳಿತಾಯ ಖಾತೆ ಕನಿಷ್ಠ ಠೇವಣಿಯನ್ನು ಹೆಚ್ಚಿಸುವ ತವಕದಲ್ಲಿದ್ದ ಎಸ್ಬಿಐ ನಿರ್ಧಾರಕ್ಕೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕನಿಷ್ಠ ಠೇವಣಿಯನ್ನು ಇಳಿಕೆಗೊಳಿಸುವ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ. ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ