ಗ್ರಾಹಕರೇ ಎಚ್ಚರ: ಆ.13 ರಂದು ಪೆಟ್ರೋಲ್ ಬಂಕ್‌ಗಳು ಬಂದ್

ಬೆಂಗಳೂರು, ಶನಿವಾರ, 7 ಅಕ್ಟೋಬರ್ 2017 (18:39 IST)

ಕೇಂದ್ರ ಸರಕಾರದ ನೀತಿಗಳನ್ನು ವಿರೋಧಿಸಿ ಆಕ್ಟೋಬರ್ 13 ರಂದು ಒಂದು ದಿನ ಪೆಟ್ರೋಲ್ ಬಂಕ್ ಬಂದ್‌ಗೆ ಕರೆ ನೀಡಲಾಗಿದೆ ಎಂದು ಪೆಟ್ರೋಲ್ ಮಾಲೀಕರ ಸಂಘ ತಿಳಿಸಿದೆ. 
ಅಖಿಲ ಭಾರತ ಪೆಟ್ರೋಲ್ ಮಾಲೀಕರ ಸಂಘ ಮತ್ತು ರಾಜ್ಯ ಪೆಟ್ರೋಲ್ ಬಂಕ್ ಮಾಲೀಕರ ಸಂಘ ಪೆಟ್ರೋಲ್ ಬಂಕ್ ಬಂದ್‌ಗೆ ಕರೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
 
ಕಳೆದ ವರ್ಷ ಮತ್ತು ಪೆಟ್ರೋಲ್ ಬಂಕ್ ಮಾಲೀಕರ ನಡುವೆ ನಡೆದ ತೈಲ ಕಂಪೆನಿಗಳ ಒಪ್ಪಂದ ಇಲ್ಲಿಯವರೆಗೆ ಜಾರಿಯಾಗಿಲ್ಲ. ಕೂಡಲೇ ಒಪ್ಪಂದಗಳನ್ನು ಜಾರಿಗೊಳಿಸಿ ಪೆಟ್ರೋಲ್ ಮಾಲೀಕರ ಸಂಘ ಒತ್ತಾಯಿಸಿದೆ.
 
ತೈಲ ಬೆಲೆ ನಿತ್ಯ ಪರಿಷ್ಕರಿಸುವುದರಿಂದ ಡೀಲರ್ ಗಳಿಗೆ ಮತ್ತು ಗ್ರಾಹಕರಿಗೆ ಇಬ್ಬರಿಗೂ ನಷ್ಟವಾಗುತ್ತಿದೆ. ತೈಲ ಬೆಲೆ ನಿತ್ಯ ಪರಿಷ್ಕರಣೆಯ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಯುನೈಟೆಡ್ ಪೆಟ್ರೋಲಿಯಂ ಫ್ರಂಟ್ ಆಗ್ರಹಿಸಿದೆ.
 
ಪೆಟ್ರೋಲ್, ಡೀಸೆಲ್ ಪ್ರತಿನಿತ್ಯದ ದರ ಏರಿಕೆಯಿಂದ ಪೆಟ್ರೋಲ್ ಪಂಪ್ ಮಾಲೀಕರು ಮತ್ತು ಗ್ರಾಹಕರು ಸಂಕಷ್ಟದಲ್ಲಿರುವುದರಿಂದ ಕೂಡಲೇ ಪ್ರತಿನಿತ್ಯದ ದರ ಏರಿಕೆ ಘೋಷಣೆಯನ್ನು ಹಿಂಪಡೆಯಬೇಕು ಎಂದು ಅಖಿಲ ಭಾರತೀಯ ಪೆಟ್ರೋಲ್ ಮಾಲೀಕರ ಸಂಘ ಆಗ್ರಹಿಸಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಪೆಟ್ರೋಲ್ ಬಂಕ್ ಬಂದ್ ಕೇಂದ್ರ ಸರಕಾರ ತೈಲ ಕಂಪೆನಿಗಳು Petrol Pump Central Government Oil Companies

ವ್ಯವಹಾರ

news

ಹೋಟೆಲ್ ಊಟ ಮಾಡೋರಿಗೆ ಕೊಂಚ ರಿಲೀಫ್

ನವದೆಹಲಿ: ಕೊನೆಗೂ ಕೇಂದ್ರ ಸರ್ಕಾರ ಜಿಎಸ್ ಟಿ ಯನ್ನು ಕಡಿತಗೊಳಿಸಿದೆ. ಇದರಿಂದಾಗಿ ಕೆಲವು ಅಗತ್ಯ ...

news

ಅಂಚೆಕಚೇರಿಯ ಪಿಪಿಎಫ್‌, ಕೆವಿಪಿ ಠೇವಣಿಗಳಿಗೆ ಆಧಾರ ಸಂಖ್ಯೆ ಕಡ್ಡಾಯ

ನವದೆಹಲಿ: ಅಂಚೆ ಕಚೇರಿಗಳಲ್ಲಿ ಪಿಪಿಎಫ್‌, ಎನ್‌ಎಸ್‌ಎಸ್ ಮತ್ತು ಕಿಸಾನ್ ವಿಕಾಸ್ ಪತ್ರ ಯೋಜನೆಗಳಿಗೆ ಆಧಾರ ...

news

ಆಭರಣ ವ್ಯಾಪಾರಿಗಳಿಗೆ ಪ್ರಧಾನಿ ಮೋದಿ ಬಿಗ್ ರಿಲೀಫ್

ನವದೆಹಲಿ: ಆಭರಣ ವ್ಯಾಪಾರಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಬಿಗ್ ರಿಲೀಫ್ ನೀಡಿದ್ದಾರೆ

news

ರಿಲಯನ್ಸ್ ಜಿಯೋಗೆ ಸೆಡ್ಡು ಹೊಡೆಯಲು ಏರ್ ಟೆಲ್ ಭರ್ಜರಿ ಆಫರ್

ನವದೆಹಲಿ: ಐಫೋನ್ ಬಳಕೆದಾರರಿಗಾಗಿ ರಿಲಯನ್ಸ್ ಜಿಯೋ ಭರ್ಜರಿ ಆಫರ್ ಘೋಷಿಸಿದ ಬೆನ್ನಲ್ಲೇ ಏರ್ ಟೆಲ್ ಕೂಡಾ ...

Widgets Magazine