Widgets Magazine
Widgets Magazine

ಮೇ 14 ರಂದು ರಾಜ್ಯದಲ್ಲಿ ಪೆಟ್ರೋಲ್ ಬಂಕ್ ಬಂದ್

ಬೆಂಗಳೂರು, ಗುರುವಾರ, 4 ಮೇ 2017 (15:13 IST)

Widgets Magazine

ಪೆಟ್ರೋಲ್ ಬಂಕ್ ಮಾಲೀಕರ ಬೇಡಿಕೆ ಈಡೇರಿಸುವಲ್ಲಿ ಮೀನಾಮೇಷ ಎಣಿಸುತ್ತಿರುವುದರಿಂದ ಮೇ 14 ರಂದು ರಾಜ್ಯದ ಪೆಟ್ರೋಲ್ ಬಂಕ್‌ಗಳನ್ನು ಬಂದ್ ಮಾಡಲಾಗುವುದು ಎಂದು ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಅಧ್ಯಕ್ಷ ಡಿ.ಆರ್,ರವೀಂದ್ರ ಹೇಳಿದ್ದಾರೆ.
 
ಪೆಟ್ರೋಲ್ ಬಂಕ್ ಮಾಲೀಕರ ಕಮಿಷನ್ ಸೇರಿದಂತೆ ಇತರ ಬೇಡಿಕೆಗಳನ್ನು ಸರಕಾರ ಈಡೇರಿಸುತ್ತಿಲ್ಲ. ಕೇವಲ ಭರವಸೆಗಳನ್ನು ನೀಡುತ್ತಿದೆ. ಇದನ್ನು ವಿರೋಧಿಸಿ ಮೇ 10 ರಿಂದ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಯನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
 
ಪೆಟ್ರೋಲ್ ಬಂಕ್‌ಗಳ ಖರ್ಚು ವೆಚ್ಚುಗಳಿಗೆ ಹೋಲಿಸಿ ಕೇಂದ್ರ ಸರಕಾರ ಕಮಿಷನ್ ನೀಡಿದಲ್ಲಿ ಮಾತ್ರ ಪ್ರತಿಭಟನೆಯನ್ನು ಹಿಂಪಡೆಯಲಾಗುವುದು ಎಂದರು.
 
ಒಂದು ವೇಳೆ, ಮೇ 14 ರ ಪ್ರತಿಭಟನೆಯ ನಂತರವೂ ಕೇಂದ್ರ ಸರಕಾರ ಮಣಿಯದಿದ್ದಲ್ಲಿ ಮುಂಬರುವ ದಿನಗಳಲ್ಲಿ ತೀವ್ರವಾದ ಪ್ರತಿಭಟನೆ ನಡೆಸುತ್ತೇವೆ ಎಂದು ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಅಧ್ಯಕ್ಷ ಡಿ.ಆರ್,ರವೀಂದ್ರ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ವ್ಯವಹಾರ

news

ಹೊಸದೊಂದು ಫೀಚರ್ ಪರಿಚಯಿಸಿದ ವಾಟ್ಸಾಪ್

ಜಗತ್ತಿನ ಲೀಡಿಂಗ್ ಸಾಮಾಜಿಕ ಜಾಲತಾಣಗಳಲ್ಲೊಂದಾದ ವಾಟ್ಸಾಪ್, ಚಾಟಿಂಗ್ ವ್ಯವಸ್ಥೆಯನ್ನ ಮತ್ತಷ್ಟು ಸುಲಲಿತ ...

news

ಇಂದಿನಿಂದ ಪೆಟ್ರೋಲ್ ಬೆಲೆ ಪ್ರತಿ ದಿನ ನಿಗದಿ

ನವದೆಹಲಿ: ಇನ್ನು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ತರಕಾರಿ ಹಾಗೂ ಇತರ ದಿನಸಿ ಸಾಮಾನುಗಳ ಬೆಲೆಯಂತೆ ಪ್ರತಿ ...

news

2030 ರ ವೇಳೆಗೆ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಕಾರುಗಳ ಮಾರಾಟವೇ ಇಲ್ಲ!

ನವದೆಹಲಿ: ಇಂಧನ ಉಳಿತಾಯ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಡಲಿದೆ. 2030 ರ ವೇಳೆಗೆ ...

news

ಭಾರತ ಮೂಲದ ಗೂಗಲ್ ಸಿಇಓ ಸುಂದರ್ ಪಿಚೈ ಸಂಬಳ ಎಷ್ಟು ಗೊತ್ತಾ..?

44 ವರ್ಷದ ಭಾರತ ಮೂಲದ ಸಿಇಓ ಸುಂದರ್ ಪಿಚೈ ಗೂಗಲ್ ಸಂಸ್ಥೆಯನ್ನ ಯಶಸ್ಸಿನ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ. ...

Widgets Magazine Widgets Magazine