Widgets Magazine Widgets Magazine

ಭಾರತದಲ್ಲಿ ಖತಾರ್ ವಿಮಾನಯಾನ ಸಂಸ್ಥೆ

New Delhi, ಗುರುವಾರ, 9 ಮಾರ್ಚ್ 2017 (11:51 IST)

Widgets Magazine

ಭಾರತದಲ್ಲಿ ಸಂಸ್ಥೆ ಆರಂಭಿಸಬೇಕೆಂದು ಗಲ್ಫ್ ವಿಮಾನಯಾನ ಸಂಸ್ಥೆ ಖತಾರ್ ಏರ್‌‍ವೇಸ್ ನಿರ್ಧರಿಸಿದೆ. ಗಲ್ಫ್ ಸರಕಾರಿ ಆರ್ಥಿಕ ಸಂಸ್ಥೆ (ವೆಲ್ತ್ ಫಂಡ್) ಸ್ಟೇಟ್ ಆಫ್ ಖತಾರ್ ಜತೆಗೆ ಈ ಸಂಸ್ಥೆಯನ್ನು ಆರಂಭಿಸಬೇಕೆಂಬುದು ತಮ್ಮ ಯೋಜನೆ ಎಂದು ಅನಿ, ಬರ್ಲಿನ್‌ನಲ್ಲಿ ನಡೆದ ಸಮಾರಂಭದಲ್ಲಿ ಖತಾರ್ ಏರ್‌ವೇಸ್ ಮುಖ್ಯ ಎಗ್ಜಿಕ್ಯೂಟೀವ್ ಅಕ್ಬರ್ ಆಲ್ ಬಕರ್ ತಿಳಿಸಿದ್ದಾರೆ.
 
ದೇಶೀಯ ವಿಮಾನಯಾನ ಕ್ಷೇತ್ರಕ್ಕೆ ಶೇಕಡಾ ನೂರರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ ನೀಡಬೇಕೆಂದು ಭಾರತ ಸರಕಾರ ನಿರ್ಧರಿಸಿದ ಬಳಿಕ, ಮೊದಲು ಬರುತ್ತಿರುವುದು ಖತಾರ್ ಏರ್‌‍ವೇಸ್. ಭಾರತ ಸರಕಾರ ದೇಶೀಯ ವಿಮಾನಯಾನ ಸಂಸ್ಥೆಗಳನ್ನು ಆರಂಭಿಸಲು ಎಫ್‌ಡಿಐಗಳಿಗೆ ಅನುಮತಿ ನೀಡಿದ ಕಾರಣ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಬಕರ್ ತಿಳಿಸಿದ್ದಾರೆ.
 
ದೇಶೀಯ ವಿಮಾನಯಾನ ಕ್ಷೇತ್ರದಲ್ಲಿ ವಿದೇಶಿ ವಿಮಾನಯಾನ ಕಂಪೆನಿಗಳು ಇತರೆ ಸಂಸ್ಥೆಗಳ ಜತೆ ಕೈಜೋಡಿಸಿ ಶೇ.100ರಷ್ಟು ಬಂಡವಾಳ ಹೂಡಬಹುದೆಂದು ಇತ್ತೀಚೆಗೆ ನಿಯಮಗಳನ್ನು ಸಡಿಲಿಸಿದ ಕಾರಣ, ಖತಾರ್ ಈ ನಿರ್ಧಾರ ಕೈಗೊಂಡಿದೆ. ಆದರೆ ವಿಮಾನಯಾನ ಸಂಸ್ಥೆ ನಿರ್ವಾಹಕರು ಪರವಾನಗಿ ನಿಯಮಗಳನ್ನು ಸಡಿಲಿಸಬೇಕಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ವ್ಯವಹಾರ

news

ಟಿಸಿಎಸ್‌ನಲ್ಲಿ ಉದ್ಯೋಗ ಜಗತ್ತಿನಲ್ಲೇ ಅತ್ಯುತ್ತಮ

ದೇಶೀಯ ಮಾಹಿತಿ ತಂತ್ರಜ್ಞಾನ ದಿಗ್ಗಜ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಮುಕುಟಕ್ಕೆ ಮತ್ತೊಂದು ...

news

ಭಾರತದಲ್ಲಿ ಆಲಿಬಾಬಾ ಭಾರಿ ಬಂಡವಾಳ ಹೂಡಿಕೆ!

ಅಲಿಬಾಬಾಗೆ ಸೇರಿದ ಮೊಬೈಲ್ ವಹಿವಾಟು ಕಂಪೆನಿ ಯುಸಿ ವೆಬ್ ಭಾರತದಲ್ಲಿ ಭಾರಿ ಮೊತ್ತದ ಬಂಡವಾಳ ಹೂಡುವ ಬಗ್ಗೆ ...

news

ಮುಸ್ಲಿಂ ಮಹಿಳೆಯರಿಗಾಗಿ ನೈಕಿ ’ಪ್ರೋ ಹಿಜಾಬ್’ ಉತ್ಪನ್ನ!

ಪ್ರಮುಖ ಕ್ರೀಡಾ ಉತ್ಪನ್ನಗಳ ಕಂಪೆನಿ ನೈಕಿ....ಮುಸ್ಲಿಂ ಮಹಿಳಾ ಅಥ್ಲೀಟ್‌ಗಳಿಗಾಗಿ ವಿಶೇಷ ಪ್ರೋ ಹಿಜಾಬ್ ...

news

ಏರ್‌ಟೆಲ್ ಹೊಸ ಆಫರ್ ರೂ.150ಕ್ಕೆ ಮಂತ್ಲಿ ಪ್ಲಾನ್!

ರಿಲಯನ್ಸ್ ಜಿಯೋ ಸ್ಪರ್ಧೆಯನ್ನು ಎದುರಿಸಲು ಏರ್‌ಟೆಲ್ ಹೊಸ ಸಾಹಸಕ್ಕೆ ಕೈಹಾಕುತ್ತಿದೆ. ಈಗಾಗಲೆ ರೂ.345ರ ...

Widgets Magazine Widgets Magazine