ಇದೀಗ, ಗ್ರಾಹಕರು ಪ್ರತಿದಿನ ಪೆಟ್ರೋಲ್‌, ಡೀಸೆಲ್‌ನ ಹೊಸ ಪರಿಷ್ಕ್ರತ ದರ ಪಾವತಿಸಬೇಕಂತೆ..!

ನವದೆಹಲಿ, ಶುಕ್ರವಾರ, 7 ಏಪ್ರಿಲ್ 2017 (18:26 IST)

Widgets Magazine
petrol

ದೇಶದ ಇಂಧನ ಮಾರುಕಟ್ಟೆಯಲ್ಲಿ ಶೇ.90 ರಷ್ಟು ಚಿಲ್ಲರೆ ವಹಿವಾಟಿನ ಮೇಲೆ ನಿಯಂತ್ರಣ ಹೊಂದಿರುವ ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು, ಪ್ರತಿದಿನ ಇಂಧನ ದರದಲ್ಲಿ ಬದಲಾವಣೆ ಮಾಡಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. 
 
ದೇಶದಲ್ಲಿಯೇ ಸರಕಾರಿ ಸ್ವಾಮ್ಯದ ಬೃಹತ್ ತೈಲ ಕಂಪೆನಿಯಾದ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಮತ್ತು ಅದರ ಸಹೋದರ ಸಂಸ್ಥೆಗಳಾದ ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಂಪೆನಿಗಳು, ಪ್ರತಿದಿನ ಪೆಟ್ರೋಲ್, ಡೀಸೆಲ್ ದರವನ್ನು ಪರಿಷ್ಕರಿಸಲು ಚಿಂತನೆ ನಡೆಸಿವೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. 
 
ವರದಿಯ ಬಗ್ಗೆ ಪ್ರತಿಕ್ರಿಯಿಸಲು ಸರಕಾರಿ ಸ್ವಾಮ್ಯದ ಕಂಪೆನಿಗಳು ನಿರಾಕರಿಸಿವೆ ಎಂದು ಮೂಲಗಳು ತಿಳಿಸಿವೆ.
 
ಇತ್ತೀಚಿನವರೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾದಲ್ಲಿ ಅದನ್ನು ಸರಿದೂಗಿಸಲು ಸುಮಾರು 15 ದಿನಗಳ ಕಾಲಾವಕಾಶ ತೆಗೆದುಕೊಳ್ಳಲಾಗುತ್ತಿತ್ತು. ಇದೀಗ ಅದರ ಬದಲಿಗೆ ಪ್ರತಿದಿನ ಕಚ್ಚಾ ತೈಲ ದರ ಆಧರಿಸಿ ಇಂಧನ ದರಗಳನ್ನು ಪರಿಷ್ಕರಿಸಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ರಾಜ್ಯಸಭೆಯಲ್ಲಿ ತಿದ್ದುಪಡಿಯಿಲ್ಲದೇ ಜಿಎಸ್‌ಟಿ ಮಸೂದೆ ಅಂಗೀಕಾರ

ನವದೆಹಲಿ: ರಾಜ್ಯಸಭೆಯಲ್ಲಿ ಯಾವುದೇ ತಿದ್ದುಪಡಿಯಿಲ್ಲದೇ ಜಿಎಸ್‌ಟಿ ಮಸೂದೆ ಅಂಗೀಕಾರವಾಗಿದೆ.

news

ನಕಲಿ ಬಾಡಿಗೆ ರಸೀದಿ: ತೆರಿಗೆ ವಂಚಕರಿಗೆ ಆದಾಯ ತೆರಿಗೆ ಇಲಾಖೆ ಶಾಕ್

ಮುಂಬೈ: ಪೋಷಕರು ಮತ್ತು ಇತರ ಸಂಬಂಧಿಕರಿಂದ ನಕಲಿ ಬಾಡಿಗೆ ರಸೀದಿ ಪಡೆದು ಆದಾಯ ತೆರಿಗೆ ರಿಟರ್ನ್ಸ್ ಉಳಿಸಲು ...

news

ಜಿಯೋ ಸಿಮ್ ಆಯ್ತು.. ಇನ್ನು ಜಿಯೋ ಡಿಟಿಎಚ್ ಸೇವೆ ಶೀಘ್ರದಲ್ಲೇ ನಿಮ್ಮ ಮುಂದೆ!

ಮುಂಬೈ: ರಿಲಯನ್ಸ್ ಸಂಸ್ಥೆ ಜಿಯೋ ಸಿಮ್ ಕಾರ್ಡ್ ದೇಶದ ಟೆಲಿಕಾಂ ಸಂಸ್ಥೆಯಲ್ಲಿ ಹೊಸ ಕ್ರಾಂತಿಯನ್ನೇ ...

news

ಕೇಂದ್ರ ಸರಕಾರದಿಂದ 2000, 500 ನೋಟು ನಿಷೇಧ ಸಾಧ್ಯತೆ

ನವದೆಹಲಿ: ಭದ್ರತಾ ಹಿತದೃಷ್ಟಿಯಿಂದಾಗಿ ಕೇಂದ್ರ ಸರಕಾರ 2000 ರೂ, 500 ರೂ ನೋಟುಗಳನ್ನು ನಿಷೇಧಿಸುವ ...

Widgets Magazine Widgets Magazine