Widgets Magazine
Widgets Magazine

ನಿನ್ನೆ ರಾತ್ರಿನೇ ಪೆಟ್ರೋಲ್ ನೋ ಸ್ಟಾಕ್...!

ಬೆಂಗಳೂರು, ಗುರುವಾರ, 3 ನವೆಂಬರ್ 2016 (10:00 IST)

Widgets Magazine

ಬೆಂಗಳೂರು: ಇಂದು ಮತ್ತು ನಾಳೆ ಅಖಿಲ ಕರ್ನಾಟಕ ಪೆಟ್ರೋಲಿಯಂ ಡೀಲರ್ಸ್ ಫೆಡರೇಷನ್ ಸರಕಾರಿ ಸ್ವಾಮ್ಯದ 3 ತೈಲ ಕಂಪನಿಗಳಿಂದ ಇಂಧನವನ್ನು ಖರೀದಿಸದೆ ಮುಷ್ಕರ ನಡೆಸಲು ನಿರ್ಧರಿಸಿದೆ. ಪರಿಣಾಮ ವಾಹನ ಸವಾರರು ಎರಡು ದಿನಗಳ ಕಾಲ ತೀವ್ರ ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಪೆಟ್ರೋಲ್ ಬಂಕ್ ಮುಷ್ಕರದ ಸುದ್ದಿ ಮಾಧ್ಯಮದಲ್ಲಿ ಬಿತ್ತರವಾಗುತ್ತಿದ್ದಂತೆ ವಾಹನ ಸವಾರರು ಪೆಟ್ರೊಲ್ ಬಂಕ್ ಎದುರು ಜಮಾಯಿಸಲು ಆರಂಭಿಸಿದ್ದರು. ರಾಜ್ಯದ ಕೆಲವು ಕಡೆ ರಾತ್ರಿ 12 ರವರೆಗೂ ಪೆಟ್ರೊಲ್ ಬಂಕ್ ಎದುರು ಕ್ಯೂ ಇದ್ದ ದೃಶ್ಯ ಕಂಡು ಬಂದಿತು. ಕೆಲವು ಪೆಟ್ರೋಲ್ ಬಂಕ್ ನೋ ಸ್ಟಾಕ್ ಎಂದು ಬೋರ್ಡ್ ಹಾಕಿದ್ದವು.
 
ದೇಶದಲ್ಲೇ ಮೊದಲ ಬಾರಿಗೆ ಪೆಟ್ರೋಲ್ ಡೀಲರ್ಸ್‌‌ಗಳೆಲ್ಲ ಒಟ್ಟಾಗಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಈ ಮುಷ್ಕರದ ಹಿನ್ನೆಲೆಯಲ್ಲಿ ಸರ್ಕಾರಿ ರಜಾದಿನಗಳು, 2ನೇ ಶನಿವಾರ ಹಾಗೂ ಭಾನುವಾರ ಕೂಡ ಬಂಕ್​ಗಳನ್ನು ತೆರೆಯದಿರುವಂತೆ ನಿರ್ಧರಿಸಿದ್ದಾರೆ. ಕಮಿಷನ್ ಹೆಚ್ಚಳ, ಲ್ಯೂಬ್ ಡಂಪಿಂಗ್ ಸ್ಥಗಿತ, ಅಧಿಕಾರಿಗಳ ಕಿರುಕುಳ ತಡೆ, ಪೆಟ್ರೋಲಿಯಂ ಉತ್ಪನ್ನಗಳ ಸಾಗಣೆ ವೆಚ್ಚ ಹೆಚ್ಚಳ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಸಂಘ ಆಗ್ರಹಿಸಿ ಈ ಪ್ರತಿಭಟನೆ ಹಮ್ಮಿಕೊಂಡಿದೆ.
 
ಇಂದು ಮತ್ತು ನಾಳೆ(3&4) ಡೀಲರ್ಸ್ ಗಳು ತೈಲ ಕಂಪನಿಯಿಂದ ತೈಲ ಖರೀದಿಯನ್ನಷ್ಟೇ ಸ್ಥಗಿತಗೊಳಿಸಲಿವೆ. ಈ ಹಿನ್ನೆಲೆಯಲ್ಲಿ ಈ ಎರಡು ದಿನ ಬಂಕ್ ಗಳಲ್ಲಿ ಸಂಗ್ರಹವಾಗಿರುವ ಪೆಟ್ರೋಲ್, ಡಿಸೇಲ್ ಗ್ರಾಹಕರಿಗೆ ಲಭ್ಯವಾಗಲಿದೆ. ಆದರೆ ನ.5 ರಿಂದ ಪ್ರಾರಂಭವಾಗುವ ಅನಿರ್ದಿಷ್ಟಾವಧಿ ಮುಷ್ಕರದಿಂದ ಗ್ರಾಹಕರಿಗೆ ಸ್ವಲ್ಪಮಟ್ಟಿನ ತೊಂದರೆಯಾಗಬಹುದು. ಏಕೆಂದರೆ ಆ ದಿನಗಳಂದು ಒಂದು ಪಾಳಿಯಲ್ಲಿ ಮಾತ್ರ ಬಂಕ್ ಕಾರ್ಯನಿರ್ವಹಿಸಲಿದೆ. ಅಂದರೆ ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ಮಾತ್ರ ಬಂಕ್‌ಗಳು ತೆರೆದಿರುವುದರಿಂದ ದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದೆ. ಬೇಡಿಕೆ ಈಡೇರುವವರೆಗೂ ರಾಜ್ಯಾದ್ಯಂತ ಪೆಟ್ರೋಲ್ ಬಂಕ್‌ಗಳು ಕೇವಲ ಒಂದು ಪಾಳಿಯಲ್ಲಿ ಮಾತ್ರ ತೆರೆದಿರಲಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ವ್ಯವಹಾರ

news

ಹದಿಹರಿಯದವರಿಗೊಂದು ಲೈಫ್ ಸ್ಟೇಜ್ ಆ್ಯಪ್

ನವದೆಹಲಿ: ಕಂಪ್ಯೂಟರ್ ಮೂಲಕವಷ್ಟೇ ಆಪರೇಟ್ ಮಾಡಬಹುದಾದ ಫೇಸ್ಬುಕ್ ಸಂಸ್ಥೆಯ ಲೈಫ್ ಸ್ಟೇಜ್ ಪ್ರೊಗ್ರಾಮ್ ...

news

ಪಾಕಿಸ್ತಾನಕ್ಕೆ ಭಾರತದೊಂದಿಗೆ ವ್ಯಾಪಾರಿ ಸಂಬಂಧ ಬೇಡ್ವಂತೆ...!

ಇಸ್ಲಾಮಾಬಾದ್: ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ದಿನೇ ದಿನೆ ಹದಗೆಡುತ್ತಿದ್ದು, ...

news

ದೀಪಾವಳಿ ಹಬ್ಬಕ್ಕೆ ಏರಟೆಲ್ನಿಂದ ಉಚಿತ 2ಜಿಬಿ 4ಜಿ ಇಂಟರ್ನೆಟ್

ದಿನ ಬೆಳಗಾಗುವುದರೊಳಗೆ ದೀಪಾವಳಿ ಹಬ್ಬ ಎದುರಾಗುತ್ತದೆ. ಈ ಬೆಳಕಿನ ಹಬ್ಬವನ್ನು ಇನ್ನಷ್ಟು ರಂಗಾಗಿಸಲು ...

news

ತಾಳಗುಪ್ಪ-ಹೊನ್ನಾವರ ರೈಲು ಮಾರ್ಗ ಸರ್ವೇ ಪೂರ್ಣ, ಮುಂದಿನ ಬಜೆಟ್‌ನಲ್ಲಿ ಅನುಮೋದನೆ?

ಬೆಂಗಳೂರು: ಎಲ್ಲ ಅಂದುಕೊಂಡಂತೆ ಸಾಗಿದರೆ ಮುಂಬರುವ ಕೇಂದ್ರ ರೇಲ್ವೆ ಬಜೆಟ್ ನಲ್ಲಿ ಹಲವು ವರ್ಷಗಳಿಂದ ...

Widgets Magazine Widgets Magazine Widgets Magazine