ದೇಶದ 23 ವಿಮಾ ಕಂಪನಿಗಳಲ್ಲಿ 15,167 ಕೋಟಿ ರೂ.ಗೆ ವಾರಸುದಾರರಿಲ್ಲ- ಐಆರ್‌ಡಿಎಐ

ನವದೆಹಲಿ, ಸೋಮವಾರ, 30 ಜುಲೈ 2018 (12:51 IST)

ನವದೆಹಲಿ : ದೇಶದ ಸುಮಾರು 23 ವಿಮಾ ಕಂಪನಿಗಳಲ್ಲಿ 15,167 ಕೋಟಿ ರೂಪಾಯಿ ವಾರಸುದಾರರಿಲ್ಲದ ಹಣವಿದೆ ಎಂದು ಇಂಡಿಯನ್ ಇನ್ಶುರೆನ್ಸ್ ರೆಗ್ಯುಲೇಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ (ಐಆರ್‌ಡಿಎಐ) ಶಾಕಿಂಗ್ ವಿಚಾರವೊಂದನ್ನು ಹೊರಹಾಕಿದೆ.


ಮಾರ್ಚ್ 31, 2018ರವರೆಗೆ 15,166.47 ಕೋಟಿ ರೂ. ಬಾಕಿ ಉಳಿದಿದ್ದು, ಅದರ ಪೈಕಿ ಎಲ್‌ಐಸಿ 10,509 ಕೋಟಿ ರೂ. ಹೊಂದಿದ್ದರೆ, ಉಳಿದ 22 ಖಾಸಗಿ ಸಂಸ್ಥೆಗಳು 4,657.47 ಕೋಟಿ ರೂ. ಹೊಂದಿವೆ. ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಸೂರೆನ್ಸ್‌ ಕೊ. 807.4 ಕೋಟಿ ರೂ., ರಿಲಯನ್ಸ್ ನಿಪ್ಪಾನ್ ಲೈಫ್‌ ಇನ್ಸೂರೆನ್ಸ್ 696.12 ಕೋಟಿ ರೂ., ಎಸ್‌ಬಿಐ ಲೈಫ್ ಇನ್ಸೂರೆನ್ಸ್ 678.59 ಕೋಟಿ ರೂ. ಮತ್ತು ಎಚ್‌ಡಿಎಫ್‌ಸಿ ಸ್ಟಾಂಡರ್ಡ್‌ ಲೈಫ್‌ ಇನ್ಸೂರೆನ್ಸ್ 659.3 ಕೋಟಿ ರೂ. ವಾರಸುದಾರರಿಲ್ಲದ ವಿಮಾ ಹಣವನ್ನು ಹೊಂದಿದ್ದಾವೆ ಅಂತ ಐಆರ್‌ಡಿಎಐ ಅಂತ ಹೇಳಿದೆ


ಹಾಗೇ ವಿಮೆ ಮಾಡಿ ಮರೆತಿರುವ ಅಥವಾ ವಿಮೆ ಮಾಡಿರುವ ಬಗ್ಗೆ ವಾರಸುದಾರರಿಗೆ ಗೊತ್ತಿಲ್ಲದ ಕಾರಣ ಕಂಪನಿ ಬಳಿಯೇ ಹಣವಿದೆ. ಆನ್ಲೈನ್ ನಲ್ಲಿ ಇಂಥವರ ಹೆಸರು ಹಾಗೂ ವಾರಸುದಾರರ ಹೆಸರು ಹಾಕಿ ಶೀಘ್ರವೇ ವಾಪಸ್ ನೀಡಿ ಎಂದು ಐಆರ್ಡಿಎಐ ಸೂಚನೆ ನೀಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಗ್ರಾಹಕರಿಗೆ ಸಿಹಿ ಸುದ್ದಿ ; ಗೃಹೋಪಯೋಗಿ ವಸ್ತುಗಳ ಮೇಲಿನ ಜಿ.ಎಸ್.ಟಿ ದರ ಇಳಿಕೆ

ನವದೆಹಲಿ : ಕೇಂದ್ರ ಸರ್ಕಾರ ಗೃಹೋಪಯೋಗಿ ವಸ್ತುಗಳ ಮೇಲಿನ ಜಿ.ಎಸ್.ಟಿ ದರ ಇಳಿಕೆ ಮಾಡಿದ್ದು, ಜಿಎಸ್ ಟಿ ...

news

ಎಸ್.ಬಿ.ಐ. ಗ್ರಾಹಕರಿಗೊಂದು ಶುಭ ಸುದ್ದಿ ; ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ವಿವರ ತಿಳಿಯುವುದು ಈಗ ಇನ್ನಷ್ಟು ಸುಲಭ

ಬೆಂಗಳೂರು : ಮೊಬೈಲ್ ಬ್ಯಾಂಕಿಂಗ್ ಸೌಲಭ್ಯದ ಮೂಲಕ ಬ್ಯಾಂಕಿಂಗ್ ವ್ಯವಹಾರ ಸುಲಭಗೊಳಿಸಲು ಭಾರತೀಯ ಸ್ಟೇಟ್ ...

news

ಹೊಸ ವೈಶಿಷ್ಯತೆಯೊಂದಿಗೆ ಲಗ್ಗೆ ಇಟ್ಟ ಹೋಂಡಾ ಏವಿಯೇಟರ್...

ಜಪಾನ್‌ನ ದ್ವೀಚಕ್ರ ತಯಾರಿಕಾ ಸಂಸ್ಥೆಯಾದ ಹೋಂಡಾ ತನ್ನ ಗ್ರಾಹಕರಿಗೋಸ್ಕರ ಇಂದಿನ ಬೇಡಿಕೆಗೆ ಅನುಗುಣವಾಗಿ ...

news

ತೆರಿಗೆ ಪಾವತಿದಾರರಿಗೊಂದು ಸಿಹಿಸುದ್ದಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಕೊನೆಯ ದಿನಾಂಕ ವಿಸ್ತರಣೆ

ನವದೆಹಲಿ : ಕೇಂದ್ರೀಯ ನೇರ ತೆರಿಗೆ ಮಂಡಳಿಯು (ಸಿಬಿಡಿಟಿ) ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಕೆಗೆ ...

Widgets Magazine
Widgets Magazine