ಭಾರತೀಯರನ್ನು ಅವಹೇಳನ ಮಾಡಿದ್ದು ‘ಸಂವಹನ ದೋಷದಿಂದ ಎಂದ ಒಪ್ಪೊ ಸಂಸ್ಥೆ

NewDelhi, ಶನಿವಾರ, 22 ಜುಲೈ 2017 (09:06 IST)

ನವದೆಹಲಿ: ಚೀನಾ ಮೂಲದ ಮೊಬೈಲ್ ಸಂಸ್ಥೆ ಪಂಜಾಬ್ ನ ಕಚೇರಿಯಲ್ಲಿ ಚೀನಾ ಅಧಿಕಾರಿಗಳು ಭಾರತೀಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರೆಂದು ವರದಿಯಾಗಿತ್ತು. ಇಷ್ಟೆಲ್ಲಾ ರದ್ದಾಂತವಾಗಿದ್ದು ಸಂವಹನ ಸಮಸ್ಯೆಯಿಂದ ಎಂದು ಒಪ್ಪೊ ಸಂಸ್ಥೆ ಹೇಳಿಕೊಂಡಿದೆ.


 
ಫೇಸ್ ಬುಕ್ ನಲ್ಲಿ ಚೀನಾ ಅಧಿಕಾರಿಯೊಬ್ಬರು ಭಾರತೀಯರು ಭಿಕ್ಷುಕರು ಎಂದು ಕಾಮೆಂಟ್ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೆ, ಪಂಜಾಬ್ ವಿಭಾಗದ ಕಚೇರಿಯಲ್ಲಿ ಸರ್ವಿಸ್ ಮ್ಯಾನೇಜರ್ ಮೇಲೆ ಚೀನಾ ಮೂಲದ ಅಧಿಕಾರಿಗಳು ದಬ್ಬಾಳಿಕೆ ನಡೆಸಿದ್ದಲ್ಲದೆ, ವೇತನ ಹೆಚ್ಚಳಕ್ಕಾಗಿ ಬೇಡಿಕೆಯಿಟ್ಟಿದ್ದಕ್ಕೆ ಭಾರತೀಯರಿಗೆ ಹಣದ ದುರಾಸೆ ಎಂದಿದ್ದರು ಎಂದು ವರದಿಯಾಗಿತ್ತು.
 
ಈ ಹಿನ್ನಲೆಯಲ್ಲಿ ಆ ವಿಭಾಗದ ಕಚೇರಿಯ ಎಲ್ಲಾ ನೌಕರರು ಸಾಮೂಹಿಕವಾಗಿ ರಾಜೀನಾಮೆ ಪತ್ರ ನೀಡಿದ್ದರು. ಇದೀಗ ಪ್ರಮಾದ ಅರಿತ ಸಂಸ್ಥೆ ಇದೆಲ್ಲಾ ಸಂವಹನ ಕೊರತೆಯಿಂದ ಉಂಟಾದ ಸಮಸ್ಯೆ ಎಂದು ತಿಪ್ಪೆ ಸಾರಿದೆ. ಅಲ್ಲದೆ, ಪಂಜಾಬ್ ಸರ್ವಿಸ್ ಮ್ಯಾನೇಜರ್ ಕೂಡಾ ನಾವ್ಯಾರೂ ಕೆಲಸ ಬಿಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
 
ಇದನ್ನೂ ಓದಿ..  ಸುಖ ಲೈಂಗಿಕ ಜೀವನಕ್ಕೆ ಮೂರು ಸೂತ್ರಗಳು
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಒಪ್ಪೊ ಸಂಸ್ಥೆ ಚೀನಾ ಅಧಿಕಾರಿ ಭಾರತೀಯರು ರಾಷ್ಟ್ರೀಯ ಸುದ್ದಿಗಳು Indians China Officer National News Oppo Mobile Company

ವ್ಯವಹಾರ

news

ಜಿಯೋ ಉಚಿತ ಮೊಬೈಲ್`ನಲ್ಲಿ ಏನೆಲ್ಲ ಇದೆ ಗೊತ್ತಾ..?

ಉಚಿತ ಡೇಟಾ ನೀಡುವ ಮೂಲಕ ಮೊಬೈಲ್ ಡೇಟಾ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದ ರಿಯಲಯನ್ಸ್ ಜಿಯೋ ಇದೀಗ ಉಚಿತ ...

news

ಕೊನೆಗೂ ಲಾಂಚ್ ಆಯ್ತು ಉಚಿತ ರಿಲಯನ್ಸ್ ಜಿಯೋ ಫೋನ್.. ಏನೇನು ಇದೆ ಇದರಲ್ಲಿ?

ಮುಂಬೈ: ನಿರೀಕ್ಷೆಯಂತೇ ಮುಕೇಶ್ ಅಂಬಾನಿ ತಮ್ಮ ರಿಲಯನ್ಸ್ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ರಿಲಯನ್ಸ್ ಜಿಯೋ ...

news

ರಿಲಯನ್ಸ್ ಜಿಯೋ ಫೋನ್ ಇಂದು ಘೋಷಣೆ ಮಾಡ್ತಾರಾ ಮುಕೇಶ್ ಅಂಬಾನಿ?

ಮುಂಬೈ: ಬಹುದಿನಗಳಿಂದ ಗ್ರಾಹಕರು ಕಾಯುತ್ತಿರುವ ರಿಲಯನ್ಸ್ ಸಂಸ್ಥೆಯ ಜಿಯೋ 4 ಜಿ ಅಗ್ಗದ ಮೊಬೈಲ್ ಫೋನ್ ...

news

ಅವಹೇಳನ ಮಾಡಿದ ಚೀನಾ ಅಧಿಕಾರಿಗೆ ಭಾರತೀಯ ನೌಕರರಿಂದ ಸರಿಯಾಗೇ ಸಿಕ್ತು!

ನವದೆಹಲಿ: ಭಾರತದಲ್ಲಿ ಜನಪ್ರಿಯವಾಗಿರುವ ಒಪ್ಪೊ ಮೊಬೈಲ್ ಸಂಸ್ಥೆ ಚೀನಾ ಮೂಲದ ಸಂಸ್ಥೆಯಾಗಿದೆ. ಇದಕ್ಕೆ ...

Widgets Magazine