ಓಲಾ ಉಬರ್ ಟ್ಯಾಕ್ಸಿ ಡ್ರೈವರ್ ಗಳು ಪ್ರಯಾಣಿಕರ ಜೊತೆ ಕಿರಿಕ್ ಮಾಡಿಕೊಳ್ಳುವ ಮುನ್ನ ಎಚ್ಚರಿಕೆ

ನವದೆಹಲಿ, ಭಾನುವಾರ, 30 ಸೆಪ್ಟಂಬರ್ 2018 (15:04 IST)

ನವದೆಹಲಿ : ಓಲಾ ಉಬರ್ ಟ್ಯಾಕ್ಸಿ ಡ್ರೈವರ್ ಗಳು ಪ್ರಯಾಣಿಕರ ಜೊತೆ ಕಿರಿಕ್ ಮಾಡಿಕೊಳ್ಳುವ ಮುನ್ನ ಎಚ್ಚರಿಕೆಯಿಂದಿರಿ. ಯಾಕೆಂದರೆ ಪ್ರಯಾಣಿಕರು ಪೊಲೀಸ್ ಗೆ ದೂರು ಕೊಟ್ಟರೆ ಡ್ರೈವರ್ ಗಳು ತಮ್ಮ ತಪ್ಪಿಗೆ 25 ಸಾವಿರದಿಂದ 1 ಲಕ್ಷ ರೂ.ವರೆಗೆ ದಂಡ ತೆರಬೇಕಾಗುತ್ತದೆ.


ಹೌದು. ಆಪ್ ಆಧಾರಿತ ಸೇವೆಗಳಲ್ಲೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದನ್ನು ಗಮನಿಸಿರುವ ದೆಹಲಿ ಸರ್ಕಾರ, ಇಂತಹ ಕಾನೂನನ್ನು ತರಲು ನಿರ್ಧರಿಸಿದೆ. ಸಚಿವರ ನೇತೃತ್ವದ ಆಯೋಗ ಈ ಬಗ್ಗೆ ತಿಳಿಸಿದ್ದು `ಲೈಸೆನ್ಸಿಂಗ್ ಆಂಡ್ ರೆಗ್ಯುಲೇಶನ್ ಆಫ್ ಆಪ್ ಬೇಸ್ಡ್ ಎಗ್ರಿಗೇಟರ್ಸ್ ರೂಲ್ಸ್ 2017' ಮತ್ತು ಸಿಟಿ ಟ್ಯಾಕ್ಸಿ ಸ್ಕೀಂ 2017 ಅನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.


ಈ ನೀತಿ ಜಾರಿಗೆ ಬಂದ ಕೂಡಲೇ ಆಪ್ ಬೇಸ್ಡ್ ಕ್ಯಾಬ್ ಗಳನ್ನು ಸಾರಿಗೆ ಇಲಾಖೆಯಲ್ಲಿ ನೋಂದಣಿ ಮಾಡಬೇಕಾಗುತ್ತದೆ. ಜೊತೆಗೆ ಸಾರಿಗೆ ಇಲಾಖೆಯ ಗ್ರಾಹಕ ಸೇವಾ ಕೇಂದ್ರದ ಜೊತೆ ಸಂಪರ್ಕ ಸಾಧಿಸುವ ಜಿಪಿಎಸ್ ಅನ್ನೂ ಅಳವಡಿಸಬೇಕಾಗುತ್ತದೆ. ಹೀಗಾಗಿ ಡ್ರೈವರ್ ಎಲ್ಲೇ ಹೋದರೂ ಸಾರಿಗೆ ಇಲಾಖೆ ನಿಗಾದಲ್ಲೇ ಇರುತ್ತಾನೆ. ಹೀಗಾಗಿ ಆಪ್ ಕಂಪನಿಗಳೂ ತನ್ನ ಚಾಲಕನನ್ನು ರಕ್ಷಿಸುವ ಪರಿಸ್ಥಿತಿಯಲ್ಲಿ ಇರುವುದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ ಐಡಿಯಾ ಬಿಡುಗಡೆ ಮಾಡಿದೆ ಹೊಸ ಪ್ಲಾನ್

ಬೆಂಗಳೂರು : ಜಿಯೋ ಹಾಗೂ ಏರ್ಟೆಲ್ ಗೆ ಸೆಡ್ಡು ಹೊಡೆಯಲು ವೊಡಾಫೋನ್ ನಡುವೆ ಒಪ್ಪಂದದೊಂದಿಗೆ ಐಡಿಯಾ ಹೊಸ ...

news

ಹೊಸ ಐಫೋನ್ ಖರೀದಿಸುವ ಏರ್ ಟೆಲ್ ಗ್ರಾಹಕರು ಹುಷಾರ್!

ನವದೆಹಲಿ: ಭಾರತದಲ್ಲಿ ಹೊಸ ಐಫೋನ್ ಖರೀದಿಸುವ ಏರ್ ಟೆಲ್ ಗ್ರಾಹಕರು ಮಹತ್ವದ ವಿಚಾರವೊಂದನ್ನು ...

news

ಮುಂಬೈನಲ್ಲಿ ಪೆಟ್ರೋಲ್ ಬೆಲೆ ಮತ್ತಷ್ಟು ಏರಿಕೆ!

ಮುಂಬೈ: ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗುತ್ತಿದ್ದು ಮುಂಬೈನಲ್ಲಿ ಇಂದು (ಸೋಮವಾರ) ಪೆಟ್ರೋಲ್ ಬೆಲೆ ...

news

ಸಣ್ಣ ಉಳಿತಾಯಗಳ ಮೇಲಿನ ಬಡ್ಡಿ ದರ ಹೆಚ್ಚಳ

ನವದೆಹಲಿ: ಸರಕಾರವು ಸಾರ್ವಜನಿಕ ಭವಿಷ್ಯ ನಿಧಿ ಹಾಗೂ ರಾಷ್ಟ್ರೀಯ ಉಳಿತಾಯ ಪತ್ರ ಸೇರಿದಂತೆ ಸಣ್ಣ ಉಳಿತಾಯಗಳ ...

Widgets Magazine